31.4 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ- ರೂ.126 ಕೋಟಿ ವ್ಯವಹಾರ, ರೂ.47.22 ಲಕ್ಷ ಲಾಭ, ಶೇ.11 ಡಿವಿಡೆಂಟ್

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆಯು ಸೆ.20ರಂದು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಹೆಚ್‌. ಪದ್ಮಗೌಡ ರವರ ಆಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಾತನಾಡಿ 2025-26ಸಾಲಿನಲ್ಲಿ 126 ಕೋಟಿ ವ್ಯವಹಾರ ನಡೆಸಿ, ರೂ. 47.22ಲಕ್ಷ ಲಾಭ ಗಳಿಸಿದ್ದು, ಶೇ.11ಡಿವಿಡೆಂಟ್ ನೀಡಲಾಯಿತು. ನಮ್ಮಲ್ಲಿ 4500ಸದಸ್ಯರಿದ್ದು, ಪ್ರಸ್ತುತ 26 ಕೋಟಿಗಿಂತ ಹೆಚ್ಚು ಸಾಲ ಕೊಟ್ಟಿದ್ದು, 25.51ಕೋಟಿ ಠೇವಣಿ ಇದ್ದು, 50ಕೋಟಿ ಡೆಪಾಸಿಟಿ ಗುರಿ ಇದೆ. ನಮ್ಮ ಸೊಸೈಟಿ ಸದೃಢವಾಗಿದೆ. ಮುಂಡಾಜೆ ಶಾಖೆಯಿಂದ ಲಾಭವಾಗಿದೆ. ಕಲ್ಲೇರಿ ಶಾಖೆಯಲ್ಲಿ ಮುಂದಿನ ವರ್ಷ ಲಾಭನಿರೀಕ್ಷೆಯಲ್ಲಿದ್ದೇವೆ.

ನಿವೇಶನ ಖರೀದಿಸುವ ಯೋಚನೆಯಲ್ಲಿದ್ದೇವೆ ಎಂದರು. ತಿಳುವಳಿಕೆ ಪತ್ರ ಚರಣ್ ಓದಿದರು. ಮಹಾಸಭೆಯ ನಡವಳಿಕೆ ಯನ್ನು ನಿತೇಶ್ ಓದಿ ದಾಖಲಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಣಾಧಿಕಾರಿ ಧನಂಜಯ ಕುಮಾರ್ ಮಂಡಿಸಿದರು. ನಿರ್ದೇಶಕರಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ಸವಣಾಲು, ಜಯಾನಂದ ಗೌಡ, ಗೋಪಾಲಕೃಷ್ಣ ಗುಲ್ಲೋಡಿ, ಸುರೇಶ್ ಕೌಡಂಗೆ, ಯಶವಂತ ಗೌಡ, ಮಾಧವ ಗೌಡ, ಪುರಂದರ ಗೌಡ, ಸುನಿಲ್ ಅನವು, ಉಷಾದೇವಿ, ಭವಾನಿಗೌಡ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಕುಶಾಲಪ್ಪ ಗೌಡ ಸ್ವಾಗತಿಸಿ, ಸೋಮಂತಡ್ಕ ಶಾಖೆಯ ಉಮೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಶ್ರೀನಾಥ್ ಕೆಎಂ ವಂದಿಸಿದರು.

Related posts

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಹಳೆಕೋಟೆ ಸಮೀಪ ಧರೆಗುರುಳಿದ ಬೃಹತ್ ಮರ

Suddi Udaya

ಬೆಳ್ತಂಗಡಿ : ನೆರಿಯದಲ್ಲಿ ಚಿರತೆ ದಾಳಿಯಿಂದ ಕಡವೆ ಸಾವು: ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ದಫನ

Suddi Udaya

ಕಡಿರುದ್ಯಾವರ: ಕಾನರ್ಪ ಎಂಬಲ್ಲಿ ಕಾಡಾನೆ ದಾಳಿ, ಕೃಷಿ ನಾಶ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ನಾವರ: ಇತ್ತೀಚೆಗೆ ನಿಧನರಾದ ಸುಧಾಕರ ರವರ ಕುಟುಂಬಸ್ಥರಿಗೆ ಪಿ.ಎಂ.ಜೆ.ಜೆ.ವೈ ಯೋಜನೆಯಡಿಯಲ್ಲಿ ವಿಮಾ ಪರಿಹಾರ ವಿತರಣೆ

Suddi Udaya
error: Content is protected !!