30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಜಾಗತಿಕ ಔಷಧ ತಜ್ಞರ ದಿನಾಚರಣೆ ಹಾಗೂ ಸಂಘದ ವಾರ್ಷಿಕ ದಿನಾಚರಣೆ

ಬೆಳ್ತಂಗಡಿ: ಜಾಗತಿಕ ಔಷಧ ತಜ್ಞರ ದಿನಾಚರಣೆ ಹಾಗೂ ಸಂಘದ ವಾರ್ಷಿಕ ಸೆ. 27 ರಂದು ಕಾಶಿಬೆಟ್ಟಿನಲ್ಲಿರುವ ರೋಟರಿ ಸೇವಾ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ| ಸದಾನಂದ ಪೂಜಾರಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಮ್. ಆಸ್ಪತ್ರೆಯ ವ್ಯವಸ್ಥಾಪಕರು ಜನಾರ್ದನ ಎಮ್ , ಎಸ್.ಕೆ.ಡಿ.ಸಿ & ಡಿಎ ಅಧ್ಯಕ್ಷ ಅರುಣ್ ಶೆಟ್ಟಿ, ಎಸ್.ಕೆ.ಡಿ.ಸಿ & ಡಿಎ ಕಾರ್ಯದರ್ಶಿ ಎ.ಕೆ ಜಮಾಲ್ ಆಗಮಿಸಿದ್ದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉದಯ ಕುಮಾರ್ ಜೈನ್ ಮಹಾವೀರ ಮೆಡಿಕಲ್ಸ್ ಮಡಂತ್ಯಾರು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಫೆರ್ನಾಂಡಿಸ್ ಎಸ್.ಎ ಮೆಡಿಕಲ್ ಉಜಿರೆ, ಕೋಶಾಧಿಕಾರಿ ಗಣಪತಿ ಭಟ್ ಅಮರ್ ಡ್ರಗ್ ಹೌಸ್ ಬೆಳ್ತಂಗಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಫಾರ್ಮಸಿಸ್ಟ್ ಶ್ರೀಮತಿ ಸುಜಾತ ಜಿ ಭಟ್ ಅಮರ್ ಡ್ರಗ್ ಹೌಸ್ ಬೆಳ್ತಂಗಡಿ, ಔಷಧ ಕ್ಷೇತ್ರದಲ್ಲಿ ಐವತ್ತು ವರ್ಷ ಪೂರೈಸಿದ ಸಂಸ್ಥೆ ಅಮರ್ ಡ್ರಗ್ ಹೌಸ್ ಉಜಿರೆಯ ಶ್ರೀಮತಿ ರತ್ನಾವತಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 85.76% ಅಂಕ ಪಡೆದ ಮಂಜುಶ್ರೀ ಮೆಡಿಕಲ್ ವೇಣೂರು ಮಾಲಕ ಗಣೇಶ್ ಕುಮಾರ್ ಭಟ್ ಇವರ ಪುತ್ರ ಅಕ್ಷಯ್ ಕೃಷ್ಣ ಭಟ್ ಸಂಘದ ನಿಕಟ ಪೂರ್ವ ಅಧ್ಯಕ್ಷ ರೊ| ಶ್ರೀಧರ ಕೆ. ವಿ. ಸುರಕ್ಷಾ ಮೆಡಿಕಲ್ ಉಜಿರೆ ಇವರನ್ನು ಗೌರವಿಸಲಾಯಿತು.

ಸಂಘದ ಸದಸ್ಯರು, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು. ಪಾರ್ಶ್ವನಾಥ ಜೈನ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಕೆ.ವಿ ವಂದಿಸಿದರು.
ವರದಿ: ಗಣಪತಿ ಭಟ್, ಬೆಳ್ತಂಗಡಿ

Related posts

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜಸ್ತಂಬ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಹಾಗೂ ಪ್ರತಿಷ್ಠಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬಂದಾರು: ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಕು. ದೇವಿಕಾ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಸುಲ್ಕೇರಿಯಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

Suddi Udaya

ಬಂದಾರು: ಕುಂಟಾಲಪಲ್ಕೆ ಕಲ್ಲರ್ಬಿ ಸೇತುವೆ ಬಳಿ ಭಾರಿ ಗಾತ್ರದ ಗುಡ್ಡ ಕುಸಿತ: ಮಣ್ಣು ತೆರವು ಕಾರ್ಯ

Suddi Udaya

ಬೆಳ್ತಂಗಡಿ:  ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿದ ಗಮ್ಮತ್ತ್’

Suddi Udaya

ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ

Suddi Udaya
error: Content is protected !!