September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ವತಿಯಿಂದ ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮಯಜ್ಞ ಮತ್ತು ಪೂಜೆಯು ಸೆ.17ರಂದು ಬೆಳ್ತಂಗಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ವಹಿಸಿದ್ದರು. ಶಿವಪ್ರಸಾದ್ ಮಲೆಬೆಟ್ಟು ಧಾರ್ಮಿಕ ಉಪನ್ಯಾಸವನ್ನು ನೀಡಿದರು.

ಮುಖ್ಯ ಅತಿಥಿ ಶಾಸಕ ಹರೀಶ್ ಪೂಂಜ ಅವರು ದೀಪ ಪ್ರಜ್ವಲಿಸಿ ಮಾತನಾಡಿ, ಹಿಂದೂ ಸಮಾಜಕ್ಕೆ ಶಕ್ತಿ ತುಂಬುವವರು ವಿಶ್ವಕರ್ಮ ಬಾಂಧವರು. ವಿಶ್ವಕರ್ಮರ ಕೈಚಳಕದಿಂದ ಮೂಡಿದ ವಸ್ತುಗಳು ದೇವರ ಕೈಯಲ್ಲಿ ಆಯುಧವಾಗಿ ಶೋಭಿಸುತ್ತದೆ. ನನ್ನ ಮುಂದಿನ ಕೆಲಸ ಕಾರ್ಯಗಳಿಗೂ ನಿಮ್ಮ ಆಶೀರ್ವಾದ ಇರಲಿ ಎಂದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ, ಪ್ರಸನ್ನ ಯು ಆಚಾರ್ಯ, ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಎಸ್., ಭಾಗವಹಿಸಿದರು. ರುಕ್ಮಯ ಆಚಾರ್ಯ ಕನ್ನಾಜೆ, ರಾಧಾಕೃಷ್ಣ ಆಚಾರ್ಯ, ಪುರುಷೋತ್ತಮ ಆಚಾರ್ಯ, ಲಕ್ಷ್ಮೀ ತಾರನಾಥ್, ಉಷಾ ಹರಿಪ್ರಸಾದ್, ರಮೇಶ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್, ಶಿಲ್ಪಿಗಳಾದ ಜಯಚಂದ್ರ ಆಚಾರ್ಯ ನಾಳ, ರಾಜೇಶ್ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮಾಭ್ಯುದಯ ಸಭಾದ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್. ಎಸ್ ಗುಂಪಲಾಜೆ ಪ್ರಸ್ತಾವಿಸಿ, ಸ್ವಾಗತಿಸಿದರು. ರಾಜೇಶ್ ಆಚಾರ್ಯ ಸವಣಾಲು ಮತ್ತು ಲತಾ ಬಾಲಚಂದ್ರ ಆಚಾರ್ಯ ನಿರೂಪಿಸಿ ಸಂಘಟನಾ ಕಾರ್ಯದರ್ಶಿ ಬಿಕೆ ಸಂತೋಷ್ ಆಚಾರ್ಯ ವಂದಿಸಿದರು.

ಮಧ್ಯಾಹ್ನ ನಂತರ “ವಿ.ಎಸ್.ಡಿ ಶೋ ಮಾಸ್ಟರ್ಸ್ ಉಜಿರೆ ಮತ್ತು “ಸ್ವರ ಮಾಧುರ್ಯ ಬೆಳ್ತಂಗಡಿ” ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶ್ವಕರ್ಮ ಟ್ಯಾಲೆಂಟ್ ಶೋ–2026 ಪಿಲ್ಮಿ ನೃತ್ಯ ಸ್ಪರ್ಧೆ, ಸೋಲೋ ನೃತ್ಯ ನಡೆಯಿತು.

Related posts

ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬೆಳೆ ಸಮೀಕ್ಷೆ ಮಾಹಿತಿ ಕಾರ್ಯಾಗಾರ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ನಡ್ವಾಲ್ ಸಿರಿಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ‘ದಿ ಕೇರಳ ಸ್ಟೋರಿ’ ಚಲನಚಿತ್ರ ಉಚಿತ ಪ್ರದರ್ಶನ

Suddi Udaya

ಸುಲ್ಕೇರಿಮೊಗ್ರು: ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ವತಿಯಿಂದ ವಿ. ಹರೀಶ್ ನೆರಿಯರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ 9ನೇ ಸಹಾಯಧನ ಹಸ್ತಾಂತರ

Suddi Udaya
error: Content is protected !!