30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೈರೋಳ್ತಡ್ಕ -ಬಂದಾರು 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂದಾರು : ಶಿವಗೆಳೆಯರ ಬಳಗ ಹಾಗೂ ನವ್ಯಶ್ರೀ ಯುವತಿ ಮಂಡಲ (ರಿ.) ಮೈರೋಳ್ತಡ್ಕ -ಬಂದಾರು ಇವುಗಳ ಸಂಯುಕ್ತ ಆಶ್ರಯದಲ್ಲಿ 31 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ 14 ರಂದು ಮೈರೋಳ್ತಡ್ಕ ವಠಾರದಲ್ಲಿ ಸಂಭ್ರಮದಿಂದ ನೆರವೇರಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಭೇಟಿ ನೀಡಿ ಶ್ರೀ ದೇವರ ಪ್ರಸಾದ ಹಾಗೂ ಸಮಿತಿಯವರ ಗೌರವಾರ್ಪಣೆ ಸ್ವೀಕರಿಸಿದರು.

ಶಿವಾಜಿ ಫ್ರೆಂಡ್ಸ್ ನೇತೃತ್ವದ ಶಿವನಗರ ಸರ್ಕಲ್ ಬಳಿಯಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚಣೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಶ್ರೀದೇವಿ ಪ್ರತಿಷ್ಠಾನ ಅಧ್ಯಕ್ಷ ಕಿರಣ್ ಚಂದ್ರ ಪುಷ್ಪಗಿರಿ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಹಾಗೂ ಅನೇಕ ಗಣ್ಯರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶಿವ ಗೆಳೆಯರ ಬಳಗದ ಅಧ್ಯಕ್ಷರಾದ ಜಗದೀಶ್ ಗೌಡ ಕೊಂಬೇಡಿ, ಉಪಾಧ್ಯಕ್ಷರಾದ ದಾಮೋದರ ಗೌಡ ಚಾಕೋಟೆದಡಿ, ಕಾರ್ಯದರ್ಶಿ ಚೇತನ್ ಗೌಡ ಕುರಿಯಾಳ, ಜೊತೆ ಕಾರ್ಯದರ್ಶಿ ಚಿದಾನಂದ ಗೌಡ ಪಾಂಜಾಳ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೊಳ್ಳಕೋಡಿ, ತಾಲೂಕಿನ ಪ್ರಮುಖರಾದ ಮಹೇಶ್ ಕೋಟ್ಯಾನ್ ಜೇಂಕ್ಯಾರ್, ಹರೀಶ್ ಗೌಡ ಕೊಯಿಲ ಕಾಯರ್ತಡ್ಕ, ಪ್ರೀತಮ್ ಧರ್ಮಸ್ಥಳ, ಹರ್ಷ ಜೈನ್ ಧರ್ಮಸ್ಥಳ, ರಾಜೇಶ್ ಎಂ ಕೆ ಕಾಯರ್ತಡ್ಕ, ರಾಜೇಶ್ ಆರಂಬೋಡಿ, ಜಗದೀಶ್ ಗೌಡ ದಿಡುಪೆ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ,ಪ್ರಮುಖರಾದ ಶ್ರೀಧರ ಗೌಡ ಕುಂಬುಡಂಗೆ, ಬಾಲಕೃಷ್ಣ ಗೌಡ ದಾಸರ ಕೋಡಿ, ಚಂದಪ್ಪ ಗೌಡ ನಡುಮಜಲು, ಡೊoಬಯ್ಯ ಗೌಡ ಖಂಡಿಗ, ನಿರಂಜನ ಗೌಡ ನಡುಮಜಲು, ವೆoಕಟರಮಣ ಗೌಡ ಬಾಳೆಹಿತ್ತಿಲು, ಕೃಷ್ಣಯ್ಯ ಆಚಾರ್ಯ, ಜನಾರ್ಧನ ಗೌಡ ಪುಯಿಲ ,ಪ್ರಶಾಂತ್ ಗೌಡ ನಿರುoಬುಡ, ರಂಜಿತ್ ಗೌಡ ನಡುಮಜಲು, ವಕೀಲರಾದ ಸಂದೇಶ್ ಗೌಡ, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಹಾಗೂ ಅನೇಕ ಗಣ್ಯರು, ಪ್ರಮುಖರು, ಉಪಸ್ಥಿತರಿದ್ದರು.

ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ, ಪಾಂಚಜನ್ಯ ಗೆಳೆಯರ ಬಳಗ ಪಾಂಜಾಳ ಮತ್ತು ಶ್ರೀ ಸದಾಶಿವ ಭಜನಾ ಮಂಡಳಿ ಕುರಾಯ ಇವರುಗಳಿಂದ ಭಜನಾ ಕಾರ್ಯಕ್ರಮ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ಲಕ್ಕಿಡಿಪ್ ಡ್ರಾ, ಭಾರತ ಮಾತೆಯ ಭಾವಚಿತ್ರದ ಆಕರ್ಷಣೆಯೊಂದಿಗೆ, ಮಕ್ಕಳ ಕುಣಿತ ಭಜನೆ, ಚೆಂಡೆ, ಮಾರ್ಗದ ಇಕ್ಕೆಲದಲ್ಲಿ ಪೂಜೆ ಪ್ರಸಾದ ವಿತರಣೆ ,ಸಿಹಿ ತಿಂಡಿ, ಪಾನೀಯ, ಫಲಾಹಾರ ವ್ಯವಸ್ಥೆಯೊಂದಿಗೆ ವೈಭವಪೂರ್ಣ ಮೆರವಣಿಗೆ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ವಿಸರ್ಜನೆಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Related posts

ಮುಂಡಾಜೆ ಅನುದಾನಿತ ಪ್ರೌಢಶಾಲೆಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೀಷ್ಮ ಏಕಾದಶೀ ಪ್ರಯುಕ್ತ ವಿಷ್ಣು ಸಹಸ್ರನಾಮ ಪಠಣ

Suddi Udaya

ವೇಣೂರು ಸರ್ಕಾರಿ ಪ್ರೌಢಶಾಲೆ: OSAAT ಸಂಸ್ಥೆಯಿಂದ ರೂ.1.25 ಕೋಟಿ ಅನುದಾನದಲ್ಲಿ ಶಾಲಾ ಕೊಠಡಿಗೆ ಶಿಲಾನ್ಯಾಸ

Suddi Udaya

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಬೆಂಗಳೂರು ಹೈಕೋರ್ಟ್ ಗೆ ಹಾಜರು

Suddi Udaya

ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟ: ರಾಷ್ಟ್ರಮಟ್ಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಿದ್ದಾರ್ಥ್ ಎಂ. ಸಿ ಆಯ್ಕೆ

Suddi Udaya
error: Content is protected !!