31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ , ಸನ್ಮಾನ

ಮುಂಡಾಜೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾ ಸಭೆ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಅವರ ಮನೆಯಲ್ಲಿ ನಡೆಯಿತು.

ಈ ವೇಳೆ ಮುಂಡಾಜೆ ಗ್ರಾಮ ಸಮಿತಿಯ ವತಿಯಿಂದ ಕೆಂಪೇ ಗೌಡ ಪ್ರಶಸ್ತಿ ವಿಜೇತ ಪದ್ಮ ಗೌಡ, ನಿವೃತ್ತ ಶಿಕ್ಷಕಿ ಜಯಂತಿ ಟಿ, ಯಕ್ಷಗಾನ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದ ಕೊಳ್ತಿಗೆ ನಾರಾಯಣ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸಂಘದ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ನಿರ್ದೇಶಕ ಜಯಾನಂದ ಗೌಡ, ಗ್ರಾಮ ಸಮಿತಿ ಅಧ್ಯಕ್ಷ ಆನಂದ ಗೌಡ ಹಾಗೂ ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಶೋಭಾ ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿ, ಯಶೋಧ ಸ್ವಾಗತಿಸಿ, ಧರ್ಣಪ್ಪ ಗೌಡ ಧನ್ಯವಾದವಿತ್ತರು.

Related posts

ಅರಸಿನಮಕ್ಕಿ, ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮಾದರಿ ಕಾರ್ಯ

Suddi Udaya

ಕರಾವಳಿ ಪ್ರಜಾಧ್ವನಿ ಯಾತ್ರೆ ಕೊಕ್ಕಡದಲ್ಲಿ
ಕಾಂಗ್ರೆಸ್ ಕಾಯ೯ಕತ೯ರ ಸಭೆ

Suddi Udaya

ಕೊಯ್ಯೂರು: ಮಲೆಬೆಟ್ಟುನಲ್ಲಿ ಬೈಕ್ ಗೆ ಆಟೋ ರಿಕ್ಷಾ ಡಿಕ್ಕಿ: ಬೈಕ್ ಸವಾರನಿಗೆ ಗಾಯ

Suddi Udaya

ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ್ ಆಚಾರ್ಯ ನೇಮಕ

Suddi Udaya

ಮಾಚಾರಿನಲ್ಲಿ 32ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯ ಉದ್ಘಾಟನೆ

Suddi Udaya

ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆ ಇದರ ವತಿಯಿಂದ ಗಣರಾಜ್ಯೋತ್ಸವ ಆಚರಣೆ ಹಾಗೂ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!