30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಮೇ 17: ಜಯನಗರ-ಗುರಿಪಳ್ಳದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಜಯನಗರ-ಗುರಿಪಳ್ಳ ಇವರ ಪ್ರಾಯೋಜಕತ್ವದಲ್ಲಿ ಬೆನಕ ಹೆಲ್ತ್ ಸೆಂಟರ್ ಉಜಿರೆ-ಬೆನಕ ಚಾರೀಟೇಬಲ್ ಟ್ರಸ್ಟ್ ಉಜಿರೆ, ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ, ರೋಟರಿ ಕ್ಲಬ್ ಬೆಳ್ತಂಗಡಿ ಇವುಗಳ ಸಹಭಾಗಿತ್ವದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಮೇ 17 ರಂದು ಜಯನಗರದ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 9:೦೦ ರಿಂದ ಮಧ್ಯಾಹ್ನ 1:30 ರವರೆಗೆ ಜರುಗಲಿದೆ.

ಶಿಬಿರದ ಉದ್ಘಾಟನೆಯನ್ನು ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ. ನೆರವೇರಿಸಲಿದ್ದಾರೆ. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ, ಕೋಡೆಕ್ಕಲ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೊ.ಶ್ರೀಧರ ಕೆವಿ, ಡಾ. ವಿಶ್ವ ವಿಜೇತ್, ಡಾ. ಗಣೇಶ್ ಪ್ರಸಾದ್, ಡಾ. ಆದರ್ಶ್ ಕೆ. ಎಸ್. ಮತ್ತು ಪ್ರಕಾಶ್ ಫೆರ್ನಾಂಡಿಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

Related posts

ಓಡಲ ಶಿವ-ಪಾರ್ವತಿ ಮಹಿಳಾ ಭಜನಾ ತಂಡದಿಂದ ನಿವೃತ್ತ ಶಿಕ್ಷಕಿ ಸೀತಮ್ಮ ರವರಿಗೆ ಗುರುವಂದನೆ ಕಾರ್ಯಕ್ರಮ

Suddi Udaya

ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಸಂಪತ್ ಬಿ ಸುವರ್ಣರಿಗೆ ಯಕ್ಷ ಭಾರತಿ ಯುವ ಸೇವಾ ಪ್ರಶಸ್ತಿ ಪ್ರದಾನ

Suddi Udaya

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಶಾಖಾ ಮಠ ನಿರ್ಮಾಣ: ಸಮಿತಿಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಂದ ವೀಕ್ಷಣೆ

Suddi Udaya

ಮಚ್ಚಿನ: ಕುಕ್ಕಿಲದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಹಟ್ಟಿಗೆ ಸಂಪೂರ್ಣ ಹಾನಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ , ಕಬ್ಸ್ ಮತ್ತು ಬುಲ್ ಬುಲ್ಬಸ್ ಹಾಗೂ ಬನ್ನಿಸ್ ವತಿಯಿಂದ ಧ್ವಜ ದಿನಾಚರಣೆ

Suddi Udaya

ಬೆಳ್ತಂಗಡಿಯಲ್ಲಿ ಪ್ರಶ್ವಿನ್ ಪ್ರಿಂಟರ್ಸ್ ಶುಭಾರಂಭ

Suddi Udaya
error: Content is protected !!