28.2 C
ಪುತ್ತೂರು, ಬೆಳ್ತಂಗಡಿ
October 1, 2026
ಕರಾವಳಿ

ಡಿಸಿ ಮನ್ನಾ ಜಮೀನು ಮಂಜೂರಾತಿಗೆ ಅತೀ ಶೀಘ್ರವಾಗಿ ಕಾನೂನು ಕ್ರಮ:ಕಂದಾಯ ಸಚಿವಡಾ! ಜಿ.ಪರಮೇಶ್ವರ್ ಭರವಸೆ..

ದ.ಕ.ಜಿಲ್ಲೆಯಲ್ಲಿ ಇರುವ ಡಿಸಿ ಮನ್ನಾ ಜಮೀನನ್ನು ಭೂರಹಿತ ಪರಿಶಿಷ್ಟ ರಿಗೆ ಮಂಜೂರಾತಿ ಮಾಡಬೇಕೆಂದು ಮೂರು ದಶಕಗಳಿಂದ ಜಿಲ್ಲೆಯಲ್ಲಿ ದಲಿತ ಸಂಘಟನೆಗಳ ಹೋರಾಟ ಮಾಡುತ್ತಲೇ ಬಂದಿದೆ.
ಆದರೆ ಈ ವರೆಗೂ ಆಡಳಿತಕ್ಕೆ ಬಂದ ಸರಕಾರಗಳು ಈ ವರೆಗೂ ಡಿಸಿ ಮನ್ನಾ ಭೂಮಿ ಮಂಜೂರಾತಿ ಮಾಡದೇ ಇರುವುದರಿಂದ ಆಕ್ರೋಶ ಗೊಂಡ ಜಿಲ್ಲೆಯ ದಲಿತ ಪರ ಸಂಘಟನೆಗಳು ಒಂದಾಗಿ ” ದಲಿತ ಸಂಘಟನೆಗಳ ಸಮನ್ವಯ ಸಮಿತಿ ” ಯೊಂದಿಗೆ ಜಿಲ್ಲೆಯಲ್ಲಿ ಪ್ರಭಲವಾದ ಹೋರಾಟಗಳನ್ನು ಮಾಡಿರುವ ಹಿನ್ನೆಲೆಯಲ್ಲಿ
ಕಳೆದ 2023 ರ ಸಾರ್ವತ್ರಿಕ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷವು
ತನ್ನ ಪ್ರಣಾಳಿಕೆ ಯಲ್ಲಿ
ಡಿಸಿ ಮನ್ನಾ ಜಮೀನು ಮಂಜೂರಾತಿ ಗೊಳಿಸುವುದಾಗಿ ಘೋಷಿಸಿತ್ತು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬರಲು ರಾಜ್ಯದಲ್ಲಿ
ಎಲ್ಲಾ ದಲಿತ ಪರ ಸಂಘಟನೆಗಳ ಪ್ರಮುಖ ಪಾತ್ರ ಇದ್ದರೂ ಸಹ

ಸರಕಾರ ಆಡಳಿತಕ್ಕೆ ಬಂದು ಮೂರು ವರ್ಷ ಕಳೆದರೂ
ದ.ಕ.ಜಿಲ್ಲೆಯ ದಲಿತರ ಪ್ರಮುಖ ಬೇಡಿಕೆಯಾದ ಡಿಸಿ ಮನ್ನಾ ಜಮೀನು ಮಂಜೂರಾತಿ ಆಗಲೇ ಇಲ್ಲ.

ಈ ಬಗ್ಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು
ಮತ್ತೆ ಜಿಲ್ಲೆಯ ಕಾಂಗ್ರೆಸ್ ನಾಯಕರ
ಬಳಿಯಲ್ಲಿ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿತು.

ಮಂಗಳೂರಿನಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಡಿಸಿ ಮನ್ನಾ ಜಮೀನು
ಮಂಜೂರಾತಿ ಆದೇಶ ಮಾಡಿ ಬೇಕೆಂದು ಸಂಘಟನೆಯು ಸರಕಾರವನ್ನು ಒತ್ತಾಯಿಸಿತ್ತು.

ಆದರೆ ಮಂಗಳೂರಿನಲ್ಲಿ
ನಡೆದ ಸಚಿವ ಸಂಪುಟದ ಸಭೆಯಲ್ಲಿ ಡಿಸಿ ಮನ್ನಾ ಜಮೀನಿನ
ಮಂಜೂರಾತಿ ಆದೇಶ ಆಗಲೇ ಇಲ್ಲ.
ಇದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗ ಆಕ್ರೋಶಕ್ಕೆ ಕಾರಣವಾಯಿತು.

ಈ ಬಗ್ಗೆ ದ.ಕ.ಜಿಲ್ಲೆಯ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ
ಶ್ರೀ ಕೆಹರೀಶ್ ಕುಮಾರ್,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಮ್ ರವರು ಮತ್ತು ಪಕ್ಷದ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಯವರು
ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ “ಪರಿಶಿಷ್ಟ ಸಮುದಾಯದ ಪ್ರಮುಖ ಬೇಡಿಕೆಯಾದ
ಡಿಸಿ ಮನ್ನಾ ಭೂಮಿ ಮಂಜೂರಾತಿ ಮಾಡುವಂತೆ ಮನವಿ” ಮಾಡಿರುವ
ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಗಳು
ಕಂದಾಯ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಾ ಜಿ.ಪರಮೇಶ್ವರ್ ರವರಿಗೆ ಡಿಸಿ ಮನ್ನಾ ಜಮೀನಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಮುಖ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಪ್ರಮುಖ ನಿರ್ಧಾರ ಕೈಗೊಳ್ಳಲು

ಕರ್ನಾಟಕ ಸರಕಾರದ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಡಾ .ಜಿ. ಪರಮೇಶ್ವರ್ ರವರು
ಮಂಗಳೂರಿನ
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾದಿಕಾರಿಗಳನ್ನು ಇಂದು (01-10-2026)
ಬೆಂಗಳೂರಿನ ವಿಧಾನ ಸೌಧದ ತನ್ನ ಕಚೇರಿಗೆ ಆಹ್ವಾನಿಸಿ

ಸಮಿಯ ಪದಾಧಿಕಾರಿಗಳು
ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ
ಡಿಸಿ ಮನ್ನಾ ಜಮೀನಿನ ಮಂಜೂರಾತಿ ಬಗೆಗಿನ ಸಾಧಕ ಬಾಧಕ ಮತ್ತು ಕಾನೂನು ತೊಡಕುಗಳ ಬಗ್ಗೆ
ಸುಧೀರ್ಘ ಒಂದು ವರೆ ಗಂಟೆಗಳ ಕಾಲ ಚರ್ಚಿಸಿ,ಸಂಘಟನೆಯ ಪದಾಧಿಕಾರಿಗಳು ನೀಡಿದ ದಾಖಲಾತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು.

ಡಿಸಿ ಮನ್ನಾ ಜಮೀನಿನ ಕಾನೂನು ತೊಡಕುಗಳನ್ನು ನಿವಾರಿಸಿ ಭೂ ಮಂಜೂರಾತಿಗೆ ವಿಶೇಷ ಕಾನೂನು ರೂಪಿಸಲು ಮುಂದಿನ ಸಚಿವ ಸಂಪುಟದ ಸಭೆಗೆ ಮುಂಚಿತವಾಗಿ
ಅಗತ್ಯ ದಾಖಲೆ ಸಿದ್ದಪಡಿಸುವಂತೆ
ಕಂದಾಯ ಅಧಿಕಾರಿಗಳಿಗೆ
ನಿರ್ದೇಶನ ನೀಡಿದರು.

ಸಚಿವ ಸಂಪುಟದ ಸಭೆಯಲ್ಲಿ ಪರಿಶಿಷ್ಟ ಸಮುದಾಯದ ಡಿಸಿ ಮನ್ನಾ ಜಮೀನಿನ
ಭೂ ಮಂಜೂರಾತಿ ಬಗ್ಗೆ ಸೂಕ್ತ ಕಾನೂನು ರೂಪಿಸುತ್ತೇವೆ, ಮತ್ತು ದಲಿತ ನಾಯಕರ ಕಾರ್ಯಕರ್ತರ ಹೋರಾಟಗಾರರ
ನಿಮ್ಮ ಬೇಡಿಕೆಯಂತೆ
ಮಂಗಳೂರಿಗೆ ನಾನೇ ಬಂದು ಭೂರಹಿತ ಪರಿಶಿಷ್ಟ ಸಮುದಾಯದವರಿಗೆ
ಹಕ್ಕು ಪತ್ರ ವಿತರಣೆಯನ್ನು ಮಾಡುವುದಾಗಿ ಭರವಸೆ ನೀಡಿದರು.

ಕಂದಾಯ ಸಚಿವರಾದ
ಡಾ ಜಿ.ಪರಮೇಶ್ವರ್ ರವರ ಭೇಟಿಯ ಸಂಧರ್ಭದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ

ಬಿ.ಕೆ.ವಸಂತ್ ಬೆಳ್ತಂಗಡಿ,
ಪ್ರೇಮನಾಥ್ ಬಲ್ಲಾಳ್ ಬಾಗ್,
ರಘು ಎಕ್ಕಾರ್ ,
ಅಶೋಕ್ ಕೊಂಚಾಡಿ ,.
ಕ್ರಷ್ಣಾನಂದ ಡಿ ಮಂಗಳೂರು ,.
ಜಗದೀಶ್ ಪಾಂಡೇಶ್ವರ್ ,
ವೆಂಕಣ್ಣ ಕೊಯ್ಯೂರು ,
ಆನಂದ ಬೆಳ್ಳಾರೆ ,
ಹರಿಯಪ್ಪ ಮುತ್ತೂರು ,
ಶ್ರೀಧರ ಎಸ್ ಕಳೆಂಜ,
ರಮೇಶ್ ಆರ್ ಬೆಳ್ತಂಗಡಿ ,
ನಾರಾಯಣ ಪುದುವೆಟ್ಟು ,
ಪ್ರಭಾಕರ್ ಶಾಂತಿಕೋಡಿ ,
ಸದಾಶಿವ ಪಡುಬಿದ್ರೆ ,
ಸರೋಜಿನಿ ಬಂಟ್ವಾಳ ,
ಯಶೋಧ ಡಿ ಮಂಗಳೂರು ,
ರೋಹಿತ್ ಧರ್ಮಸ್ಥಳ ,
ಪ್ರದೀಪ್ ಕುಮಾರ್ ಪುದುವೆಟ್ಟು ಇವರುಗಳು ಉಪಸ್ಥಿತರಿದ್ದರು.

Related posts

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

Suddi Udaya

ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ‘ದಸ್ಕತ್’; ಗ್ರಾಮೀಣ ಭಾಗದ ಸಂಸ್ಕೃತಿ,ಸಂಘರ್ಷ,ಸಂಭ್ರಮದ ಕಥೆ ಹೇಳುವ ದಸ್ಕತ್ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ

Suddi Udaya

ತೋಟತ್ತಾಡಿ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ನ.19-20 ರಂದು ಕೆ.ಎಸ್.ಆರ್ ಟಿ.ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

Suddi Udaya

ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದಶ೯ನ

Suddi Udaya

ಭಾರೀ ಮಳೆ ಹಿನ್ನೆಲೆ: ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಇಂದು (ಜೂ16)ರಜೆ ಘೋಷಣೆ

Suddi Udaya
error: Content is protected !!