30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಯಕ್ಷಕಲಾ ವಿದ್ವನ್ಮಣಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಸುವರ್ಣ ಮಹೋತ್ಸವದ ಪ್ರಯುಕ್ತ ನಿವೃತ್ತ ಶಿಕ್ಷಕ, ಹಿರಿಯ ಅರ್ಥಧಾರಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಪಡಂಗಡಿಯ ಶ್ರೀನಿಲಯದಲ್ಲಿ ಯಕ್ಷಕಲಾ ವಿದ್ವನ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

90ರ ಹುಟ್ಟುಹಬ್ಬ ಆಚರಿಸುತ್ತಿರುವ ಪೂರ್ವಭಾವಿಯಾಗಿ ಈ ಗೌರವವು ನನಗೆ ಸಂತಸವನ್ನು ನೀಡಿದೆ. ಶಿಕ್ಷಕ ತರಬೇತಿಯ ಸಂದರ್ಭ ತಾಳಮದ್ದಳೆಯಲ್ಲಿ ಆಕಸ್ಮಿಕವಾಗಿ ಅರ್ಥಧಾರಿಯಾದ ನಾನು ಅದನ್ನು ಬಿಡಬೇಕೆಂದರೂ ಅದು ನನ್ನನ್ನು ಉಳಿಸಿ ಬೆಳೆಸಿತು. ಸಾಮಗದ್ವಯರು, ಶೇಣಿ, ಗುರು ಪೆರ್ಲ ಕೃಷ್ಣ ಭಟ್ ಮತ್ತು ಕಲಾಭಿಮಾನಿಗಳು ನನ್ನನ್ನು ಮೆಚ್ಚಿಕೊಂಡರೆಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಕನ್ನಡ ಸಾರಸ್ವತ ಲೋಕ ಮತ್ತು ಯಕ್ಷಗಾನ ವಲಯಕ್ಕೆ ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ದಶಾವತಾರ ಉಪನ್ಯಾಸಗಳು,ಅರ್ಥ ಸಹಿತ ಕುಮಾರ ವಿಜಯ ಮೊದಲಾದ ಅಮೂಲ್ಯ ಕೃತಿಗಳನ್ನು ನೀಡಿದ ಶಾಸ್ತ್ರಿಗಳು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಹೊಸ ದಾರಿಯನ್ನು ನಿರ್ಮಿಸಿದವರೆಂದು ತಿಳಿಸಿದರು.

ಶ್ರೀಧರ ಎಸ್ ಪಿ ಕೃಷ್ಣಾಪುರ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಶ್ರೀಪತಿ ಭಟ್ ಕೆ ಬಿ, ಸುರೇಶ ಪುತ್ತೂರಾಯ , ಟಿ. ಕೇಶವ ಭಟ್ ಉಪಸ್ಥಿತರಿದ್ದರು. ಕಲಾವಿದ ಅಂಬಾ ಪ್ರಸಾದ ಪಾತಾಳ ಸ್ವಾಗತಿಸಿ ಪ್ರದೀಪ ಹೆಬ್ಬಾರ್ ಚಾರ ವಂದಿಸಿದರು.

Related posts

ವೇಣೂರಿನಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಅಭಿನಂದನಾ ಸಮಾರಂಭ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya

ಉಜಿರೆ ಮಹಿಳಾ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಶಶಿಕಲಾ ಡಿ ಗೌಡ , ಉಪಾಧ್ಯಕ್ಷರಾಗಿ ಪ್ರಮೀಳಾ

Suddi Udaya

ನಾರಾವಿ: ಮಂಜುನಗರದಲ್ಲಿ ಗೋವುವಿಗೆ ಅಪರಿಚಿತ ವಾಹನ ಡಿಕ್ಕಿ, ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿರುವ ಗೋವು

Suddi Udaya
error: Content is protected !!