28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಗ್ರಾ.ಪಂ. ನಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜ ವಿತರಣೆ

ಉಜಿರೆ : ಐಸಿಎಆರ್ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡು ಕೇರಳ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಹಾಗೂ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಇವರ ಸಂಯುಕ್ತ ಆಶಯದಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮ ಸೆ.21ರಂದು ಉಜಿರೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷೆ ವಿನುತ ರಜತ್ ಗೌಡ ಅಧ್ಯಕ್ಷತೆ ವಹಿಸಿ,ಇದು ಬಹಳ ಒಳ್ಳೆಯ ಕಾರ್ಯಕ್ರಮ ರೈತರು ಇದನ್ನು ಬಳಸಿಕೊಂಡು ಉತ್ತಮ ಆದಾಯದೊಂದಿಗೆ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು. ಸರಕಾರ ವಿಜ್ಞಾನಿಗಳನ್ನು ಮತ್ತು ರೈತರನ್ನು ಒಂದು ಗೂಡಿಸಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸರಕಾರ ಮತ್ತು ವಿಜ್ಞಾನಿ ಗಳ ಶ್ರಮವನ್ನು ಶ್ಲಾಘಿಸಿದರು. ನಂತರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಆದ ಡಾ. ಟಿಜೆ ರಮೇಶ್ ರವರು ಈ ಹಿಂದೆ ಉಜಿರೆ ಗ್ರಾಮದಲ್ಲಿ 25 ರೈತರಿಗೆ ತೆಂಗಿನ ಸಸಿ ವಿತರಣೆ ಮಾಡಿದ್ದು ಉತ್ತಮವಾಗಿ ಬಂದಿರುತ್ತದೆ ಆದ್ದರಿಂದ ರೈತರಿಗೆ ತರಕಾರಿ ಬೀಜವನ್ನು ವಿತರಿಸಿ ಮತ್ತೆ ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆನ್ನುವುದೇ ಐಸಿಎಆರ್ ವಿಜ್ಞಾನಿಗಳ ಮುಖ್ಯ ಉದ್ದೇಶವಾಗಿದೆ ಇದನ್ನು ರೈತರು ಬಳಸಿಕೊಂಡು ಉತ್ತಮ ಆದಾಯ ಪಡೆಯಬೇಕು ಎಂದು ತಿಳಿಸಿದರು.

ಐಸಿಎಆರ್ ಕಾಸರಗೋಡು ವಿಜ್ಞಾನಿ ಡಾ. ರಾಜಕುಮಾರ್ ಮಾತಾಡಿ ಕೊಟ್ಟಿರುವ ಬಿತ್ತನೆ ಬೀಜವನ್ನು ಉತ್ತಮವಾಗಿ ಬೆಳೆದು ಅದರ ಮಾಹಿತಿಯನ್ನು ನಮಗೆ ತಿಳಿಸಬೇಕು ಹಾಗೂ ಮುಂದೆಯೂ ಇಂತಹ ಯೋಜನೆಗಳು ಬಂದಲ್ಲಿ ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಆದ ಪ್ರಕಾಶ್ ಶೆಟ್ಟಿ ನೊಚ್ಚ ಇವರು ಐಸಿಎಆರ್ ಸಂಸ್ಥೆಯ ಬಹಳ ಒಳ್ಳೆಯ ಸಂಸ್ಥೆಯಾಗಿದ್ದು ಉತ್ತಮವಾದ ತರಕಾರಿ ಬೀಜಗಳು ರೈತರಿಗೆ ತುಂಬಾ ಉಪಯೋಗವಾಗಲಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ್ ಮಯ್ಯ ಜೀವಾಮೃತ ಹಾಗೂ ಸಾವಯವ ಕೃಷಿ ಮಾಡುವ ವಿಧಾನವನ್ನು ರೈತರಿಗೆ ಸವಿವರವಾಗಿ ತಿಳಿಸಿದರು. ತರಕಾರಿ ಕೃಷಿ ಮಾಡುವ ವೈಜ್ಞಾನಿಕ ವಿಧಾನದ ಬಗ್ಗೆ ರೈತರಿಗೆ ತರಬೇತಿ ನೀಡಿ ತರಕಾರಿ ಬೀಜಗಳನ್ನು ವಿತರಿಸಲಾಯಿತು.

ಪ್ರೇರಣಾ ಸಂಜೀವಿನಿ ಒಕ್ಕೂಟ ದ ಕೃಷಿ ಸಖಿ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆಗೈದು , ಸ್ವಾಗತಿಸಿದರು. ಒಕ್ಕೂಟದ ಸಂಧ್ಯಾ ಧನ್ಯವಾದವಿತ್ತರು.

Related posts

ಶ್ರೀ ಕ್ಷೇತ್ರ ಧ.ಗ್ರಾ. ಯೋ. ಗ್ರಾಮೀಣ ಶ್ರೇಷ್ಟ್ರತ ತರಬೇತಿ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿ ಅನ್ವಿತ್ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಶ್ರದ್ಧಾ ಶೆಟ್ಟಿ ಎಣಿoಜೆ ರವರಿಗೆ ಸನ್ಮಾನ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Suddi Udaya

ಪದ್ಮುಂಜ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ, ಉಪಾಧ್ಯಕ್ಷರಾಗಿ ಉಮೇಶ್ ಗೌಡ ಆಯ್ಕೆ

Suddi Udaya

ತೆಕ್ಕಾರುನಲ್ಲಿ ಗುಡ್ಡ ಜರಿದು ಅಪಾರ ಹಾನಿ

Suddi Udaya
error: Content is protected !!