ಬೆಳ್ತಂಗಡಿ: 17ರ ವಯೋಮಾನದ ಪ್ರೌಢಶಾಲಾ ವಿಭಾಗದಲ್ಲಿ, ವಲಯ, ತಾಲೂಕು ಹಾಗೂ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಅಲ್‌ರೌಂಡರ್ ಪ್ರಶಸ್ತಿ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಶ್ರೇಯಸ್ ಎಸ್. ಆಯ್ಕೆಯಾಗಿದ್ದಾರೆ.
ಇವರು ಕೆಲ್ಲಗುತ್ತು ಅಚ್ಚಿನಡ್ಕ ಶ್ರೀನಿವಾಸ್ ಮತ್ತು ಉಷಾ ದಂಪತಿ ಪುತ್ರ.











