September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಉಜಿರೆ ಸಿಟಿ -777 ಜೇಸಿ ಸಪ್ತಾಹ 2026 ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ

ಉಜಿರೆ : ಜೆಸಿಐ ಉಜಿರೆ ಸಿಟಿ ಘಟಕದ ವತಿಯಿಂದ ಏಳು ದಿನಗಳ 777 ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.

ವಲಯ 15ರ ವಲಯ ವ್ಯವಸ್ಥಾಪಕ ನಿರ್ದೇಶಕರಾದ ಸುಹಾಸ್ ಮರಿಕೆ ಇವರಿಂದ ಉದ್ಘಾಟನೆಗೊಂಡ ಸಪ್ತಾಹ ಕಾರ್ಯಕ್ರಮವು ಸಾರ್ವಜನಿಕರಿಗೆ ಸ್ಟೀಲ್ ಬಾಟಲ್ ವಿತರಣೆ ಮತ್ತು ಪ್ಲಾಸ್ಟಿಕ್ ತ್ಯಜಿಸಿ ಜಾಗೃತಿ ಕಾರ್ಯಕ್ರಮ, ಯುವಧ್ವನಿ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಮಾನವ ಕರ್ತವ್ಯ ಮತ್ತು ಡಿಜಿಟಲ್ ವ್ಯಾಪ್ತಿ ಕಾರ್ಯಕ್ರಮ, ವ್ಯವಹಾರ ಅಭಿವೃದ್ಧಿ ಕಾರ್ಯಕ್ರಮ,ಜೆಸಿಐ ಪ್ರಮೋಷನ್ ಕಾರ್ಯಕ್ರಮ, ಜೆಸಿ ಸದಸ್ಯರ ಕುಟುಂಬ ಬಾಂಧವ್ಯ ಕಾರ್ಯಕ್ರಮ, ಹೊರಾಂಗಣ ಸಂಚಾರವೇ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿ ಸಪ್ತಾಹದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ನಡ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಮಹಮ್ಮದ್ ಮಿರ್ಷಾದ್ ಎಲ್ಲರನ್ನು ಸ್ವಾಗತಿಸಿದರು.
ನಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೆಸಿಐ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕಿ ಶಿಲ್ಪ, ಕನ್ನಡ ಭಾಷೆ ಉಪನ್ಯಾಸಕಿ ವಸಂತಿ ಉಪಸ್ಥಿತರಿದ್ದರು.

ಸಾಧಕರಿಗೆ ಗೌರವಾರ್ಪಣೆ
ಸಮಾರಂಭದ ಕಾರ್ಯಕ್ರಮದಲ್ಲಿ ಪ್ರಮಾಣಿಕೃತ ಕೌಶಲ್ಯಾಭಿವೃದ್ಧಿ ತರಬೇತಿದಾರರು, ಪ್ರವೃತ್ತಿಯಲ್ಲಿ ಕಲಾವಿದರು, ವೃತ್ತಿಯಲ್ಲಿ ಎಸ್‍ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಸಂಪತ್ ಕುಮಾರ್ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವಾರ್ಪಣೆ ನೀಡಿ ಅಭಿನಂದಿಸಲಾಯಿತು.


ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಜೆಸಿ ವಾಣಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಭವ್ಯಶ್ರೀ ಕೀರ್ತಿರಾಜ್ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಜೆಸಿ ಸದಸ್ಯರು, ಕಾಲೇಜಿನ ಉಪನ್ಯಾಸಕ ವೃಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ಬೆಳ್ತಂಗಡಿ: ಮೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಬಿಲ್ ವಸೂಲಾತಿ ಅಭಿಯಾನ

Suddi Udaya

ದೇಶಭಕ್ತಿ ಗುಂಪು ಗಾಯನ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಪುಂಜಾಲಕಟ್ಟೆ ಕೆ.ಪಿ.ಎಸ್ ಸರಕಾರಿ ಪ.ಪೂ. ಕಾಲೇಜು ವಾರ್ಷಿಕೋತ್ಸವ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಘಗಳ ಉದ್ಘಾಟನೆ

Suddi Udaya

ಧರ್ಮಸ್ಥಳ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ, ನಿಲ್ಲಿಸಿದ್ದ ರೂ.1.50 ಲಕ್ಷ ಮೌಲ್ಯದ ಸ್ಪ್ಲೆಂಡರ್ ಪ್ಲಸ್ ಮೋಟಾರ್‌ ಸೈಕಲ್‌ ಕಳವು

Suddi Udaya

ಶಿವಮೊಗ್ಗದಲ್ಲಿ ಕ್ರೇನ್‌ ಅಡಿಗೆ ಸಿಲುಕಿ ಪಿಲಿಗೂಡಿನ ನಾಗೇಶ್ ಮೃತ್ಯು

Suddi Udaya
error: Content is protected !!