September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ತಾಲೂಕು ಪಂಚಾಯತ್, ಬೆಳ್ತಂಗಡಿ ನಗರ ಪಂಚಾಯತ್, ಮಹಾತ್ಮ ಗಾಂಧಿ ಮಡಂತ್ಯಾರು ಗ್ರಾಮ ಪಂಚಾಯತ್, ತಾಲೂಕು ಯುವಜನ ಒಕ್ಕೂಟ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸೇಕ್ರೆಡ್ ಹಾರ್ಟ್ ಪದವಿ ಕಾಲೇಜ್ ಮಡಂತ್ಯರ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2026–27 ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಮೈದಾನ, ಮಡಂತ್ಯಾರಿನಲ್ಲಿ ಸೆ. 20ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಭವಾನಿ ಶಂಕರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ್ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಡಾ. ಸ್ಟಾನಿ ಗೋವಿಯಸ್, ಪ್ರಾಂಶುಪಾಲರಾದ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಹಾಗೂ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ವಿಜಯಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಸ್ಪೋರ್ಟ್ಸ್ ಕ್ಲಬ್, ಉಜಿರೆಯ ಕ್ರೀಡಾ ಕಾರ್ಯದರ್ಶಿ ರಮೇಶ್ ಎಚ್., ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಫ್ರಾನ್ಸಿಸ್ ವಿಬಿ, ಅಜಿತ್ ಕುಮಾರ್ ಕೊಕ್ರಾಡಿ ಶ್ರೀನಿವಾಸ್ ಡಿ ಎಸ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಡಂತ್ಯಾರು , ಕ್ರೀಡಾಕೂಟದ ನೋಡಲು ಅಧಿಕಾರಿಗಳಾದ ಡಾ| ಪ್ರಕಾಶ್ ಡಿಸೋಜಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಾಂತಪ್ಪ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳಿಂದ ವಂದೇ ಮಾತರಂ ಹಾಗೂ ನಾಡಗೀತೆ ಗಾಯನ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಅವರು ಸ್ವಾಗತಿಸಿದರು.ಕಾರ್ಯಕ್ರಮವನ್ನು ವಸಂತ್ ಶೆಟ್ಟಿ ನಿರೂಪಿಸಿದರು. ಶಾಂತಪ್ಪ ವಂದಿಸಿದರು.


ತಾಲೂಕಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಹಾಗೂ ಕ್ರೀಡಾಪಟುಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ದಸರಾ ಕ್ರೀಡಾಕೂಟ ಫಲಿತಾಂಶ:
ಪುರುಷರ ವಿಭಾಗ: ೧೦೦ ಮೀ. ಓಟ- – ಪ್ರಥಮ – ಮಂಜು ಎಮ್ ಎಸ್ .ಡಿ.ಎಂ, ಉಜಿರೆ, ದ್ವಿತೀಯ, – ಮಹೇಶ, ಪ್ರಸನ್ನ ಕಾಲೇಜು,
ತೃತೀಯ – ಆಕಾಶ್ ,ಎಸ್ .ಡಿ.ಎಂ, ಉಜಿರೆ, ೨೦೦ ಮೀ. ಓಟ- ಪ್ರಥಮ – ಮಂಜು ಎಮ್ ,ಎಸ್ .ಡಿ.ಎಂ, ಉಜಿರೆ, ದ್ವಿತೀಯ – ಆಕಾಶ್ , ಎಸ್ .ಡಿ.ಎಂ, ಉಜಿರೆ, ಕಿಶನ್ -ತೃತೀಯ, ಬೆಳ್ತಂಗಡಿ , ೪೦೦ ಮೀ. ಓಟ- ಪ್ರಥಮ – ಪ್ರೀತೇಶ್ ,ಸೇಕ್ರೆಡ್ ಹಾರ್ಟ್, ಮಡಂತ್ಯಾರು, ದ್ವಿತೀಯ – ಆನಂದ್ – ವಾಣಿ, ಬೆಳ್ತಂಗಡಿ , ತೃತೀಯ – ಹರ್ಷ, ಎಸ್ .ಡಿ.ಎಂ, ಉಜಿರೆ, ೮೦೦ ಮೀ. ಓಟ – ಪ್ರಥಮ – ಪ್ರೀತೇಶ್ ,ಸೇಕ್ರೆಡ್ ಹಾರ್ಟ್, ಮಡಂತ್ಯಾರು, ದ್ವಿತೀಯ- ಆಶ್ಲೇಶ್ , ಎಸ್ .ಡಿ.ಎಂ, ಉಜಿರೆ, ತೃತೀಯ – ಕೀರ್ತನ್, ಬಂದಾರು ೧೫೦೦ ಮೀ. ಓಟ – ಪ್ರಥಮ – ಭರತ್ ಕುಮಾರ್ , ಎಸ್ .ಡಿ.ಎಂ, ಉಜಿರೆ, ದ್ವಿತೀಯ – ಮೋಹನಾನಂದ, ಸೇಕ್ರೆಡ್ ಹಾರ್ಟ್, ಮಡಂತ್ಯಾರು, ತೃತೀಯ – ಕೀರ್ತನ್, ಬಂದಾರು ೫೦೦೦ ಮೀ. ಓಟ – ಪ್ರಥಮ – ಪರಾಗ್ ಲಮಾರೆ , ಎಸ್ .ಡಿ.ಎಂ, ಉಜಿರೆ,
ದ್ವಿತೀಯ – ವಾಹಿದ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ತೃತೀಯ- ಚೇತನ್ , ಬೆಳ್ತಂಗಡಿ

೧೧೦ ಮೀ. ಹರ್ಡಲ್ಸ್ : ಪ್ರಥಮ – ಭುವನ್ ಎಸ್ ಎಸ್ , ಎಸ್ .ಡಿ.ಎಂ, ಉಜಿರೆ, ದ್ವಿತೀಯ – ಮುರಳೀಕೃಷ್ಣ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ತೃತೀಯ – ವಿನೋದ್ , ಉಜಿರೆ ಪ್ರೆಂಡ್ಸ್ ಉದ್ದ ಜಿಗಿತ: ಪ್ರಥಮ – ಕೆವಿನ್ ಮಡಂತ್ಯಾರು ದ್ವಿತೀಯ – ಫಾಯಿಜ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ತೃತೀಯ – ರೋಹಣ್ , ವಾಣಿ ಬೆಳ್ತಂಗಡಿ ಎತ್ತರ ಜಿಗಿತ : ಪ್ರಥಮ – ಮುರಳೀಕೃಷ್ಣ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ದ್ವಿತೀಯ – ವಿನೋದ್ , ಉಜಿರೆ ತೃತೀಯ – ನಿಖಿತ್ , ಸರಕಾರಿ ಪದವಿ ಕಾಲೇಜು, ಬೆಳ್ತಂಗಡಿ
ಟ್ರಿಪಲ್ ಜಂಪ್ – ಪ್ರಥಮ – ಕೆವಿನ್, ಮಡಂತ್ಯಾರು ದ್ವಿತೀಯ – ಫಾಯಿಜ್ , ಮಡಂತ್ಯಾರು ತೃತೀಯ – ರೋಹಣ್ , ವಾಣಿ ಬೆಳ್ತಂಗಡಿ ಡಿಸ್ಕಸ್ ಥ್ರೋ: ಪ್ರಥಮ – ಸುಮಂತ್ ಬಿ ದ್ವಿತೀಯ – ದೀಪಕ್ ತೃತೀಯ – ಮಂಜುನಾಥ್ಗು ೦ಡು ಎಸೆತ – ಪ್ರಥಮ – ದೀಪಕ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ದ್ವಿತೀಯ – ಆಕಾಶ್ ಎಸ್ ಸುಂದರ್ ತೃತೀಯ – ವೀಘ್ನೇಶ್
ಜಾವಲಿನ್ ಥ್ರೋ – ಪ್ರಥಮ – ಕಿಶೋರ್ ಎಸ್, ದ್ವಿತೀಯ – ಚರಣ್, ತೃತೀಯ- ಸುದೀಪ್
೪x೧೦೦ ಮೀ. ರಿಲೇ – ಪ್ರಥಮ- ಮಂಜು, ವರುಣ್, ಯಶವಂತ್, ಅನೀಶ್, ದ್ವಿತೀಯ – ಶ್ರೇಯಸ್ , ಸುದೀಪ್ ಶೆಟ್ಟಿ, ಮಹಮ್ಮದ್ ಅಸ್ಪಕ್, ಮಹಮ್ಮದ್ ಮಿಸ್ಬಾ, ತೃತೀಯ – ಫಾಯಿಜ್ , ರಿತೇಶ್ , ಕೆವಿನ್, ವಾಯಿದ್
೪x೪೦೦ ಮೀ. ರಿಲೇ – ಪ್ರಥಮ – ಮೋಹನಾನಂದ, ಪ್ರೀತೇಶ್, ವರುಣ್, ವಾಯಿದ್ , ದ್ವಿತೀಯ – ಸುದೀಪ್ ಶೆಟ್ಟಿ, ಕಿಶನ್ , ಮುರಳೀಕೃಷ್ಣ, ಶ್ರೇಯಸ್, ತೃತೀಯ – ಸನತ್ ಕುಮಾರ್ , ಚೇತನ್ , ಪುನೀತ್ , ರವಿ
೧೦೦೦೦ ಮೀ. ಓಟ – ಪ್ರಥಮ – ದರ್ಶನ್ ಜೆ. ಆರ್, ದ್ವಿತೀಯ – ಪುನೀತ್ ಕುಮಾರ್, ತೃತೀಯ – ವೈಭವ್ , ಪುರುಷರ ವಿಭಾಗ: (ಗುಂಪು) ವಾಲಿಬಾಲ್ – ಪ್ರಥಮ, ಎಸ್ .ಡಿ.ಎಂ ಡಿಗ್ರಿ ಕಾಲೇಜು, ಉಜಿರೆ, ದ್ವಿತೀಯ – ಎಸ್ .ಡಿ.ಎಂ. ಪಿ.ಯು. ಕಾಲೇಜು ಉಜಿರೆ

ಫುಟ್ಬಾಲ್ – ಪ್ರಥಮ – ಯುನೈಟೆಡ್ ಸೋಸರ್ಸ್, ಉಜಿರೆ, ದ್ವಿತೀಯ – ಕುಂಟಿನಿ, ಎಪ್, ಸಿ ಕಬಡ್ಡಿ – ಪ್ರಥಮ ಎಸ್ .ಡಿ.ಎಂ, ಉಜಿರೆ, ದ್ವಿತೀಯ, ಎಸ್ .ಡಿ.ಎಂ, ನ್ಯಾಚುರೋಪತಿ, ಥ್ರೋಬಾಲ್ – ಪ್ರಥಮ, ಬೆಳ್ತಂಗಡಿ ತಂಡ, ದ್ವಿತೀಯ, ವಾಣಿ ಕಾಲೇಜು ಖೋ-ಖೋ- ಪ್ರಥಮ, ಸರಕಾರಿ ಪದವಿ ಕಾಲೇಜು, ಬೆಳ್ತಂಗಡಿ, ದ್ವಿತೀಯ, ನೈನಾಡು ಬಿ ತಂಡ

ಪುರುಷರ ವಿಭಾಗ: (ಯೋಗ) ಸಾಂಪ್ರದಾಯಿಕ ಯೋಗಾಸನ : ಪ್ರಥಮ – ಸ್ವರೂಪ್ ಎಸ್ .ಡಿ.ಎಂ, ನ್ಯಾಚುರೋಪತಿ ಕಾಲೇಜು, ಉಜಿರೆ ದ್ವಿತೀಯ – ಆರಾಧ್ಯ ಎಸ್ .ಡಿ.ಎಂ, ನ್ಯಾಚುರೋಪತಿ ಕಾಲೇಜು, ಉಜಿರೆ, ತೃತೀಯ – ಭಾನುರಂಜನ್ , ಎಸ್ .ಡಿ.ಎಂ, ನ್ಯಾಚುರೋಪತಿ ಕಾಲೇಜು, ಉಜಿರೆ, ಕಲಾತ್ಮಕ ಯೋಗಾಸನ : ಪ್ರಥಮ – ಸ್ವರೂಪ್, ಎಸ್ .ಡಿ.ಎಂ, ನ್ಯಾಚುರೋಪತಿ ಕಾಲೇಜು, ಉಜಿರೆ, ದ್ವಿತೀಯ – ನಿಶ್ಚಲ್ ,ಸರಕಾರಿ ಪ್ರೌಢ ಶಾಲೆ, ಕಲ್ಮಂಜ, ತೃತೀಯ – ಆಯುಷ್ , ಸರಕಾರಿ ಪ್ರೌಢ ಶಾಲೆ, ಕಲ್ಮಂಜ
ತಾಳಬದ್ಧ ಯೋಗಾಸನ (ಜೋಡಿ), ಪ್ರಥಮ, – ಸಂಕೇತ್ , ಆಯುಷ್ , ಸರಕಾರಿ ಪ್ರೌಢ ಶಾಲೆ, ಕಲ್ಮಂಜ
ಕಲಾತ್ಮಕ ಯೋಗಾಸನ (ಜೋಡಿ), ಪ್ರಥಮ – ನಿಶ್ಚಲ್ , ಸಂಕಿತ್ – ಸರಕಾರಿ ಪ್ರೌಢ ಶಾಲೆ, ಕಲ್ಮಂಜ
ಮಹಿಳೆಯರ ವಿಭಾಗ (ವೈಯಕಿಕ) ೧೦೦ ಮೀ. ಓಟ: ಪ್ರಥಮ – ಸ್ಪಂದನ, ಎಸ್ .ಡಿ.ಎಂ, ಉಜಿರೆ, ದ್ವಿತೀಯ – ನಿತ್ಯಶ್ರೀ , ಎಸ್ .ಡಿ.ಎಂ, ಉಜಿರೆ, ತೃತೀಯ – ಸಮೀಕ್ಷಾ , ಎಸ್ .ಡಿ.ಎಂ, ಉಜಿರೆ, ೨೦೦ ಮೀ. ಓಟ: ಪ್ರಥಮ – ಸಮೀಕ್ಷಾ ದ್ವಿತೀಯ – ಅಕ್ಷಿತಾ
ತೃತೀಯ – ಧನುಶ್ರೀ, ೪೦೦ ಮೀ. ಓಟ: ಪ್ರಥಮ – ಸ್ಪಂದನ, ಎಸ್ .ಡಿ.ಎಂ, ಉಜಿರೆ, ದ್ವಿತೀಯ – ದ್ವಿತಿ, ಸೇಕ್ರೆಡ್ ಹಾರ್ಟ್, ಮಡಂತ್ಯಾರು, ತೃತೀಯ – ರಕ್ಷಿತಾ ಆರ್ ಎಸ್, ಪುಂಜಾಲಕಟ್ಟೆ, ೮೦೦ ಮೀ. ಓಟ: ಪ್ರಥಮ – ಗೌತಮಿ, ಸೇಕ್ರೆಡ್ ಹಾರ್ಟ್, ಮಡಂತ್ಯಾರು, ದ್ವಿತೀಯ- ಸಾರಾ ಫೆರ್ನಾಂಡಿಸ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು ೧೫೦೦ ಮೀ. ಓಟ: ಪ್ರಥಮ – ಧನ್ಯ ಎಸ್ .ಡಿ.ಎಂ, ಉಜಿರೆ, ದ್ವಿತೀಯ – ನಿಶಾ, ಸರಕಾರಿ ಪದವಿ ಕಾಲೇಜು, ಬೆಳ್ತಂಗಡಿ , ತೃತೀಯ – ಸಾರಾ ಫೆರ್ನಾಂಡಿಸ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು ೩೦೦೦ ಮೀ. ಓಟ: ಪ್ರಥಮ – ಧನ್ಯ ಎಸ್ .ಡಿ.ಎಂ, ಉಜಿರೆ, ದ್ವಿತೀಯ – ಸಾರಾ ಫೆರ್ನಾಂಡಿಸ್ , ಸೇಕ್ರೆಡ್ ಹಾರ್ಟ್, ಮಡಂತ್ಯಾರು, ಉದ್ದ ಜಿಗಿತ: ಪ್ರಥಮ – ಅಶಿತಾ, ಬೆಳ್ತಂಗಡಿ , ದ್ವಿತೀಯ – ತುಳಸಿ ಪಿ , ಪುಂಜಾಲಕಟ್ಟೆ, ತೃತೀಯ – ಕೃಪಾ , ಪುಂಜಾಲಕಟ್ಟೆ, ಎತ್ತರ ಜಿಗಿತ: ಪ್ರಥಮ – ಸುಪ್ರಿಯಾ, ದ್ವಿತೀಯ – ತುಳಸಿ, ತೃತೀಯ – ರಕ್ಷಿತಾ ಆರ್ ಎಸ್, ಟ್ರಿಪಲ್ ಜಂಪ್ : ಪ್ರಥಮ – ಸುಪ್ರಿಯಾ, ಬೆಳ್ತಂಗಡಿ, ದ್ವಿತೀಯ – ಸಾರಾ ಫೆರ್ನಾಂಡಿಸ್ , ಮಡಂತ್ಯಾರು, ತೃತೀಯ – ವೃಷಾ, ಬೆಳ್ತಂಗಡಿ

ಡಿಸ್ಕಸ್ ಥ್ರೋ: ಪ್ರಥಮ – ಅನಿಶಾ, ದ್ವಿತೀಯ – ಕುಸುಮಾ, ತೃತೀಯ – ಸಾನಿಕಾ ಕೆ.ಎಸ್, ಗುಂಡು ಎಸೆತ: ಪ್ರಥಮ – ಅನಿಶಾ, ಎಸ್ .ಡಿ.ಎಂ, ಉಜಿರೆ, ದ್ವಿತೀಯ – ಕುಸುಮಾ ಎಸ್ .ಡಿ.ಎಂ, ಉಜಿರೆ, ತೃತೀಯ – ದಿವ್ಯಾ -ಉಜಿರೆ ಫ್ರೆಂಡ್ಸ್, ಜಾವ್ಲಿನ್ ಥ್ರೋ: ಪ್ರಥಮ – ಕಾವ್ಯ, ದ್ವಿತೀಯ – ಸಾನಿಕಾ ಕೆ.ಎಸ್, ತೃತೀಯ – ಅನೀಶಾ ರೋಜ್ , ೪x೧೦೦ ಮೀ. ರಿಲೇ : ಪ್ರಥಮ – ನಿತ್ಯಶ್ರೀ, ವಿಜಯಲಕ್ಷ್ಮೀ, ಸ್ಪಂದನ, ಸಮೀಕ್ಷಾ, ದ್ವಿತೀಯ – ಧನುಶ್ರೀ, ಧನ್ಯಶ್ರೀ, ವಿದ್ಯಾಶೀ, ನವ್ಯ, ೪x೪೦೦ ಮೀ. ರಿಲೇ : ಪ್ರಥಮ – ಲಹರಿ, ದೀಕ್ಷೀತಾ, ನಿಶಾ, ಅಶಿತಾ, ದ್ವಿತೀಯ – ನವ್ಯ, ಪ್ರಪುಷ್ಯ, ಧನ್ಯಶ್ರೀ, ಧನುಶ್ರೀ, ತೃತೀಯ – ಸುಪ್ರಿಯಾ, ಸಮೀಕ್ಷಾ, ಸೌಮ್ಯ, ಪೂಜಾ

ಮಹಿಳೆಯರ ವಿಭಾಗ (ಗುಂಪು)ವಾಲಿಬಾಲ್ ಪ್ರಥಮ- ಎಸ್ ಡಿ.ಎಂ, ಉಜಿರೆ ಎ ತಂಡ, ದ್ವಿತೀಯ- ಎಸ್ ಡಿ.ಎಂ, ಉಜಿರೆ ಬಿ ತಂಡ ಕಬಡ್ಡಿ ಪ್ರಥಮ- ಎಸ್ ಡಿ.ಎಂ, ಉಜಿರೆ, ದ್ವಿತೀಯ- ಸರಕಾರಿ ಪದವಿ ಕಾಲೇಜು, ಬೆಳ್ತಂಗಡಿ

ಥ್ರೋ ಬಾಲ್ ಪ್ರಥಮ- ಎಲ್ . ಸಿ. ಆರ್, ದ್ವಿತೀಯ – ಬೆಳ್ತಂಗಡಿ, ಖೋ-ಖೋ ಪ್ರಥಮ- ಸರಕಾರಿ ಪದವಿ ಕಾಲೇಜು, ಬೆಳ್ತಂಗಡಿ, ದ್ವಿತೀಯ – ಸರಕಾರಿ ಪದವಿ ಕಾಲೇಜು, ಪುಂಜಾಲಕಟ್ಟೆ

ಮಹಿಳೆಯರ ವಿಭಾಗ (ಯೋಗ) ಸಾಂಪ್ರದಾಯಿಕ ಯೋಗಾಸನ :ಪ್ರಥಮ – ಮುಕ್ತ- ಎಸ್ .ಡಿ.ಎಂ, ನ್ಯಾಚುರೋಪತಿ ಕಾಲೇಜು, ಉಜಿರೆ ದ್ವಿತೀಯ – ತ್ರಿಷಾ – ಸರಕಾರಿ ಪ್ರೌಢ ಶಾಲೆ, ಕಲ್ಮಂಜ ಕಲಾತ್ಮಕ ಯೋಗಾಸನ ಪ್ರಥಮ- ಮನ್ವಿತಾ – ಸರಕಾರಿ ಪ್ರೌಢ ಶಾಲೆ, ಕಲ್ಮಂಜ , ಕಲಾತ್ಮಕ ಯೋಗಾಸನ (ಜೋಡಿ) ಪ್ರಥಮ – ಮನ್ವಿತಾ, ತ್ರಿಷಾ – ಸರಕಾರಿ ಪ್ರೌಢ ಶಾಲೆ, ಕಲ್ಮಂಜ


Related posts

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ಅಡ್ಡ ಮತದಾನ ವಿವಾದ: ಬೇಲೂರು ಶಾಸಕ ಹೆಚ್. ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

Suddi Udaya

ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಮನೆಯ ಮೇಲೆ ಬಿದ್ದ ಮರ ತೆರವು

Suddi Udaya

ಗ್ರಾಮೀಣ ಪ್ರತಿಭೆ ಉತ್ತಮ‌ ಸಾಧನೆ, ಅಂಡಿಂಜೆಯ ದ್ವಿಶಾನ್ ಜೈನ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಲಾಯಿಲ ರಾಘವೇಂದ್ರ ಮಠದಲ್ಲಿ ದೃಢಕಲಶ ಉತ್ಸವ

Suddi Udaya

ನಡ: ತಾಲೂಕು ಮಟ್ಟದ ವಿಜ್ಞಾನ ಮೇಳ

Suddi Udaya
error: Content is protected !!