23.7 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ಶೇ.15 ಡಿವಿಡೆಂಟ್

ಪಣಕಜೆ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಅಧ್ಯಕ್ಷ ಹರೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸೆ.24 ರಂದು ಶ್ರೀ ಕೃಷ್ಣ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಮಾತನಾಡಿ ಒಕ್ಕೂಟದ ಅನುದಾನದ ಸೌಲಭ್ಯವನ್ನು ಪಡೆದುಕೊಂಡು ಹೆಚ್ಚು ಹಾಲನ್ನು ಪೂರೈಸುವಂತೆ ಸೂಚಿಸಿದರು. 2025-26 ನೇ ಸಾಲಿನಲ್ಲಿ ರೂ. 3,64,688.98 ಲಾಭ ಬಂದಿದ್ದು, ಇದರಲ್ಲಿ ಶೇ.65 ಬೋನಸ್ ನಂತೆ ಸದಸ್ಯರಿಗೆ ಪ್ರತೀ ಲೀಟರ್ ಗೆ 0.54 ಪೈಸೆಯಂತೆ ಬೋನಸ್ ನ್ನು ನೀಡಲಾಗುವುದು ಮತ್ತು ಶೇ.15 ರಷ್ಟು ಡಿವಿಡೆಂಟ್ ನೀಡುವುದೆಂದು ತಿಳಿಸಿದರು.

ಅತೀ ಹೆಚ್ಚು ಹಾಲನ್ನು ಪೂರೈಸಿದ ರೈತರಾದ ಜನಾರ್ದನ ಮೂಲ್ಯ, ಯೋಗೀಶ್ ಪೂಜಾರಿ, ಹರೀಶ್ ಪೂಜಾರಿ, ಚಂದ್ರಿಕಾ, ಮಥಾಯಸ್ ಡಿಕುನ್ಹ ಮತ್ತು ಕೇಶವ ಶೆಟ್ಟಿ ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಪದ್ಮನಾಭ ಶೆಟ್ಟಿ ಅರ್ಕಜೆ, ಸಂಘದ ಉಪಾಧ್ಯಕ್ಷ ಗಣೇಶ್ ಪ್ರಭು, ಮೈಕಲ್ ಡಿಸೋಜಾ, ದಿನೇಶ್ ಪ್ರಭು, ಕೇಶವ ಮೂಲ್ಯ, ಚಂದ್ರ, ಶಿವರಾಜ್ ಶೆಟ್ಟಿ, ಲೂಸಿ ಡಿಸೋಜಾ, ಭವ್ಯ, ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಸಿರಿಲ್ ಸಿಕ್ವೇರಾ ಸ್ವಾಗತಿಸಿದರು. ಕಾರ್ಯದರ್ಶಿ ರೋಹಿತ್ ವರದಿ ವಾಚಿಸಿದರು. ನಿರ್ದೇಶಕ ಅರುಣ ಬಂಗೇರ ಧನ್ಯವಾದ ನೀಡಿದರು. ಹಾಲು ಪರೀಕ್ಷಕ ಹರೀಶ್ ಪ್ರಭು ಸಹಕರಿಸಿದರು.

Related posts

ರಂಝಾನ್ ಪ್ರಯುಕ್ತ ಮದ್ದಡ್ಕದಲ್ಲಿ ವಿಶಿಷ್ಟ ಕಾರ್ಯಕ್ರಮ: 50 ಕುಟುಂಬಕ್ಕೆ ರಂಝಾನ್ ಕಿಟ್ , 25 ಕುಟುಂಬಕ್ಕೆ “ಝಕಾತ್ ದಾನ ನಿಧಿ”, ಶೈಕ್ಷಣಿಕ ನಿಧಿ‌ ಹಸ್ತಾಂತರ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ: ಸಾನಿಧ್ಯ ಕಲಶಾಭಿಷೇಕ, ಉತ್ಸವಬಲಿ

Suddi Udaya

ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಡಾ. ಮಹೇಶ್ ಕುಮಾರ್ ಶೆಟ್ಟಿ ಆಯ್ಕೆ

Suddi Udaya

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ: ಧಾರ್ಮಿಕ ಸಭಾ ಉದ್ಘಾಟನಾ ಸಮಾರಂಭ

Suddi Udaya

ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ ಸ್ನೇಹಕಿರಣ್ ನರ್ಸರಿ ಶಾಲೆಗೆ ರಕ್ಷಿತ್ ಶಿವರಾಂ ಭೇಟಿ

Suddi Udaya
error: Content is protected !!