32.3 C
ಪುತ್ತೂರು, ಬೆಳ್ತಂಗಡಿ
September 19, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಎನ್ ಎಸ್ ಎಸ್ ಘಟಕದ ಸ್ವಯಂ ಸೇವಕರಿಗೆ ಕೆಸರ್‌ಡೊಂಜಿ ದಿನ ಕ್ರೀಡಾಕೂಟ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಮುಂಡತ್ತೋಡಿ ಶಾರದಾ ಇವರ ಗದ್ದೆಯಲ್ಲಿ ಕೆಸರಡೊಂಜಿ ದಿನ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ ಎಸ್ ಗದ್ದೆಗೆ ಪೂಜೆ ಮಾಡಿ ಹಾಲು ಹಾಕಿ ಉದ್ಘಾಟಿಸಿ ಮಾತನಾಡಿ “ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಗದ್ದೆಗೆ ಪವಿತ್ರವಾದ ಸ್ಥಾನವಿದೆ. ವಿದ್ಯಾರ್ಥಿಗಳಿಗೆ ಈ ಮಣ್ಣಿನ ಸೊಗಡು ಮತ್ತು ಸಂಸ್ಕೃತಿ ತಿಳಿಸುವ ಇಂತಹ ಕ್ರೀಡಾ ಕೂಟವನ್ನು ಎನ್ ಎಸ್ ಎಸ್ ಘಟಕ ಆಯೋಜನೆ ಮಾಡಿರುವುದು ಅರ್ಥಪೂರ್ಣವಾದುದು “ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ “ನಮ್ಮ ತುಳುನಾಡ ಸಂಸ್ಕೃತಿಯನ್ನು ಉಳಿಸುವಲ್ಲಿ ಕೆಸರುಡೊಂಜಿ ದಿನ ಕ್ರೀಡಾಕೂಟವು ಬಹಳ ಮಹತ್ತರವಾದುದು. ಬದಲಾಗುತ್ತಿರುವ ಯುವ ಜನಾಂಗಕ್ಕೆಇಂತಹ ಕ್ರೀಡಾಕೂಟಗಳ ಮೂಲಕ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯ”ಎಂದು ಹೇಳಿದರು.

ಗದ್ದೆಯ ಮಾಲಕಿ ಶಾರದಾರವರ ಮಗಳು ಪೂಜಾ ದೇವರಾಜ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯ ದೇವರಾಜ್ ಪೂಜಾರಿ, ಸ್ಥಳೀಯರಾದ ಪವಿತ್ರ, ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿಜ್ಞಾ, ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ,ಉಪಸ್ಥಿತರಿದ್ದರು.

ಸ್ವಯಂ ಸೇವಕರಿಗೆ ಕೆಸರು ಗದ್ದೆ ಓಟ, ಹಾಳೆ ಓಟ, ವಾಲಿಬಾಲ್, ಥ್ರೋ ಬಾಲ್, ಕಂಬ ಸುತ್ತುವ ಓಟ,ಹಗ್ಗ ಜಗ್ಗಾಟ,ನಿಧಿ ಶೋಧ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ವಯಂ ಸೇವಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ಸುಪೇಕ್ಷಾ ಸ್ವಾಗತಿಸಿ, ಶ್ರೇಯಸ್ ವಂದಿಸಿದರು.

Related posts

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ದಯಾ ವಿಶೇಷ ಮಕ್ಕಳ ಪಾಲನ ಕೇಂದ್ರ ವಿಮುಕ್ತಿಯಲ್ಲಿ “ಪವರ್ ಆನ್” ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಕೆ‌ ಧರಣೇಂದ್ರ ಜೈನ್ ಆಯ್ಕೆ

Suddi Udaya

ಬಜಿರೆ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ: ಶ್ರೀ ದೇವರಿಗೆ 150 ಸೀಯಾಳ ಅಭಿಷೇಕ

Suddi Udaya
error: Content is protected !!