32.3 C
ಪುತ್ತೂರು, ಬೆಳ್ತಂಗಡಿ
September 19, 2026
ಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ತುಳುವಿಗೆ ಅಧಿಕೃತ ಮಾನ್ಯತೆ: ತುಳುನಾಡಿನ ದಶಕಗಳ ಕನಸು ನನಸು: ಅಭಿನಂದನ್ ಹರೀಶ್ ಕುಮಾರ್

ಬೆಳ್ತಂಗಡಿ:ಕರ್ನಾಟಕದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಐತಿಹಾಸಿಕ ಅಧ್ಯಾಯ ಸೇರ್ಪಡೆಯಾಗಿದೆ. ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆ ಸ್ಥಾನಮಾನ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ನಿರ್ಧಾರವು ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಭಾಷಿಕರ ದೀರ್ಘಕಾಲದ ಬೇಡಿಕೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ ಎಂದು ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ತಿಳಿಸಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ, ವಿಶಿಷ್ಟ ಸಂಸ್ಕೃತಿ, ಶ್ರೀಮಂತ ಜನಪದ ಪರಂಪರೆ, ಯಕ್ಷಗಾನ, ಭೂತಾರಾಧನೆ, ಕಂಬಳ ಸೇರಿದಂತೆ ತುಳುನಾಡಿನ ಅಸ್ಮಿತೆಯೊಂದಿಗೆ ಬೆಸೆದುಕೊಂಡಿರುವ ತುಳು ಕೇವಲ ಒಂದು ಭಾಷೆಯಲ್ಲ; ಅದು ಒಂದು ಜೀವಂತ ಸಂಸ್ಕೃತಿ, ಒಂದು ಪರಂಪರೆ ಮತ್ತು ಕೋಟ್ಯಂತರ ಜನರ ಭಾವನೆಯ ಪ್ರತೀಕ.

ತುಳು ಭಾಷೆಯ ಮಾನ್ಯತೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿದ ಭಾಷಾ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಸಂಘಟನೆಗಳು ಹಾಗೂ ತುಳು ಭಾಷಾಭಿಮಾನಿಗಳ ನಿರಂತರ ಪ್ರಯತ್ನ ಇಂದು ಫಲ ನೀಡಿದೆ. ಅವರ ಎಲ್ಲರಿಗೂ ಈ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು.

ಈ ನಿರ್ಧಾರವು ತುಳು ಭಾಷೆಯ ಆಡಳಿತಾತ್ಮಕ ಬಳಕೆಗೆ ಮಾತ್ರ ಸೀಮಿತವಾಗದೆ, ತುಳು ಶಿಕ್ಷಣ, ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಮತ್ತು ಮುಂದಿನ ಪೀಳಿಗೆಯಲ್ಲಿ ಭಾಷೆಯ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿ ಎಂಬುದು ನಮ್ಮ ಆಶಯ.

ಅದೇ ಸಮಯದಲ್ಲಿ, ಕರ್ನಾಟಕದ ಆಡಳಿತ ಮತ್ತು ಸಾರ್ವಜನಿಕ ಜೀವನದಲ್ಲಿ ಕನ್ನಡಕ್ಕೆ ಇರುವ ಪ್ರಮುಖ ಸ್ಥಾನವನ್ನು ಗೌರವಿಸುತ್ತಾ, ರಾಜ್ಯದ ವಿವಿಧ ಭಾಷೆ–ಸಂಸ್ಕೃತಿಗಳಿಗೂ ಸಮಾನ ಗೌರವ ಮತ್ತು ಅವಕಾಶ ದೊರೆಯುವ ಮೂಲಕ “ಕನ್ನಡದ ನೆಲದಲ್ಲಿ ಎಲ್ಲ ಭಾಷೆಗಳಿಗೂ ಗೌರವ” ಎಂಬ ಕರ್ನಾಟಕದ ಸೌಹಾರ್ದ ಪರಂಪರೆ ಮತ್ತಷ್ಟು ಬಲಗೊಳ್ಳಲಿ.

ಇದು ಯಾರದ್ದೋ ಗೆಲುವು ಅಥವಾ ಸೋಲಿನ ಪ್ರಶ್ನೆಯಲ್ಲ.ಇದು ತುಳುವಿನ ಗೆಲುವು.
ಇದು ತುಳುನಾಡಿನ ಸಂಸ್ಕೃತಿಯ ಗೆಲುವು.ಇದು ಕರ್ನಾಟಕದ ಬಹುಭಾಷಾ–ಬಹುಸಾಂಸ್ಕೃತಿಕ ಪರಂಪರೆಯ ಗೆಲುವು.

ತುಳು ಭಾಷೆಗೆ ದೊರೆತಿರುವ ಈ ಐತಿಹಾಸಿಕ ಮಾನ್ಯತೆ ಮುಂದಿನ ಪೀಳಿಗೆಗಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡೊಯ್ಯುವ ಶಕ್ತಿಯಾಗಲಿ.

ತುಳು ಬಾಷೆಯ ಗೌರವ ನಮ್ಮೆಲ್ಲರ ಹೆಮ್ಮೆ.ತುಳುನಾಡಿನ ಸಂಸ್ಕೃತಿ ನಮ್ಮೆಲ್ಲರ ಸಂಪತ್ತು.ತುಳುವಿಗೆ ಮಾನ್ಯತೆ ನೀಡಿದ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅಭಿನಂದನ್ ಹರೀಶ್ ಕುಮಾರ್ ತಿಳಿಸಿದರು.

Related posts

ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಸಂಭ್ರಮದ ಕುಟುಂಬ ಕಲೋತ್ಸವ

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ಎಸ್.ಐ.ಟಿ ದಾಳಿ

Suddi Udaya

ಬಾರ್ಯ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್ ರವರಿಗೆ ಮಾತೃವಿಯೋಗ

Suddi Udaya

ವೇಣೂರು : ದಿ| ಸತೀಶ್ ಆಚಾರ್ಯ ರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಬೆಳ್ತಂಗಡಿ ಪಶು ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!