28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಸೂಚನೆ ಮೇರೆಗೆ ; ಧರ್ಮಸ್ಥಳ- ಉಜಿರೆ-ಬೆಳಾಲು- ಬಂದಾರು- ಮೊಗ್ರು ಅಲೆಕ್ಕಿ – ಇಳoತಿಲ-ಉಪ್ಪಿನಂಗಡಿ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

ಬಂದಾರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ವಿಶೇಷ ಕಾಳಜಿ ಹಾಗೂ ಸೂಚನೆಯ ಮೇರೆಗೆ, ಧರ್ಮಸ್ಥಳದಿಂದ ಉಜಿರೆ, ಬಂದಾರು, ಇಳಂತಿಲ,ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ನೂತನ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಸೇವೆಗೆ ಇತ್ತೀಚೆಗೆ ಪ್ರಾರಂಭಗೊಂಡಿದೆ .

ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಅನುಕೂಲಕರವಾಗಿದೆ. ಬೆಳಗ್ಗೆ ಧರ್ಮಸ್ಥಳದಿಂದ ಬೆಳಾಲು, ಬಂದಾರು, ಮೊಗ್ರು ಹಾಗೂ ಇಳಂತಿಲ ಮಾರ್ಗವಾಗಿ ಉಪ್ಪಿನಂಗಡಿಗೆ ಸಂಚರಿಸಿ, ಸಂಜೆ ಉಪ್ಪಿನಂಗಡಿ, ಇಳಂತಿಲ, ಮೊಗ್ರು ಅಲೆಕ್ಕಿ, ಬಂದಾರು, ಬೆಳಾಲು, ಉಜಿರೆ ಸಂಚರಿಸುತ್ತಿದೆ, ಈ ಮಾರ್ಗವಾಗಿ ತೆರಳುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಈ ಬಸ್ ಸೇವೆ ನಿತ್ಯದ ಪ್ರಯಾಣವನ್ನು ಸುಲಭಗೊಳಿಸಲಿದೆ. ಈ ಭಾಗದ ಗ್ರಾಮೀಣ ರಸ್ತೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕೆಂಬುದು ಸ್ಥಳೀಯ ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಯಾಗಿತ್ತು. ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಸ್ ಮಂಜೂರು ಮಾಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಈ ನೂತನ ಬಸ್ ಸೇವೆಯಿಂದಾಗಿ ಉಜಿರೆ, ಬೆಳಾಲು, ಬಂದಾರು, ಮೊಗ್ರು, ಇಳಂತಿಲ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಪ್ರಯಾಣಿಕರಿಗೆ ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವುದು ಇನ್ಮುಂದೆ ಸರಳವಾಗಲಿದೆ. ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಶಾಸಕ ಹರೀಶ್ ಪೂಂಜ ಹಾಗೂ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಪತ್ನಿ-ಮಗಳ ಮೇಲೆ ಪತಿಯಿಂದ ಮಾರಾಣಾಂತಿಕ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು: ಪೊಲೀಸರ ತನಿಖೆ

Suddi Udaya

ರುಡ್‌ಸೆಟ್ ಉಜಿರೆಯಲ್ಲಿ ಅಣಬೆ ಬೇಸಾಯ ತರಬೇತಿ ಸಮಾರೋಪ

Suddi Udaya

ಶಿವಳ್ಳಿ ಸಮಾಜದ ಅರಸಿನಮಕ್ಕಿ ವಲಯದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶಾಲಾ ಸಂಸತ್ತು ಚುನಾವಣೆ

Suddi Udaya

ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ

Suddi Udaya
error: Content is protected !!