32 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ: ಸಿ.ಎಂ. ಡಿ.ಕೆ ಶಿವಕುಮಾರ್

ಮಂಗಳೂರು: ಶುಕ್ರವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸತತ ಮೂರು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಸಂಪುಟದಲ್ಲಿ ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

‘ಹಿಂದಿನ ಸರಕಾರಗಳು ಯಾಕೆ ಮಾಡಲಿಲ್ಲ ಅಂತ ನಾನು ಪ್ರಶ್ನೆ ಮಾಡುವುದಿಲ್ಲ. ನಮಗೆ ಬದ್ಧತೆ ಇದೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ನಾವು ಬದುಕಿನ ಮೇಲೆ ಮಾಡುತ್ತೇವೆ” ಎಂದು ಸಿಎಂ ತಿಳಿಸಿದರು. ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆದಿದ್ದು, ದಕ್ಷಿಣ ಕನ್ನಡ ಮತ್ತು, ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ತುಳು ಮಾತೃಭಾಷಿಗರಾಗಿದ್ದಾರೆ. ಈ ಮೂಲಕ ಸರಕಾರ ಭಾವನಾತ್ಮಕ ವಿಚಾರಕ್ಕೂ ಮನ್ನಣೆ ನೀಡಿದೆ.

Related posts

ಬಂದಾರು: ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಮತಪ್ರಚಾರ

Suddi Udaya

ಅಳದಂಗಡಿ ವಿದುಷಿ ವಿದ್ಯಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಉಜಿರೆ: ಎಸ್.ಡಿ.ಎಂ ಮಹಿಳಾ ಐಟಿಐ ಸಂಸ್ಥೆಯಲ್ಲಿ ಮೆಷಿನ್ ಎಂಬ್ರಾಯ್ಡರಿ ತರಬೇತಿ ಕಾರ್ಯಗಾರ

Suddi Udaya

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

Suddi Udaya

ಉಜಿರೆ: ಶ್ರೀ.ಧ.ಮಂ ವಸತಿ ಪ.ಪೂ. ಕಾಲೇಜಿನಲ್ಲಿ ‘ವ್ಯಕ್ತಿತ್ವ ವಿಕಸನ ಕಾರ್ಯಾಗಾರ’

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರದರ್ಶನ-ಮಾರಾಟ ಮೇಳ

Suddi Udaya
error: Content is protected !!