27.8 C
ಪುತ್ತೂರು, ಬೆಳ್ತಂಗಡಿ
September 20, 2026
ಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ರೋಟರಿ ಕ್ಲಬ್ ಬೆಳ್ತಂಗಡಿ: 7.5 ಲಕ್ಷ ಸ್ಕಾಲರ್ ಶಿಪ್ ವಿತರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾ ನಗರ ಹಾಗೂ ರೋಟರಿ ಸೇವಾ ಟ್ರಸ್ಟ್ , ಶ್ರಿ ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ ಉಜಿರೆ ಇದರ ಜಂಟಿ ಆಶ್ರಯದಲ್ಲಿ ಕಾಶಿಬೆಟ್ಟುವಿನ ಬಳಿ ಇರುವ ರೋಟರಿ ಭವನದಲ್ಲಿ ನಡೆದ ವಿದ್ಯಾದಾನ್ ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 174 ವಿದ್ಯಾರ್ಥಿಗಳಿಗೆ 7.5 ಲಕ್ಷ ರೂ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಇದೇ ಸಂಧರ್ಭದಲ್ಲಿ ಡಾ ಶಶಿಕಾಂತ ಡೋಂಗ್ರೆ ಹಾಗೂ ಡಾ.ದೀಪಾಲಿ ಡೋಂಗ್ರೆ ದಂಪತಿಗಳು ಕಡಿರುದ್ಯಾವರದ ಹುಡುಗಿಯೋರ್ವಳಿಗೆ ಅವಳ ಮನೆ ನಿರ್ಮಾಣಕ್ಕಾಗಿ ರೂ.50000 ವನ್ನು ಹಸ್ತಾಂತರಿಸದರು.

ಉಜಿರೆಯ ಕಾಶಿಬೆಟ್ಟುವಿನಲ್ಲಿ ಇರುವ ರೋಟರಿ ಸೇವಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀಧರ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ರೋಟರಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಅದೇ ರೀತಿ ಮಾಜೀ ವಿಧಾನ ಪರಿಷತ್ ಸದಸ್ಯರೂ ಆದ ಪ್ರತಾಪಸಿಂಹ ನಾಯಕ್ , ರೋಟರಿ ಜಿಲ್ಲೆ 3181 ಇದರ 28-29 ರ ಸಾಲಿನ ಗವರ್ನರ್ ಡಾ.ಸೂರ್ಯನಾರಾಯಣ ಕೆ., ರೋಟರಿ ಇಂದಿರಾ ನಗರ ಇದರ ಅಧ್ಯಕ್ಷರಾದ ಗೋಪೀನಾಥ್, ರೋಟರಿ ಜಿಲ್ಲೆ 3192 ಇದರ ಲೆಪ್ಟಿನೆಂಟ್ ಗವರ್ನರ್ ಜಗದೀಶ್ ಮುಗುಳಿ, ರೋಟರಿ ಜಿಲ್ಲೆ 3181 ಝೋನ್ 4 ಇದರ ಅಸಿಸ್ಟೆಂಟ್ ಗವರ್ನರ್ ಡಾ ಶಶಿಧರ ಡೋಂಗ್ರೆ, ರೋಟರಿ‌ ಜಿಲ್ಲೆ 3192 ಇದರ ಮಾಜೀ ಗವರ್ನರ್ ಸುರೇಶ್ ಹರಿ, ರೋಟರಿ ಬೆಂಗಳೂರು ಇಂದಿರಾ ನಗರ ಇದರ ಪೂರ್ವಾಧ್ಯಕ್ಷರಾದ ಪಿಯೂಶ್ ಜೈನ್, ಶ್ರೀ ಕೃಷ್ಣ ಪಡುವೆಟ್ನಾಯ ಪ್ರತಿಷ್ಠಾನ ಉಜಿರೆ ಇದರ ಅಧ್ಯಕ್ಷರಾದ ಶ್ರೀಧರ ಪಡ್ವೆಟ್ನಾಯ, ರೋಟರಿ ಕ್ಲಬ್ ಬೆಳ್ತಂಗಡಿ ಇದರ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಶ್ರೀಧರ ಕೆ.ವಿ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು , ಅತಿಥಿಗಳಾದ ಡಾ.ಸೂರ್ಯನಾರಾಯಣ ಕೆ, ಜಗದೀಶ್ ಮುಗುಳಿ, ಸುರೇಶ್ ಹರಿ, ಪ್ರತಾಪಸಿಂಹ ನಾಯಕ್ , ಗೋಪಿನಾಥ್ , ಶ್ರೀಧರ ಪಡ್ವೆಟ್ನಾಯ, ಶ್ರುತಿ ಕಾಂತಾಜೆ, ನಾಗೇಂದ್ರ ನಾಯಕ್, ಸಿರಿ ಶರ್ಮ, ಇಂಚರಾ ಕಾರಂತ್ ಅವರುಗಳು ಶುಭ ಹಾರೈಸಿದರು.

ಸಂಕೇತಿಕವಾಗಿ 10 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ವಿದ್ಯಾನಗರ ಇದರ ಸದಸ್ಯರುಗಳು ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸದಸ್ಯರುಗಳು ಹಾಗೂ ಬೇರೆ ಬೇರೆ ಕಾಲೇಜುಗಳ ಪ್ರಾಂಶುಪಾಲರುಗಳು, ಪ್ರಾಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಂದೇಶ ರಾವ್ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.

Related posts

ರಾಣಿ ಅಬ್ಬಕ್ಕ 500 ವಿಶೇಷ ಉಪನ್ಯಾಸ ಕಾರ್ಯಕ್ರಮ: ಶ್ರೀಮತಿ ರಶ್ಮಿತಾ ಜೈನ್ ಇವರಿಗೆ ರಾಣಿ ಅಬ್ಬಕ್ಕ ವಿಶೇಷ ಪುರಸ್ಕಾರ

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಪ್ತಿ ಗೌಡ ರಾಜ್ಯಕ್ಕೆ ಪ್ರಥಮ

Suddi Udaya

ಮಡಂತ್ಯಾರು: ಕೊಲ್ಪೆದಬೈಲು ಅತಿ೯ಲ ನಿವಾಸಿ ಜನಾನಂದ ಆಚಾರ್ಯ ನಿಧನ

Suddi Udaya

ಮೇ 14: ಹತ್ಯಡ್ಕ ಪ್ರಾ.ಕೃ.ಪ. ಸಹಕಾರ ಸಂಘದ ನೂತನ “ಮುದ್ದಿಗೆ” ಶಾಖೆ” ಉದ್ಘಾಟನೆ

Suddi Udaya

ವೇಣೂರು: ಸುಮಾರು 6ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಿಸುದಾರರಿಗೆ ಹಸ್ತಾಂತರಿಸಿದ ಜಯಂತ್ ಶೆಟ್ಟಿ ಹಕ್ಕೇರಿ

Suddi Udaya
error: Content is protected !!