September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವೇಣೂರು ಸರ್ಕಾರಿ ಪ್ರೌಢಶಾಲೆ: OSAAT ಸಂಸ್ಥೆಯಿಂದ ರೂ.1.25 ಕೋಟಿ ಅನುದಾನದಲ್ಲಿ ಶಾಲಾ ಕೊಠಡಿಗೆ ಶಿಲಾನ್ಯಾಸ

ವೇಣೂರು : ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ವೇಣೂರು ಇಲ್ಲಿಗೆ OSAAT ಸಂಸ್ಥೆಯ ನೆರವಿನಿಂದ ಐದು ತರಗತಿ ಕೊಠಡಿಗಳು ,ಬಾಲಕಿಯರಿಗೆ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಯನ್ನು 1.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ಕೊಡುತ್ತಿದ್ದು ,ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಈ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಕೆ.ಪಿ.ಎಸ್ ಸಂಸ್ಥೆಯಾಗಿ ಪರಿವರ್ತಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪ್ರಸ್ತುತ ಸಂಸ್ಥೆಯಲ್ಲಿ 563ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು ಎಸ್ ಡಿ ಎಂ ಸಿ ಯ ಅಧ್ಯಕ್ಷರು ಶಾಲಾ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ,ಸಂಸ್ಥೆಯ ಅತ್ಯುತ್ತಮ ಶಿಸ್ತು, ಸ್ವಚ್ಛ ಪರಿಸರ, ಸಹ ಪಠ್ಯ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ಎಲ್ಲವನ್ನು ಪರಿಗಣಿಸಿ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಅಮೆರಿಕ ಮೂಲದ ದಾನಿಗಳಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. OSAAT ಸಂಸ್ಥೆಯ 127 ನೇ ಯೋಜನೆ ಇದಾಗಿದ್ದು ವೇಣೂರು ನಂತಹ ಗ್ರಾಮೀಣ ಪ್ರದೇಶಕ್ಕೆ ಇದೊಂದು ವರದಾನವೇ ಹೌದು. ಶಾಲೆಯ ಅಗತ್ಯಗಳಲ್ಲಿ ಒಂದಾದ ನೂತನ ಸಭಾಂಗಣವನ್ನು ಸುಮಾರು ರೂ 10 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿದ್ದು ಶಾಸಕರು ಇದನ್ನು ಲೋಕಾರ್ಪಣೆಗೊಳಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್. ಎಲ್ .ಸಿ ಪರೀಕ್ಷೆಗೆ ಹಾಜರಾದ 230 ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇಕಡ ಫಲಿತಾಂಶ ಬಂದಿದ್ದು ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಗೌರವಿಸಿ ಅಭಿನಂದಿಸಲಾಯಿತು. ಅದೇ ರೀತಿ ಕಳೆದ ವರ್ಷ ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸಂಸ್ಥೆ ಸ್ಥಳಾಂತರಗೊಂಡಾಗ ಹಲವು ಭೌತಿಕ ಸಮಸ್ಯೆಗಳಿಂದ ಕೂಡಿದ್ದು ಎಲ್ಲವನ್ನು ಸರ್ವರ ಸಹಕಾರದಿಂದ ಪರಿಹರಿಸಲು ಕಾರಣರಾದ ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಜೇಶ್ ಪೂಜಾರಿ ಮೂಡುಕೋಡಿ ಇವರನ್ನು, ನೂತನ ಸಭಾಂಗಣಕ್ಕೆ ಆರ್ಥಿಕ ನೆರವು ನೀಡಿದ ರೋಟರಿ ಕ್ಲಬ್ ಸಿದ್ದಕಟ್ಟೆ ಅಧ್ಯಕ್ಷ ದುರ್ಗಾ ದಾಸ್ ಶೆಟ್ಟಿ, ಹಲವು ವರ್ಷಗಳಿಂದ ಕ್ರೀಡಾಕೂಟಕ್ಕೆ ಸಹಕರಿಸುತ್ತಿರುವ ಮೋಹನ್ ದಾಸ್ ಹೆಗ್ಡೆ, ಉದ್ಯಮಿ ಹಾಗೂ ದಾನಿಗಳಾದ ಮೋಹನ್ ಹೆಗ್ಡೆ ಕರಿಮಣೇಲು ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

ಕಳೆದ ವರ್ಷ ಎಸ್ .ಎಸ್. ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದ ಕುಮಾರಿ ಸುಪ್ರಿಯಾ ಹಾಗೂ 600ಕ್ಕಿಂತ ಹೆಚ್ಚು ಅಂಕ ಪಡೆದ 13 ವಿದ್ಯಾರ್ಥಿಗಳನ್ನು, ರಾಜ್ಯಮಟ್ಟದಲ್ಲಿ ಸಾಧನೆಗೈದ 10 ವಿದ್ಯಾರ್ಥಿಗಳನ್ನು, NMSS ಪರೀಕ್ಷೆ ಉತ್ತೀರ್ಣರಾದ ಆರು ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿOSAAT ಸಂಸ್ಥೆಯ ಅಧಿಕಾರಿಗಳಾದ ಬಾಲಕೃಷ್ಣರಾವ್ ಹಾಗೂ ಕಿಶೋರ್ ಕುಮಾರ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಭಾಸ್ಕರ್ ಪೈ, ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ್ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ಶಿವಶಂಕರ ಭಟ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಿಜಯ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧೀರ್ ಭಂಡಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನೇಮಯ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಉಪ ಪ್ರಾಂಶುಪಾಲರಾದ ವೆಂಕಟೇಶ್. ಎಸ್ .ತುಳುಪುಳೆ ಸ್ವಾಗತಿಸಿದರು. ಶಿಕ್ಷಕಿರಾದ ಶ್ರೀಮತಿ ಜ್ಯೋತಿ ಜೂಲಿಯೆಟ್ ಡಿಸೋಜಾ ಮತ್ತು ಸುಶೀಲಾ ಜಿ ಕಾರ್ಯಕ್ರಮ ನಿರೂಪಿಸಿದರು. ನೆಲ್ಸನ್ ಹೆರಾಲ್ಡ್ ಧನ್ಯವಾದವಿತ್ತರು.

Related posts

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದಿಂದ ಚಿಕಿತ್ಸಾ ನೆರವು

Suddi Udaya

ಇಂದಬೆಟ್ಟು: ಗೊಂಚಲು ಸ್ತ್ರೀ ಶಕ್ತಿ ಮಹಾಸಭೆ

Suddi Udaya

ಮಾ.8: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ, ತುಂಗಪ್ಪ ಬಂಗೇರ ನೇತೃತ್ವದಲ್ಲಿ 18ನೇ ವರ್ಷದ ಸಾಮೂಹಿಕ ವಿವಾಹ

Suddi Udaya

ಧರ್ಮಸ್ಥಳ : ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಡುಗೆ

Suddi Udaya

ಸುಲ್ಕೇರಿಮೊಗ್ರು: ಬಾಣಂತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

Suddi Udaya

ಉಜಿರೆ ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನಲ್ಲಿ “ಭವಾನ್ ವಿದ್ಯಾಮ್ ದೇಹಿ” ಅಭಿಯಾನ

Suddi Udaya
error: Content is protected !!