ಬೆಳ್ತಂಗಡಿ: ಇಲ್ಲಿನ ಮೇ। ಬಿ ಪುಂಡಲಿಕ ಬಾಳಿಗ ಜುವೆಲ್ಲರ್ಸ್ ಮಳಿಗೆಯ ಸಮೀಪ ಕಳೆದುಹೋಗಿದ್ದ ಅಗತ್ಯ ದಾಖಲೆಗಳು ಹಾಗೂ ನಗದನ್ನು ಹೊಂದಿದ್ದ ಪರ್ಸ್ ಅನ್ನು ವಾರೀಸುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸುವ ಮೂಲಕ ಬೆಳ್ತಂಗಡಿ ತಾಲೂಕು ಆರೋಗ್ಯ ಸಮಿತಿ ಸದಸ್ಯ ರಶೀದ್ ಕಕ್ಕಿಂಜೆ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಲ ದಿನಗಳ ಹಿಂದೆ ಜುವೆಲ್ಲರ್ಸ್ ಮಳಿಗೆಯ ಸಮೀಪ ಪಾನ್ ಕಾರ್ಡ್, ಆರ್ ಸಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಮತ್ತು ನಗದು ಹಣವಿದ್ದ ಪರ್ಸ್ ಒಂದು ಕಳೆದುಹೋಗಿತ್ತು. ಈ ಬಗ್ಗೆ ಮಾಲಕರು ಪರ್ಸ್ ತಂದುಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು.
ರಸ್ತೆಯಲ್ಲಿ ಸಿಕ್ಕಿದ ಈ ಪರ್ಸ್ ಅನ್ನು ರಶೀದ್ ಕಕ್ಕಿಂಜೆ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಸುಕನ್ಯಾ ಅವರ ಮುಖಾಂತರ ಪುಂಡಲಿಕ ಜುವೆಲರ್ಸ್ ಮಾಲಕರಾದ ಜಗದೀಶ್ ಬಾಳಿಗ ರವರಿಗೆ ತಲುಪಿಸಿದ್ದಾರೆ. ಪರ್ಸ್ ಅನ್ನು ಸುರಕ್ಷಿತವಾಗಿ ತಂದುಕೊಟ್ಟ ರಶೀದ್ ಕಕ್ಕಿಂಜೆ ಅವರ ಪ್ರಾಮಾಣಿಕ ಕಾರ್ಯವನ್ನು ಮೆಚ್ಚಿ ಮಾಲಕರು ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.












