30.7 C
ಪುತ್ತೂರು, ಬೆಳ್ತಂಗಡಿ
September 27, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಮಾತು ಕೊಟ್ಟಿದ್ದರು,ಚಿನ್ನ ಗೆದ್ದರು! ಹರಕೆ ತೀರಿಸಲು ಅಳದಂಗಡಿ ಸತ್ಯದೇವತೆ ಸನ್ನಿಧಿಗೆ ಬರಲಿದ್ದಾರೆ ಕಬಡ್ಡಿ ಸ್ಟಾರ್ ಪವನ್ ಶೇರಾವತ್‌

ಬೆಳ್ತಂಗಡಿ: ಭಾರತೀಯ ಕಬಡ್ಡಿ ತಂಡದ ನಾಯಕ ಹಾಗೂ ಸ್ಟಾರ್ ಆಟಗಾರ ಪವನ್ ಶೇರಾವತ್‌ ಅವರು ತಮ್ಮ ಧಾರ್ಮಿಕ ಬದ್ಧತೆ ಹಾಗೂ ನಂಬಿಕೆಯನ್ನು ಮೆರೆಯುವ ಮೂಲಕ ಕರಾವಳಿಯ ಜನರ ಗಮನ ಸೆಳೆದಿದ್ದಾರೆ.

ಭಾರತ ತಂಡವು ಚಿನ್ನದ ಪದಕ ಗೆದ್ದರೆ ಅಳದಂಗಡಿಯ ಪ್ರಸಿದ್ಧ ಸತ್ಯದೇವತೆ ಸನ್ನಿಧಾನಕ್ಕೆ ಬರುವುದಾಗಿ ಹರಕೆ ಹೊತ್ತಿದ್ದ ಅವರು, ಇದೀಗ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಭಾರತಕ್ಕೆ ಚಿನ್ನದ ಗೆಲುವು ತಂದುಕೊಟ್ಟ ಬೆನ್ನಲ್ಲೇ, ಪವನ್ ಶೇರಾವತ್ ಅವರು ಜಪಾನ್‌ನಿಂದಲೇ ಅಳದಂಗಡಿ ಸತ್ಯದೇವತೆ ಕ್ಷೇತ್ರದ ಆಡಳಿತ ಮೋಕ್ತೇಸರರಾದ ಶಿವಪ್ರಸಾದ್ ಅಜಿಲ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿ, ತಾವು ಹರಕೆ ಹೊತ್ತ ಪ್ರಕಾರ ಶೀಘ್ರದಲ್ಲೇ ಅಳದಂಗಡಿಗೆ ಬಂದು ಸತ್ಯದೇವತೆಯ ದರ್ಶನ ಪಡೆದು ಹರಕೆ ತೀರಿಸುವುದಾಗಿ ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ತಾರೆಯೊಬ್ಬರು ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತಾ ಸನ್ನಿಧಿಗೆ ಹರಕೆ ಹೊತ್ತು, ವಿಜಯದ ನಂತರ ಇಲ್ಲಿಗೆ ಆಗಮಿಸುತ್ತಿರುವುದು ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿ ಹಾಗೂ ಭಕ್ತರಲ್ಲಿ ತೀವ್ರ ಕುತೂಹಲ ಮತ್ತು ಸಂತಸವನ್ನು ಮೂಡಿಸಿದೆ.

Related posts

ಬೆಳ್ತಂಗಡಿ ಬಿಜೆಪಿ ಮಂಡಲ ಯುವಮೋರ್ಚಾ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಜು. 24 ರಿಂದ ಮುಳಿಯ ಮಾನ್ಸೂನ್ ಧಮಾಕ: ಮುಂಗಾರಿನ ಸಂಭ್ರಮವನ್ನು ಇಮ್ಮಡಿಗೊಳಿಸಲು ಗ್ರಾಹಕರಿಗೆ ಆಕರ್ಷಕ ರಿಯಾಯಿತಿ: ಆ. 5 ಮುಳಿಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ,ಗ್ರಾಹಕರ ಸಮಾಗಮ,

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕು.ಸೌಜನ್ಯ ಪ್ರಕರಣ: ಮರು ತನಿಖೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸೆ. 8ರಂದು (ಇಂದು)ಹೈಕೋರ್ಟಿನಲ್ಲಿ ವಿಚಾರಣೆ

Suddi Udaya

ವೇಣೂರು ಕುಂಭಶ್ರೀ ಶಾಲೆಯಲ್ಲಿ ಮಾತಾ-ಪಿತಾ-ಗುರುದೇವೋಭವ ಕಾರ್ಯಕ್ರಮ

Suddi Udaya

ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya
error: Content is protected !!