ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೊನಿಗಳ ರಸ್ತೆ ಅಭಿವೃದ್ಧಿಗೆ ರೂ.75ಲಕ್ಷ ಅನುದಾನ ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಪರ್ಮಾಣು ಕ್ರಾಸ್ ನಿಂದ ಗೋಳಿಯಂಡಿ ಪರಿಶಿಷ್ಟ ಜಾತಿ ಕಾಲೊನಿ ಅಭಿವೃದ್ಧಿಗೆ ರೂ.25ಲಕ್ಷ, ನಾರಾವಿ ಗ್ರಾಮದ ನೂಜೋಡಿ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.25 ಲಕ್ಷ, ಮಚ್ಚಿನ ಗ್ರಾಮದ ಕುಕ್ಕಿಲ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.10 ಲಕ್ಷ, ಮಚ್ಚಿನ ಗ್ರಾಮದ ಬದನೋಡಿ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.8ಲಕ್ಷ, ಮಚ್ಚಿನ ಗ್ರಾಮದ ನೇರೋಳ್ ಪಲ್ಕೆ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿಗೆ ರೂ.7.ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳನ್ನು ಕೆ.ಆರ್ ಐ.ಡಿ.ಎಲ್ ಸಂಸ್ಥೆ ಮುಖಾಂತರ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.













