32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿಶ್ವಕರ್ಮಾಭ್ಯುದಯ ಸಭಾ ಬೆಳ್ತಂಗಡಿ; ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾವೂರು ಪುಣ್ಯಸ್ಟುಡಿಯೋ ಮಾಲಕ ಅಶೋಕ್ ಆಚಾರ್ಯರಿಗೆ ಗೌರರ್ವಾಪಣೆ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ವತಿಯಿಂದ ನಡೆದ ಶ್ರೀ ವಿಶ್ವಕರ್ಮಯಜ್ಞ ಮತ್ತು ಪೂಜೆ ಕಾರ್ಯಕ್ರಮದ ಅಂಗವಾಗಿ ಸೆ.17ರಂದು ಬೆಳ್ತಂಗಡಿಯ ವಿಶ್ವಕರ್ಮ ಸಭಾಭವನದಲ್ಲಿ,ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕ ನಾವೂರು ಪುಣ್ಯಸ್ಟುಡಿಯೋ ಮಾಲಕ ಅಶೋಕ್ ಆಚಾರ್ಯ ಅವರನ್ನು ಗೌರವಿ ಸಲಾಯಿತು.

ಶಿಲ್ಪಕಲಾ ಪ್ರವೀಣರಾದ ಅಶೋಕ್ ಆಚಾರ್ಯ ಅವರು ಛಾಯಾಗ್ರಾಹಕರಾಗಿ, ನಾಟಕ ಕಲಾವಿದರಾಗಿ, ಗಾಯಕರಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ, ಅವರನ್ನು ಶಾಲು ಹೊದಿಸಿ, ಪೇಟಾ ತೋಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿದ್ಯಾಕರ್ಮಭ್ಯುದಯ ಸಭಾ ಬೆಳ್ತಂಗಡಿಯ ಅಧ್ಯಕ್ಷ ಗಣೇಶ್ ಆಚಾರ್ಯ, ಸಂಪೂರ್ಣ ಸಹಜ ಕೃಷಿಯ ನಿರ್ದೇಶಕ ಮತ್ತು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಾಮರಸ್ಯ ಸಹಸಂಚಾಲಕ ಶಿವಪ್ರಸಾದ ಮಲೆಬೆಟ್ಟು, ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ, ಸಿರಿಗ್ರಾಮೋದ್ಯೋಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಆಚಾರ್ಯ, ಮೂಡಬಿದ್ರೆ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಎಸ್, ಪ್ರಮುಖರಾದ ರುಕ್ಮಯ ಆಚಾರ್ಯ ಕನ್ನಾಜೆ, ರಾಧಕೃಷ್ಣ ಆಚಾರ್ಯ ಕಕ್ಕಿಂಜೆ, ಪುರುಷೋತ್ತಮ ಆಚಾರ್ಯ, ಲಕ್ಷ್ಮೀ ತಾರಾನಾಥ್, ಉಷಾ ಹರಿಪ್ರಸಾದ್, ರಮೇಶ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್, ಜಯಚಂದ್ರ ಆಚಾರ್ಯ, ರಾಜೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Related posts

ಕುಪ್ಪೆಟ್ಟಿ ಸ.ಉ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ದಿಡುಪೆ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 40 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮದ್ದಡ್ಕ : ತಾಯಿ ರಕ್ತೇಶ್ವರಿ ಹಾಗೂ ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಮುಂಡೂರು ಶ್ರೀನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಶ್ರೀನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರೆಂಟ್ ಆರೋಪಿ ಬಂಧನ

Suddi Udaya
error: Content is protected !!