32 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ವೇಣೂರು ಪ್ಯಾಕ್ಸ್ ಮಹಾಸಭೆ-456.09 ಕೋಟಿ ರೂ. ವ್ಯವಹಾರ, ರೂ. 2,04, ಕೋಟಿ ಲಾಭ ಗಳಿಸಿ, ಸದಸ್ಯರಿಗೆ ಶೇ. 20 ಡಿವಿಡೆಂಡ್ : ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ. ಇ

ಬೆಳ್ತಂಗಡಿ : ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ. ಇ. ಅಧ್ಯಕ್ಷತೆಯಲ್ಲಿ ಸೆ. 20 ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸುಂದರ ಹೆಗ್ಡೆ  ಬಿ. ಇ ಅಧ್ಯಕ್ಷತೆ ವಹಿಸಿ ಮಾತನಾಡಿ  ಸಂಘವು ವರದಿ ಸಾಲಿನಲ್ಲಿ 456.09 ಕೋಟಿ ರೂ. ವ್ಯಾಪಾರ ವಾಹಿವಾಟು ನಡೆಸಿ   ರೂ. 2,04 ಕೋಟಿ ಲಾಭ ಗಳಿಸಿ ಸದಸ್ಯರಿಗೆ ಶೇ. 20 ರಷ್ಟು ಡಿವಿಡೆಂಡು ನೀಡಲಾಗುವುದು ಎಂದು ತಿಳಿಸಿದರು.

ಬ್ಯಾಂಕಿನ ಹಿರಿಯ ಸದಸ್ಯರಿಗೆ ಪಿಯುಸಿ ಮತ್ತು ಎಸ್ಎ ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನಿರ್ದೇಶಕರಾದ ರಾಮ್ ದಾಸ್ ನಾಯಕ್, ಸಂದೀಪ್ ಹೆಗ್ಡೆ, ಎಂ. ಆರ್. ಸಂತೋಷ್, ನಾಗಪ್ಪ, ಆಶಾ, ರೋಹಿಣಿ, ಕೃಷ್ಣಪ್ಪ ಮೂಲ್ಯ, ಪ್ರಶಾಂತ್, ರಾಜು ನಾಯ್ಕ ಹಾಗೂ ಪ್ರವೀಣ ಮತ್ತು ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ವರದಿ ವಾಚಿಸಿದರು. ಉಪಾಧ್ಯಕ್ಷ ರತ್ನಾಕರ ಬಿ. ವಂದಿಸಿದರು.

Related posts

ಸುಲ್ಕೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ : ಸ.ಪ್ರ.ದ. ಕಾಲೇಜಿನಲ್ಲಿ ಸಹಕಾರಿ ಕ್ಷೇತ್ರದಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ಕಾರ್ಯಾಗಾರ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಂ ನಲ್ಲಿ ಜೀವನ ಕೌಶಲ್ಯ ಹಾಗೂ ವೃತ್ತಿಪರ ಕೌಶಲ್ಯ ಮಾಹಿತಿ ಕಾರ್ಯಾಗಾರ

Suddi Udaya

ನವೋದಯ ಪ್ರವೇಶ ಪರೀಕ್ಷೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದ ಐವರು ವಿದ್ಯಾರ್ಥಿಗಳು ಉತ್ತೀರ್ಣ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ದಿನಾಚರಣೆ ಸಂಭ್ರಮ

Suddi Udaya
error: Content is protected !!