September 19, 2026
ಅಭಿನಂದನೆಕರಾವಳಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ತುಳು ಭಾಷೆಗೆ ಐತಿಹಾಸಿಕ ಗೌರವ: ಕರಾವಳಿಗರ ನಿರಂತರ ಹೋರಾಟಕ್ಕೆ ಜಯ-ಪದ್ಮರಾಜ್ ಆರ್.ಪೂಜಾರಿ

ಬೆಳ್ತಂಗಡಿ: ತುಳು ಭಾಷೆಗೆ ಸರಕಾರದ ಹಂತದಲ್ಲಿ ಅಧಿಕೃತ ಭಾಷಾ ಮಾನ್ಯತೆ ದೊರೆತಿರುವುದು ಸಮಸ್ತ ತುಳು ಭಾಷಿಕರಿಗೆ ಸಂತಸದ ವಿಷಯ. ದಶಕಗಳ ಕಾಲ ನಡೆದ ಕರಾವಳಿ ಜನರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿರುವುದು ಕರಾವಳಿಯ ಭವ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಈ ಐತಿಹಾಸಿಕ ನಿರ್ಧಾರ ಕೈಗೊಂಡ ಸಿ.ಎಂ ಡಿ.ಕೆ.ಶಿವಕುಮಾರ್ ದೂರದೃಷ್ಟಿಯ ನಾಯಕತ್ವಕ್ಕೆ ತುಳುನಾಡು ಸದಾ ಋಣಿ. ಈ ನಿರ್ಧಾರದ ಮೂಲಕ ತುಳುನಾಡು ಕೇವಲ ಭಾಷಿಕ ಮಾನ್ಯತೆಯನ್ನಷ್ಟೇ ಅಲ್ಲದೆ, ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸರಕಾರದ ಈ ನಿರ್ಧಾರ ಮುಂಬರುವ ಪೀಳಿಗೆಗೆ ತುಳು ಭಾಷೆಯನ್ನು ಉಳಿಸಿ, ಬೆಳೆಸಲು ಹಾಗೂ ಭಾಷಾ ಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾಗಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ತಿಳಿಸಿದ್ದಾರೆ.

Related posts

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ

Suddi Udaya

ಆಮಂತ್ರಣ ಪರಿವಾರದ ರಾಯಭಾರಿ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಪುತ್ತೂರು ಪ್ರತಿಭಾ ಸಾಂಸ್ಕೃತಿಕ ಉತ್ಸವದಲ್ಲಿ ಸನ್ಮಾನ

Suddi Udaya

ಜೂ.27 : ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಹಾಗೂ ತೋಟದ ಸಮಗ್ರ ನಿರ್ವಹಣೆ ಕುರಿತು ಸಾಂಸ್ಥಿಕ ತರಬೇತಿ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗಣಪತಿ

Suddi Udaya

ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನೆ

Suddi Udaya
error: Content is protected !!