September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತುಳುವಿಗೆ ಆಡಳಿತ ಭಾಷೆ ಸ್ಥಾನಮಾನ ಕರಾವಳಿಯ ಭಾಷೆ–ಸಂಸ್ಕೃತಿಗೆ ಸಿಕ್ಕ ಗೌರವ: ಅನಿಲ್ ಕುಮಾರ್ ಯು

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್ ಯು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ತುಳು ಕೇವಲ ಸಂವಹನದ ಭಾಷೆಯಲ್ಲ; ಅದು ಕರಾವಳಿಯ ಜನಜೀವನ, ಸಂಸ್ಕೃತಿ, ಪರಂಪರೆ ಮತ್ತು ಆಚಾರ–ವಿಚಾರಗಳ ಅವಿಭಾಜ್ಯ ಅಂಗವಾಗಿದೆ. ಹಲವು ವರ್ಷಗಳ ಬೇಡಿಕೆಗೆ ದೊರೆತಿರುವ ಈ ಮಾನ್ಯತೆ ತುಳು ಭಾಷೆ ಹಾಗೂ ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಗೆ ನೀಡಿದ ಗೌರವವಾಗಿದೆ ಎಂದು ಅವರು ತಿಳಿಸಿದ್ದಾರೆ.

ತುಳುವಿಗೆ ಸ್ಥಾನಮಾನ ನೀಡುವುದರ ಜೊತೆಗೆ ಅದರ ಪರಿಣಾಮಕಾರಿ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು. ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸೇವೆಗಳಲ್ಲಿ ತುಳು ಬಳಕೆಗೆ ಅಗತ್ಯವಾದ ಅನುವಾದ, ತರಬೇತಿ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸಬೇಕು. ಸರ್ಕಾರದ ಯೋಜನೆಗಳು ಮತ್ತು ಜನರ ಹಕ್ಕುಗಳ ಮಾಹಿತಿ ಸಾಮಾನ್ಯ ಜನರಿಗೆ ಅವರ ಮಾತೃಭಾಷೆಯಲ್ಲಿಯೂ ತಲುಪುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಗೌರವವನ್ನು ಉಳಿಸಿಕೊಂಡೇ ತುಳು ಸೇರಿದಂತೆ ಕರಾವಳಿಯ ಭಾಷಾ–ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ತುಳುವಿಗೆ ದೊರೆತ ಈ ಮಾನ್ಯತೆ ಮುಂದಿನ ಪೀಳಿಗೆಗೂ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶಕ್ತಿಯಾಗಲಿ ಎಂದು ಅನಿಲ್ ಕುಮಾರ್ ಯು ಆಶಿಸಿದ್ದಾರೆ.

Related posts

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವಿನೂತನ ‘ಸಿರಿ ಮಿಲ್ಲೆಟ್ ಕೆಫೆ’ ಧಾರವಾಡದಲ್ಲಿ ಶುಭಾರಂಭ

Suddi Udaya

ನಾವೂರು: ಕಾಂತಪ್ಪ ಮೂಲ್ಯರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಕಣಿಯೂರು: ದೀಪಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ದ.ಕ ಜಿಲ್ಲಾ ನಾಯಕರ ಉಪಸ್ಥಿತಿಯಲ್ಲಿ ಎಸ್‌ಡಿಪಿಐ ಕುವೆಟ್ಟು ಬ್ಲಾಕ್ ಸಮಾಗಮ

Suddi Udaya

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

Suddi Udaya
error: Content is protected !!