
ಬೆಳ್ತಂಗಡಿ: ತಾಲೂಕಿನ ಸಾವ್ಯ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಇದರ ನೂತನ ಕಾರ್ಯಕಾರಣಿ ಸಮಿತಿಯ ಮಹಾಸಭೆಯು ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.

ಈ ಸಭೆಯಲ್ಲಿ ಮುಂಬರುವ ಅವಧಿಗಾಗಿ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸರ್ವಾನುಮತದಿಂದ ನಡೆಸಲಾಯಿತು. ಟ್ರಸ್ಟ್‌ನ ಕಾರ್ಯಕಾರಣಿ ಸಮಿತಿಯ ನೂತನ ಅಧ್ಯಕ್ಷರಾಗಿ ವಿನೀತ್ ಕೋಟ್ಯಾನ್ ಸಾವ್ಯ ಅವರು ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಸುಕೇಶ್ ಪೂಜಾರಿ, ಉಪಾಧ್ಯಕ್ಷರುಗಳಾಗಿ ರಂಜಿತ್ ಅರ್ಬಿ ಸಾವ್ಯ, ಸಂತೋಷ್ ಕೋಟ್ಯಾನ್ ಕೊಂಡಸಲೆ, ಜೊತೆ ಕಾರ್ಯದರ್ಶಿಯಾಗಿ ಸುಮಂತ್ ಡಿ. ವಿಶಿತ್ ಪೂಜಾರಿ ಸಾಂತ್ಯಲ್, ಕೋಶಾಧಿಕಾರಿ ಹರೀಶ್ ಕುಲಾಲ್ ಗುಜ್ಜೊಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಅನಿಲ್ ಹೆಗ್ಡೆ ಪ್ರಕಾಶ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿಯಾಗಿ ರೋಹಿತ್ ಕುಲಾಲ್, ಸುಮಂತ್ ಮಿತ್ತಬೆಟ್ಟು
ಆಯ್ಕೆಯಾದರು.












