27.1 C
ಪುತ್ತೂರು, ಬೆಳ್ತಂಗಡಿ
September 27, 2026
ಅಭಿನಂದನೆ

ಗ್ರಾಮ ಪಂಚಾಯತ್ ಗೆ ಲೇಔಟ್ ಪ್ಲಾನ್ ಅನುಮೋದನೆಗೆ ನೀಡಿರುವ ಆದೇಶವು ಗ್ರಾಮೀಣ ಜನತೆಗೆ ವರದಾನವಾಗಲಿದೆ : ಸಂತೋಷ್ ಕುಮಾರ್ ಲಾಯಿಲ

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ನಿವೇಶನ (ಪ್ಲಾಟ್) ಹೊಂದಿರುವ ನಾಗರಿಕರಿಗೆ ಮನೆ ನಿರ್ಮಾಣ ಮತ್ತು ಲೇಔಟ್ ಅನುಮೋದನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಾಗೂ ವಿಳಂಬ ತಪ್ಪಿಸಲು 1ಸಾವಿರ ಚ.ಮೀ.( 0.25 ಸೆಂಟ್ಸ್) ವರೆಗಿನ ಏಕ ನಿವೇಶನ ಲೇಔಟ್ ಪ್ಲಾನ್ ಅನುಮೋದನೆಗೆ ಗ್ರಾಮ ಪಂಚಾಯತ್‌ಗಳ ಪಿಡಿಒಗಳಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿರುವುದು ಗ್ರಾಮೀಣ ಜನತೆಗೆ ವರದಾನವಾಗಲಿದೆ.‌

ಆದೇಶದಂತೆ 1 ಸಾವಿರ ಚದರ್ ಮೀಟರ್ ಒಳಗಿನ ಏಕ ನಿವೇಶನದ ಲೇಔಟ್ ಪ್ಲಾನ್ ಅರ್ಜಿಯನ್ನು ಗ್ರಾಮದ ಪಿಡಿಒ ಅವರೇ ಪರಿಶೀಲಿಸುತ್ತಾರೆ. ಜಾಗದ ನಕ್ಷೆ, ಮಾಲೀಕತ್ವದ ದಾಖಲೆಗಳು ಮತ್ತು ಜಾಗದ ಗಡಿಗಳನ್ನು ಪಿಡಿಒ ಹಾಗೂ ತಾಂತ್ರಿಕ ಸಿಬ್ಬಂದಿ ಪರಿಶೀಲಿಸುವ
ನಿಯಮಾವಳಿಗಳಿಗೆ ಒಳಪಟ್ಟು, ಪಿಡಿಒ ಅವರೇ ಲೇಔಟ್ ಪ್ಲಾನ್ ಅನುಮೋದಿಸಿ ಈ-ಸ್ವತ್ತು ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಬಹುದು. ಇದರಿಂದ ಹಿರಿಯ ಅಧಿಕಾರಿಗಳ ಕಛೇರಿಗಳಿಗೆ ಕಡತಗಳನ್ನು ಕಳುಹಿಸುವ ಅಗತ್ಯವಿಲ್ಲದಿರುವುದರಿಂದ ಅನುಮೋದನೆ ಬೇಗನೆ‌ ಸಿಗಲಿದೆ.‌ ಈ ಮೂಲಕ ಮಧ್ಯವರ್ತಿಗಳ ಅನಗತ್ಯ ಹಸ್ತಕ್ಷೇಪ ತಪ್ಪಲಿದೆ. ಜೊತೆಗೆ ಸರ್ಕಾರಿ ಕಚೇರಿಗಳಿಗೆ ಅನಗತ್ಯ ಅಲೆದಾಟವೂ ತಪ್ಪಲಿದೆ.
ಇಲ್ಲಿಯವರೆಗೆ ಸಣ್ಣ ಪ್ರಮಾಣದ ಜಾಗದಲ್ಲೂ ಸಹ ಏಕ ನಿವೇಶನ ಅನುಮೋದನೆ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರ, ಯೋಜನಾ ಪ್ರಾಧಿಕಾರ ಅಥವಾ ಮೂಡ ಹಂತದ ಅಧಿಕಾರಿಗಳ ಬಳಿ ಅಲೆಯಬೇಕಾಗಿತ್ತು. ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದ್ದುದನ್ನು ಗಮನಿಸಿದ ರಾಜ್ಯ ಸರಕಾರ ಉತ್ತಮ ನಿರ್ಧಾರ ಕೈಗೊಂಡಿದೆ‌ ಎಂದು ದ.ಕ. ಜಿಲ್ಲಾ ಕೆ.ಡಿ.ಪಿ.‌ ಸದಸ್ಯ‌ ಸಂತೋಷ್ ಕುಮಾರ್ ಲಾಯಿಲಾ‌ ರಾಜ್ಯ ಸರಕಾರದ ನಿರ್ಧಾರವನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ‌. ಅದಲ್ಲದೆ ಈ ಅನುಮೋದನೆ ಪಡೆಯಲು ಸರಕಾರ ಮಟ್ಟದಲ್ಲಿ ವಿಶೇಷ ಪ್ರಯತ್ನ ಮಾಡಿರುವ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ ಇವರನ್ನು ಅಭಿನಂದಿಸಿರುತ್ತಾರೆ..

Related posts

ಸುದ್ದಿ ಉದಯ ದೀಪಾವಳಿ ವಿಶೇಷ ಸಂಚಿಕೆ ಬಿಡುಗಡೆ

Suddi Udaya

ಹಫ್ಸಾ ಬಾನು ಅವರಿಗೆ ಬ್ಯಾರಿವಾರ್ತೆ ಪ್ರಶಸ್ತಿ

Suddi Udaya

ಕರ್ನಾಟಕ ಟಿವಿ ಚಾನೆಲ್ ನಿಂದ ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಶಾಸಕರಾದ ಶ್ರೀ ಹರೀಶ್ ಪೂಂಜಾ’ರವರಿಗೆ ಮ ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಸಮಾಜದ ಬಂಧುಗಳ ವತಿಯಿಂದ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಪ್ರೊ. ಪದ್ಮನಾಭ ಕೆ. ಅಧಿಕಾರ ಸ್ವೀಕಾರ

Suddi Udaya

ಯಕ್ಷಯಾನ-2026: ಉಜಿರೆ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರಕ್ಕೆ ಸಮಗ್ರ ದ್ವಿತೀಯ ತಂಡ ಪ್ರಶಸ್ತಿ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಾಗೂ ಗ್ರಾಹಕರ ಸಮಾಲೋಚನಾ ಸಭೆ

Suddi Udaya
error: Content is protected !!