28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ವತಿಯಿಂದ ನಿಟ್ಟಡೆ ದರ್ಖಾಸು ನಿವಾಸಿ ವಸಂತರವರ ವೈದ್ಯಕೀಯ ಚಿಕಿತ್ಸೆಗೆ ನೆರವು

ಬೆಳ್ತಂಗಡಿ: ಇತ್ತೀಚೆಗೆ ಕಟ್ಟಡದ ಕೆಲಸ ಮಾಡುವ ಸಂಧರ್ಭದಲ್ಲಿ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿರುವ ದಸಂಸ(ಅಂಬೇಡ್ಕರ್ ವಾದ) ದ ಸಕ್ರಿಯ ಕಾರ್ಯಕರ್ತ ನಿಟ್ಟಡೆ ಗ್ರಾಮದ ದರ್ಖಾಸು ನಿವಾಸಿ ವಸಂತರವರ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು

.

ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವ ಕಾರ್ಯಕರ್ತರು ಸಂಕಷ್ಟದ ಸಮಯದಲ್ಲಿ ಒಬ್ಬಂಟಿಯಲ್ಲ , ಜೊತೆಗೆ ನಾವಿದ್ದೇವೆ ಎಂಬ ಮಾನವೀಯತೆಯ ಘೋಷಣೆಯೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ವತಿಯಿಂದ ಹಣ ಸಂಗ್ರಹಿಸಿ ಅವರ ಕುಟುಂಬಕ್ಕೆ ಧನಸಹಾಯ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಗ್ರಾಮ ಸಮಿತಿಯ ಸಂಚಾಲಕರಾದ ಹರೀಶ್ ಪಂಡಿಂಜೆ, ತಾಲೂಕು ಸಂಘಟನಾ ಸಂಚಾಲಕರಾದ ಶೇಖರ್ ಕುಕ್ಕೇಡಿ, ವೇಣೂರು ಹೋಬಳಿ ಸಂಚಾಲಕರಾದ ಚರಣ್ ರಾಜ್ ನಿಟ್ಟಡೆ, ಗ್ರಾಮ ಸಮಿತಿಯ ಪದಾಧಿಕಾರಿಗಳಾದ ಸಂತೋಷ ಕುಕ್ಕೇಡಿ, ಸದಾನಂದ ನಿಟ್ಟಡೆ, ಮನೀಷ್ ನಿಟ್ಟಡೆ, ಯೋಗೀಶ್ ನಿಟ್ಟಡೆ, ಸುಜಯ್ ನಿಟ್ಟಡೆ, ವಿಶ್ವನಾಥ ಕುಕ್ಕೇಡಿ, ಸಹನ್ ಕುಕ್ಕೇಡಿ, ದಿನೇಶ್ ಕುಕ್ಕೇಡಿ ಮೊದಲಾದವರು ಉಪಸ್ಥಿತರಿದ್ದರು.

Related posts

ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ನ್ನು ಭೇಟಿಯಾದ ಶಾಸಕ ಹರೀಶ್ ಪೂಂಜ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya

ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ಗ್ರಾ.ಪಂ. ನೌಕರರ ಜಿಲ್ಲಾ ಮಟ್ಟದ ಕುಂದು ಕೊರತೆ ಅದಾಲತ್ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ

Suddi Udaya

ಪಾರೆಂಕಿ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

Suddi Udaya
error: Content is protected !!