32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ 17ನೇ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಕ್ಯಾಥೋಲಿಕ ವಿವಿಧೋದ್ದೇಶ ಸಹಕಾರ ವಾರ್ಷಿಕ ಮಹಾಸಭೆ ಸೆ.19ರಂದು ಲಾಯಿಲ ಸಂಗಮ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.

15 ವರ್ಷದಿಂದ ಲಾಭ ಗಳಿಸುತ್ತಿದ್ದು, 2025-26ನೇ ಸಾಲಿನಲ್ಲಿ ರೂ.271.11ಕೋಟಿ ವ್ಯವಹಾರ ನಡೆಸಿ ನಿವ್ವಳ ರೂ.93.04ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.17ರಷ್ಟು ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಎ.ಜೆ ರವರು ಹೇಳಿದರು.

ಸಂಘದ ಉಪಾಧ್ಯಕ್ಷ ಜಾರ್ಜ್ ಎಂ.ವಿ. ಸ್ವಾಗತಿಸಿದರು. ಮುಖ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ.2025-26ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು.

ನಿರ್ದೇಶಕರುಗಳಾದ ಸೆಬಾಸ್ಟಿನ್ ವಿ.ಟಿ, ಜೈಸನ್ ಪಿ. ಎಸ್., ಅಂದಾನಿ ಕೆ.ಡಿ, ಬಾಬು ತೋಮಸ್, ಬಿಜು ಪಿ. ಪಿ.. ಸೆಬಾಸ್ಟಿನ್ ಜಾಕೋ ಎನ್.ಕೆ., ಸೆಬಾಸ್ಟಿನ್ ಪಿ.ಟಿ., ಅಜೇಯ್ ಕೆ.ಎ., ಸೋಪಿ ಜೋಸೆಫ್, ಫಿಲೋಮಿನಾ, ಲಾಲಿಮಾಣಿ, ನಾಮ ನಿರ್ದೇಶಕರಾದ ದೇವಸ್ಯ ಎಂ. ಪಿ.ಮಾತುಕುಟ್ಟಿ. ಉಪಸ್ಥಿತರಿದ್ದರು.

ಸಂಘದ ಸದಸ್ಯರ ಮಕ್ಕಳು ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

ಸರಕಾರಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಮ್ಮಿ (ಆರೋಗ್ಯ ಇಲಾಖೆ), ಓಮನ (ಪೊಲೀಸ್ ಇಲಾಖೆ) , ಶಿಕ್ಷಣ ಇಲಾಖೆಯಲ್ಲಿ ವೀಣಾ, ಜಾರ್ಜ್, ಶುಭಾ ಪೌಲ್, ಪ್ಲೇವಿ, ಬೇಬಿ ಜೋಸೆಫ್, ಶೋಭಾ ಕೆ.ಡಿ., ರೋಸಾ ವಿ.ಟಿ. ಅನಿತಾ ಜಾನ್, ಮೇರಿ, ಅಬಕಾರಿ ಇಲಾಖೆಯಲ್ಲಿ ವಿನೋಯಿ, 7 ಪಿಗ್ಮಿ ಸಂಗ್ರಹಕರನ್ನು ಮತ್ತು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಇವರುಗಳನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ಸೆಬಾಸ್ಟಿನ್ ಪಿ. ಟಿ ವಂದಿಸಿ, ಸಿಬ್ಬಂದಿ ವರ್ಗದವರು ಸಹಕರಿಸಿದರು. ಶಾಖಾ ವ್ಯವಸ್ಥಾಪಕ ಸುಜಾ ಜೇಮ್ಸ್ ಮತ್ತು ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು

Related posts

ಜ.11: ನಾರಾವಿಯಲ್ಲಿ ನೂತನ ಗುರು ಮಂದಿರ, ಭಜನಾ ಮಂದಿರ ಉದ್ಘಾಟನೆ ಹಾಗೂ 171ನೇ ವರ್ಷದ ಗುರು ಜಯಂತಿ ಆಚರಣೆ

Suddi Udaya

ಬರೆಂಗಾಯ ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ಹಾಗೂ ದೊಂಪದ ಬಲಿ ಉತ್ಸವ

Suddi Udaya

ವೇಣೂರು ಪೊಲೀಸ್ ಠಾಣಾ ಪಿಎಸ್ಐ ಆಗಿ ಅಕ್ಷಯ್ ಡಿ ನೇಮಕ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿಗೆ ತಾ.ಪಂ ಇಓ ಭೇಟಿ, ಸ್ಥಳ ಪರಿಶೀಲನೆ

Suddi Udaya

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 12 ವರ್ಷ : ಲಾಯಿಲ ಶಕ್ತಿಕೇಂದ್ರ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ ಹೃದಯಾಘಾತದಿಂದ ನಿಧನ: ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದರೂ ದೊರೆಯದ ಸೌಲಭ್ಯ: ಸಾರ್ವಜನಿಕರ ಆಕ್ರೋಶ

Suddi Udaya
error: Content is protected !!