31.7 C
ಪುತ್ತೂರು, ಬೆಳ್ತಂಗಡಿ
October 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಮತ್ತು ಅಲೇರಿ ಕ್ಷೇತ್ರ ಅಭಿವೃದ್ಧಿಗೆ ರೂ.10 ಕೋಟಿ ಅನುದಾನ: ಸಚಿವ ಕೆ.ಎಚ್. ಮುನಿಯಪ್ಪ ಭರವಸೆ

ಬೆಳ್ತಂಗಡಿ: ಕರಾವಳಿ ಮೂಲದ ಶ್ರೀ ಸತ್ಯ ಸಾರಮಾನಿ ಕಾನದ ಕಟದರನ್ನು ಕುಲ ದೈವಗಳಾಗಿ ಆರಾಧಿಸುವ ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅದ್ಯಯನ ಮತ್ತು ಅಲೇರಿ ಮೂಲಕ್ಷೇತ್ರ ಅಭಿವೃದ್ಧಿಗೆ ಅನುದಾನ ಬಗ್ಗೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಚಿವ ಕೆ.ಎಚ್ ಮುನಿಯಪ್ಪ ರವರೊಂದಿಗೆ ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ವಿಶೇಷ ಸಂವಾದ ಗುರುವಾರ ನಡೆಯಿತು.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ ರವರು ಅಲೇರಿ ಕ್ಷೇತ್ರ ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರ. ಇದು ಕೇವಲ ಧಾರ್ಮಿಕ ಕ್ಷೇತ್ರವಾಗದೆ ಸಮುದಾಯದ ಶಕ್ತಿಕೇಂದ್ರವಾಗಿ ರೂಪುಗೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಕೇಂದ್ರ , ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಗತ್ಯವಿರುವ 10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಲು ಬದ್ದ ಹಾಗೂ ಶೀಘ್ರವೇ ವಿಸ್ತೃತ ಯೋಜನಾ ವರದಿ ನೀಡುವಂತೆ ತಿಳಿಸಿದರು. ಜೊತೆಗೆ ಕ್ಷೇತ್ರಕ್ಕೆ ಜಮೀನು ಖರೀದಿಸಲು ಸೂಕ್ತ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು.

ಕುಲಶಾಸ್ತ್ರೀಯ ಅದ್ಯಯನ: ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸೂಕ್ತ ಅನುದಾನ ಬಿಡುಗಡೆಯೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮೂಲಕ ಕುಲಶಾಸ್ತ್ರೀಯ ಅದ್ಯಯನ ನಡೆಸಲಾಗುವುದು ಎಂದರು.

ಡಿಸಿ ಮನ್ನಾ ಜಮೀನು ಹಂಚಿಕೆಗೆ ಜಿಲ್ಲಾಧಿಕಾರಿಗೆ ಆದೇಶ: ಡಿಸಿ ಮನ್ನಾ ಜಮೀನು ಬಗ್ಗೆ ಮೂರುವರೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಜಮೀನು ಹಂಚಿಕೆ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲೂ ವಾಗ್ದಾನ ಮಾಡಲಾಗಿದೆ ಎಂದು ನಾಯಕರು ಸಚಿವರ ಗಮನ ಸೆಳೆದಾಗ ಡಿಸಿ ಮನ್ನಾ ಜಮೀನು ಹಂಚಿಕೆ ಮಾಡುವ ಬಗ್ಗೆ ತಕ್ಷಣ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆದೇಶಿಸುವುದಾಗಿದೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದಿರೆ , ಮಾಜಿ ಜಿಲ್ಲಾ ಪಂಚಾಯತ್ ಶೇಖರ್ ಕುಕ್ಕೇಡಿ , ದ.ಕ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ , ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ನೀಲಯ್ಯ ಗಾಳಿಗುಡ್ಡೆ , ಗೌರವಾಧ್ಯಕ್ಷ ಸುರೇಶ್ ಹಾರ್ಡಿಕೊಪ್ಪ , ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಜಾವಳಿ , ಮುಖಂಡರಾದ ಚಂದ್ರಪ್ಪ ಮದ್ದಡ್ಕ , ಶೇಖರ್ ವಿ ಧರ್ಮಸ್ಥಳ , ಮಾಧವ ಕಡೆಶಿವಾಲಯ , ಆನಂದ ಹಟ್ಟತ್ತೊಡಿ , ಲಿಂಗಪ್ಪ ಕೈಲಾರ್ ಕಾವಳಕಟ್ಟೆ ಶ್ರೀನಿವಾಸ್ ಪಾಲ್ಯ , ಶಿವರಾಮ ಆನಡ್ಕ , ಗಣೇಶ್ ಬೆಳುವಾಯಿ , ಶಿವಾನಂದ ಪಡಂಗಡಿ , ಯತೀಶ್ ಧರ್ಮಸ್ಥಳ , ಸುಕೇಶ್ ಮಾಲಾಡಿ , ಓಬಯ್ಯ ಆರಂಬೋಡಿ , ಮೋಹಿತ್ ಹಿರೆಬೈಲು , ಸುರೇಶ್ ಧರ್ಮಸ್ಥಳ , ಸುರೇಶ್ ಕಜೆಕಾರು , ಶೇಖರ್ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.

Related posts

ಮೇ 1-3 : ಕುಂಡದಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ನಲ್ಲಿ 51 ನೇ ವರ್ಷದ ಮಖಾಂ ಉರೂಸ್

Suddi Udaya

ಕೊಕ್ಕಡ ಮಾಯಿಲಕೋಟೆ ದೈವಸ್ಥಾನಕ್ಕೆ ಪುತ್ತೂರು ಗೇರು ಅಭಿವೃದ್ಧಿ ನಿಗಮದ ರವಿಕುಮಾರ್ ಭೇಟಿ

Suddi Udaya

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ದಿನಸಿ ಅಂಗಡಿ ಬೆಂಕಿಗಾಹುತಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಿಂದ ಭೇಟಿ

Suddi Udaya

ಉಜಿರೆ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಪಾಲಕರ ಹಬ್ಬದ ಆಚರಣೆ

Suddi Udaya

ಮದ್ದಡ್ಕ : ಮನೀಶ್ ಹೋಟೆಲ್ ಮಾಲಕ ರಮೇಶ್ ಪೂಜಾರಿ ನಿಧನ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ನಡ್ವಾಲ್ ಸಿರಿಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!