ಉಜಿರೆ : “ಭಾಷೆ ಭಾವನೆಗಳಿಗೆ ಮಾಧ್ಯಮ. ಪ್ರಸ್ತುತ ಅನೇಕ ಭಾಷೆಗಳನ್ನು ಕಲಿಯಲು ಇರುವ ಅವಕಾಶಗಳನ್ನು ಬಳಸಿಕೊಳ್ಳಿ” ಎಂದು ಬೆಳ್ತಂಗಡಿಯ ಯೂನಿಯನ್ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕ ಅಮಿತ್ ಶುಕ್ಲ ಹೇಳಿದರು.
ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಯಲ್ಲಿ ಸೆ. 16 ರಂದು ನಡೆದ ‘ಹಿಂದಿ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶೈಕ್ಷಣಿಕ ಸಂಯೋಜಕ ಶ್ರೀಮತಿ ಶಿಕ್ಷಕಿ ಸುಮಾ ಶ್ರಿನಾಥ್ ವಹಿಸಿದ್ದರು.
ವಿದ್ಯಾರ್ಥಿನಿ ಸಮೀಕ್ಷಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಜೊಯನೆ ಸ್ವಾಗತಿಸಿ, ವಿದ್ಯಾರ್ಥಿ ಮೊಹಮ್ಮದ್ ನುಮಾನ್ ವಂದಿಸಿದರು.











