31.4 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ-ರೂ. 210.20ಕೋಟಿ ವ್ಯವಹಾರ, ರೂ.73.61 ಲಕ್ಷ ನಿವ್ವಳ ಲಾಭ

ಉಜಿರೆ: ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ ಗೌಡರ ಅಧ್ಯಕ್ಷತೆಯಲ್ಲಿ ಸೆ.20ರಂದು ಉಜಿರೆ ಸಂಘದ ಮೈದಾನದಲ್ಲಿ ಜರುಗಿತು.

ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಮಾತನಾಡಿ,
ನಮ್ಮ ಸೌಹಾರ್ದ ಸಹಕಾರಿಯು 7 ವರ್ಷಗಳನ್ನು ಪೂರೈಸಿ ಯಶಸ್ವಿ 8ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 210.20ಕೋಟಿ ವ್ಯವಹಾರ ನಡೆಸಿ, ರೂ.73.61 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೆ. ಗಂಗಾಧರ ಗೌಡ, ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ಕೆ. ಜಯಂತ್ ಗೌಡ ಗುರಿಪಳ್ಳ, ಸುಂದರ ಗೌಡ, ಬಿ. ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ. ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ ಕುಮಾರ್ ಗೌಡ, ಚೇತನಾ ಚಂದ್ರಶೇಖರ್ ಗೌಡ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ:
2025-26ನೇ ಸಾಲಿನ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಿಬ್ಬಂದಿ ವರ್ಗದವರಾದ ನಿತಿನ್ ಗೌಡ ಸುರುಳಿ, ದೀಕ್ಷಿತ್ ಗೌಡ, ಕೆಳಗಿನ ಕಲ್ಲಾಜೆ, ರೂಪಲತಾ ಗೌಡ ಶಿಬಾಜೆ, ಭವ್ಯ ಗೌಡ, ಶ್ರೀನಾಥ್ ಗೌಡ ಪಟ್ರಮೆ, ಸುಧಾಕರ ಗೌಡ ಹಾಲೆದಡಿ, ಜಿತೇಶ್ ಗೌಡ ಅಡ್ಕಾಡಿ, ಅಶ್ವಿತಾ ಕುಕ್ಕಿಮಾರು, ನಿಕಿಲಾ, ಮನ್ನಡ್ಕ, ಪುಣ್ಯ ಗುಂಡಿಗದ್ದ, ನಿರೀಕ್ಷಾ ರೆಂಜಾಳ, ಗುರುಪ್ರಸಾದ್ ಅರಳಿ ಸಹಕರಿಸಿದರು.

ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು. ನಿರ್ದೇಶಕ ದಾಮೋದರ ಗೌಡ ಸುರುಳಿ ವಂದಿಸಿದರು.

Related posts

ಬೆಳ್ತಂಗಡಿ: ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

Suddi Udaya

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಉಜಿರೆ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ಬಳ್ಳಮಂಜ : ರಾಜೀವಿ ಶೆಟ್ಟಿ ನಿಧನ

Suddi Udaya

ಕಾಶಿಪಟ್ಣ: ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya
error: Content is protected !!