28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೋಟತ್ತಾಡಿಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

ಬೆಳ್ತಂಗಡಿ: ತಾಲೂಕಿನ ತೋಟತ್ತಾಡಿ ಗ್ರಾಮದ ಕೊಯಕ್ಕುರಿ ಎಂಬಲ್ಲಿ ಖಾಸಿಂ ಬ್ಯಾರಿ ಅವರ ಮನೆಗೆ ಸೆ.21 ರಂದು ಮಧ್ಯಾಹ್ನ ಸಿಡಿಲು ಬಡಿದು ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಿಡಿಲಿನ ತೀವ್ರ ಹೊಡೆತಕ್ಕೆ ಮನೆಯ ವಿದ್ಯುತ್‌ ವಯರಿಂಗ್‌ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ವಿದ್ಯುತ್‌ ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದೆ. ಮನೆಯಲ್ಲಿದ್ದ ಕೆಲವು ವಿದ್ಯುತ್‌ ಉಪಕರಣಗಳಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಇದಲ್ಲದೆ ಮನೆಯ ಗೋಡೆ, ಮನೆ ಸಮೀಪ ಇರುವ ತಡೆಗೋಡೆಗೂ ಹಾನಿ ಉಂಟಾಗಿದೆ.


ಸಿಡಿಲಿನ ಪರಿಣಾಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲೂ ಹಾನಿ ಸಂಭವಿಸಿದ್ದು, ತೋಟದಲ್ಲಿನ ಬೆಳೆಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸೋಮವಾರ ಮಧ್ಯಾಹ್ನ ತಾಲೂಕಿನ ಬಹುತೇಕ ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

Related posts

ಮಹೇಶ್‌ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Suddi Udaya

ದಿಡುಪೆ ಜಲಪಾತದಲ್ಲಿ ಅರಣ್ಯ ವಾಚರ್ ಮೇಲೆ ಹಲ್ಲೆ: ಹಣ ದೋಚಿ ಪರಾರಿ

Suddi Udaya

ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನವೀನ್ ಕೆ. ಸಾಮಾನಿ ಬೆಂಬಲ

Suddi Udaya

ಮಚ್ಚಿನ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಶ್ರಮದಾನ ಕಾರ್ಯಕ್ರಮ

Suddi Udaya

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

Suddi Udaya
error: Content is protected !!