November 16, 2026
ಜಿಲ್ಲಾ ಸುದ್ದಿ

ಬೈಂದೂರು ಸೇವಾಧಾಮದಲ್ಲಿ ದೀಪಾವಳಿ ಸಂಭ್ರಮ: ದಿವ್ಯಾಂಗರೊಂದಿಗೆ ಬೆಳಕಿನ ಹಬ್ಬ ಆಚರಣೆ:

ಬೈಂದೂರು(ನ. 13): ಬೆಳಕಿನ ಹಬ್ಬ ದೀಪಾವಳಿಯನ್ನು ಬೈಂದೂರಿನ ಒತ್ತಡಗಾಯ ನಿರ್ವಹಣಾ ಹಾಗೂ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯ ಸಮೃದ್ಧ ಬೈಂದೂರು ಸಹಕಾರದೊಂದಿಗೆ ನವೆಂಬರ್ 13 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳು ದೈಹಿಕ ಸವಾಲುಗಳ ಜೊತೆಗೆ ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಪ್ರತ್ಯೇಕತೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಇಂತಹ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಆರೈಕೆ, ಪುನರ್ವಸತಿ ಸೌಲಭ್ಯ ಹಾಗೂ ಮಾನಸಿಕ ಬೆಂಬಲವನ್ನು ಒದಗಿಸಿ, ಅವರು ಆತ್ಮವಿಶ್ವಾಸದಿಂದ ಬದುಕು ಸಾಗಿಸಲು ನೆರವಾಗುವ ಕಾರ್ಯವನ್ನು ಸೇವಾಧಾಮ ನಿರಂತರವಾಗಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಯು ಸನಿವಾಸಿಗಳಲ್ಲಿ ಸಂತಸವನ್ನು ಮೂಡಿಸುವ ಉದ್ದೇಶ ಹೊಂದಿತ್ತು.

ಕಾರ್ಯಕ್ರಮವನ್ನು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಶ್ರೀಮತಿ ಅನಿತಾ ಆರ್. ಕೆ., ಶಿರೂರಿನ ನಂಬಿಯಾರ್ ಕ್ಲಿನಿಕ್‌ನ ಡಾ. ನಂಬಿಯಾರ್, ಬೈಂದೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಗೋಪಾಲ್ ವಸ್ರೆ, ಸೇವಾಭಾರತಿಯ ಕಾರ್ಯದರ್ಶಿ ಶ್ರೀ ವಿಷ್ಣುಪ್ರಸಾದ್ ತೆಂಕಿಲ್ಲಾಯ, ಶ್ರೀಮತಿ ಮಂಜುಳಾ ವಿ. ಪ್ರಸಾದ್, ಶ್ರೀ ಸೀತಾರಾಮ ಶೆಟ್ಟಿ, ಶ್ರೀ ಜೇಸನ್ ಎಂ.ಡಿ. ಹಾಗೂ ಶ್ರೀಮತಿ ಮಾಲಿನಿ ಅವರು ಉದ್ಘಾಟಿಸಿದರು.

ದೀಪಾವಳಿ ಪ್ರಯುಕ್ತ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಫಲಾನುಭವಿಗಳು, ಆರೈಕೆದಾರರು ಹಾಗೂ ಸಿಬ್ಬಂದಿವರ್ಗದವರಿಗೆ ವಿಭಿನ್ನ ಚಟುವಟಿಕೆಗಳನ್ನು ಮಾಡಿ ಜೊತೆಗೆ ಹಾಡು ಹಾಡುದರ ಮೂಲಕ ಎಲ್ಲರನ್ನು ಮನರಂಜಿಸಲಾಯಿತು. ಅಮೃತಗಳಿಗೆಯಲ್ಲಿ ಅಮೃತ ಹಸ್ತದಲ್ಲಿ ಹಣತೆಯನ್ನು ಹಚ್ಚಿ ಪಟಾಕಿಯನ್ನು ಸಿಡಿಸಿ ದೀಪಾವಳಿಯನ್ನು ಸಂಭ್ರಮಿಸಲಾಯಿತು.

ಸಂಸ್ಥೆಯ ದಾನಿಗಳು, ಹಿತೈಷಿಗಳು, ಹೇನಬೇರು ಗ್ರಾಮಸ್ಥರು, ಸನಿವಾಸಿಗಳು, ಆರೈಕೆದಾರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..

Related posts

ಸೋಲಾರ್ ಟಾರ್ಪಾಲಿನ್ ಶೀಟ್ ಖರೀದಿಗೆ ಸಹಾಯಧನ: ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ತಾಲ್ಲೂಕಿನ ವಿವಿಧ ಚಚ್೯ಗಳಿಗೆ ಭೇಟಿ ನೀಡಿ, ಮತ ಯಾಚಿಸಿದ ಹರೀಶ್ ಪೂಂಜ

Suddi Udaya

ಬುರುಡೆ ಚಿನ್ನಯ್ಯ ಕೋರ್ಟ್ ಗೆ ತಂದಿದ್ದ ಬುರುಡೆ ಪೋಟೋ ರಿವಿಲ್

Suddi Udaya

ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು ಮಂಜೂರು

Suddi Udaya

ಹಿರಿಯ ಸಹಕಾರಿ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಿರಂಜನ್ ಬಾವಂತಬೆಟ್ಟುರವರಿಗೆ ‘ಸಹಕಾರಿ ರತ್ನ ಪ್ರಶಸ್ತಿ’

Suddi Udaya

ಇಂದು ಮಧ್ಯಾಹ್ನ 12ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ

Suddi Udaya
error: Content is protected !!