27.8 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಪ್ರಮುಖ ಸುದ್ದಿಸಂಘ-ಸಂಸ್ಥೆಗಳು

ಸಾನಿದ್ಯ ರೋಟರಿ ಸಭಾ ಭವನ ಲೋಕಾರ್ಪಣೆ-ಚೆಕ್ ವಿತರಣಾ ಸಮಾರಂಭ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾ ನಗರ ಹಾಗೂ ಸಾನಿದ್ಯ ಸ್ಕಿಲ್ ಟ್ರೈನಿಂಗ್ ಸೆಂಟರ್ ಉಜಿರೆ ಇದರ ಆಶ್ರಯದಲ್ಲಿ ನಡೆದಂತಹ ಸಾನಿಧ್ಯ ರೋಟರಿ ಸಭಾ ಭವನ ಉದ್ಘಾಟನೆ ಹಾಗೂ ರೂ. ಏಳು ಲಕ್ಷದ ಚೆಕ್ ವಿತರಣಾ ಸಮಾರಂಭವು ಸೆ.20ರಂದು ಉಜಿರೆಯ ಸಾನಿಧ್ಯ ಸ್ಕಿಲ್ ಟ್ರೈನಿಂಗ್ ಸೆಂಟರ್ ನಲ್ಲಿ ನಡೆಯಿತು

ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಅವರು ಸಭಾಭವನವನ್ನು ಉದ್ಘಾಟಿಸಿ, ಲೋಕಾರ್ಪಣೆ ಮಾಡಿದರು.
ಶ್ರೀಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಮಹಾಬಲ ಮಾರ್ಲ
ಅಧ್ಯಕ್ಷ ಸ್ಥಾನ ವಹಿಸಿದ್ದರು.

ಈ ಸಂಧರ್ಭದಲ್ಲಿ ನಿಕಟಪೂರ್ವ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಶ್ರೀಧರ ಕೆ.ವಿ, ರೋಟರಿ ಜಿಲ್ಲೆ 3181 , ಝೊನ್ 4 ಇದರ ಅಸಿಸ್ಟೆಂಟ್ ಗವರ್ನರ್ ಡಾ ಶಶಿಧರ ಡೋಂಗ್ರೆ, ರೋಟರಿ ಕ್ಲಬ್ ಬೆಳ್ತಂಗಡಿಯ ಕಾರ್ಯದರ್ಶಿ ಡಾ ರಾಘವೇಂದ್ರ ಪಿದಮಲೆ, ರೋಟರಿ ಬೆಂಗಳೂರು ಇಂದಿರಾ ನಗರ ಇದರ ಅಧ್ಯಕ್ಷರಾದ ಗೋಪಿನಾಥ್, ರೋಟರಿ ಜಿಲ್ಲೆ 3192 ಇದರ ಲೆಪ್ಟಿನೆಂಟ್ ಗವರ್ನರ್ ಜಗದೀಶ್ ಮುಗುಳಿ, ಅವರ ಧರ್ಮಪತ್ನಿ ಮಾಲತಿ ಜಗದೀಶ್, ರೋಟರಿ ಬೆಂಗಳೂರು ಇಂದಿರಾ ನಗರ ಇದರ ನಿಯೋಜಿತ ಅಧ್ಯಕ್ಷರಾದ ನರಸಿಂಹನ್ ಕಣ್ಣನ್, ರೋಟರಿ ಬೆಂಗಳೂರು ದಿಶಾ ಇದರ ಸದಸ್ಯೆ ಖ್ಯಾತ ಹಿನ್ನಲೆ ಗಾಯಕಿ ದಿವ್ಯಾ ರಾಘವನ್, ಶ್ರೀ ಗಣೇಶ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಮಹಾಬಲ ಮಾರ್ಲ, ಸಾನಿದ್ಯ ಸ್ಕಿಲ್ ಸೆಂಟರ್ ನ ಸಂಚಾಲಕರಾದ ವಸಂತ ಕುಮಾರ್ ಶೆಟ್ಟಿ , ರೋಟರಿ ಜಿಲ್ಲೆ 3192 ಇದರ ಜಿಲ್ಲಾ ಕಾರ್ಯದರ್ಶಿ ಸುಪ್ರಿಯಾ ಕಂದಾರಿ, ಉಪಸ್ಥಿತರಿದ್ದರು ಹಾಗೂ ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದಂತಹ ಡಾ.ಮಂಜುಳಾ ಉಪಸ್ಥಿತರಿದ್ದರು.

ಶಾಸಕರಾದ ಹರೀಶ ಪೂಂಜಾ ಅವರು ರಿಬ್ಬನ್ ಬಿಡಿಸುವ ಮೂಲಕ ಸಾನಿದ್ಯ ರೋಟರಿ ಸಭಾಭವನವನ್ನು ಉದ್ಘಾಟಿಸಿ, ಬೆಂಗಳೂರಿನ ಜಗದೀಶ್ ಮುಗುಳಿ ಅವರು ಉಧ್ಘಾಟನಾ ಫಲಕವನ್ನು ಅನಾವರಣ ಗೊಳಿಸಿದರು. ನಂತರ ವೇದಿಕೆಯಲ್ಲಿದ್ದ ಎಲ್ಲಾ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಸಭಾ ಭವನದ ಅಧಿಕೃತವಾಗಿ ಉದ್ಘಾಟನೆ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ರವರು ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಕೇವಲ ಸರಕಾರದಿಂದ ಮಾಡಲು ಸಾಧ್ಯವಿಲ್ಲ, ರೋಟರಿ ಕ್ಲಬ್ ನಂತಹ ಸಂಸ್ಥೆಗಳು ನೇತೃತ್ವ ವಹಿಸಿಕೊಂಡರೆ ಸಮಾಜದಲ್ಲಿ ಅಭಿವೃಧ್ದಿ ಕಾರ್ಯಗಳು ಸಾಧ್ಯ. ಅದೇ ರೀತಿ ಸಾನಿದ್ಯ ಸಂಸ್ಥೆಯಂತ ಸಂಸ್ಥೆಗಳ ಅಭಿವೃದ್ದಿ ಕಾರ್ಯದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಸ್ವರಸ್ವತಿ ಸಂಸ್ಥೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯವರು ಕೊಡಮಾಡಿದ ರೂ. 7 ಲಕ್ಷದ ಚೆಕ್ ನ್ನು ಸಾನಿದ್ಯ ಸಂಸ್ಥೆಯವರಿಗೆ ಹಸ್ತಾಂತರಿಸಲಾಯಿತು. ಸಾನಿದ್ಯ ಸಂಸ್ಥೆಯನ್ನು ನಡೆಸುತ್ತಿರುವ ಶ್ರೀ ಗಣೇಶ ಸೇವಾ ಟ್ರಸ್ಟ್ ಮಂಗಳೂರು ಇವರಿಂದ ಈ ಸಭಾ ಭವನದ ನಿರ್ಮಾಣಕ್ಕೆ ಸಹಕರಿಸಿದ ಬೆಂಗಳೂರಿನ ಜಗದೀಶ್ ಮುಗುಳಿ ದಂಪತಿಗಳನ್ನು ಹಾಗೂ ಸ್ವರಸ್ವತಿ ಸಂಸ್ಥೆಯ ಗಾಯಕರುಗಳಾದ ನರಸಿಂಹನ್ ಕಣ್ಣನ್ ಹಾಗೂ ದಿವ್ಯಾ ರಾಘವನ್ ಅವರುಗಳನ್ನು ಸನ್ಮಾನಿಸಲಾಯಿತು.

ಸಾನಿದ್ಯ ಸಂಸ್ಥೆಗಳ ಸಂಚಾಲಕರಾದ ವಸಂತ ಕುಮಾರ ಶೆಟ್ಟಿ ಬಂದಂತಹ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ಧನಂಜಯ ರಾವ್ ಅವರು ನಿರೂಪಿಸಿ, ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀಧರ ಕೆ.ವಿ ವಂದಿಸಿದರು.

Related posts

ಅಳದಂಗಡಿ ಸಿಎ ಬ್ಯಾಂಕಿನಿಂದ ರೂ.25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆ

Suddi Udaya

ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿ ಮೃತ್ಯು

Suddi Udaya

ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮಹಾಸಭೆ- ರೂ.116 ಕೋಟಿ ವ್ಯವಹಾರ, ರೂ.47.22 ಲಕ್ಷ ಲಾಭ, ಶೇ.11 ಡಿವಿಡೆಂಟ್

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್‌ನಿಂದ 542ನೇ ಸೇವಾ ಯೋಜನೆ: ಅ.1: 11 ಆಶ್ರಮಗಳಿಗೆ ಅಕ್ಕಿ, 11 ಬಡರೋಗಿಗಳಿಗೆ ವಸ್ತ್ರ, 11 ವಿವಿಧ ಬಗೆಯ ಹಣ್ಣುಹಂಪಲು ವಿತರಣೆ: ಡಿ.28: ಮಂಗಳೂರಿನಲ್ಲಿ 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ

Suddi Udaya

ಮೂರನೆ ಭಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ: ಕುವೆಟ್ಟು ಬಿಜೆಪಿ ಕಾರ್ಯಕರ್ತರಿಂದ ಚಾ-ತಿಂಡಿ, ಸ್ವೀಟ್ ಹಂಚಿ, ಸುಡುಮದ್ದು ಪ್ರದರ್ಶನ ಮೂಲಕ ಸಂಭ್ರಮ

Suddi Udaya
error: Content is protected !!