ಉರುವಾಲು: 2026-27 ನೇ ಸಾಲಿನ ಪುಂಜಾಲಕಟ್ಟೆ ವಲಯ ಹಾಗೂ ಕರಾಯ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ 14 ವರ್ಷ ಒಳಗಿನ ಬಾಲಕ ಬಾಲಕಿಯರ ಕ್ರೀಡಾಕೂಟವು ಕೆಪಿಎಸ್ ಪುಂಜಾಲಕಟ್ಟಿ ಕ್ರೀಡಾಂಗಣ ದಲ್ಲಿ ಇಂದು ನಡೆದಿದ್ದು
ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉರುವಾಲು ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.

ಹುಡುಗರ ವಿಭಾಗದಲ್ಲಿ 600 ಮೀಟರ್ ಓಟದಲ್ಲಿ ದಿಶಾನ್ ರೈ ಮೂರನೇ ಸ್ಥಾನ, ಹರ್ಡಲ್ಸ್ ನಲ್ಲಿ ಮಹಮ್ಮದ್ ಶಮ್ಮಸ್ ಪ್ರಥಮ ಸ್ಥಾನ , 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡಕೊಂಡಿದ್ದು,

ಹುಡುಗೀರ ವಿಭಾಗದಲ್ಲಿ ಗುಂಡೆಸೆತದಲ್ಲಿ ಸುನಿಧಿ ತೃತೀಯ ಸ್ಥಾನ ,ಹರ್ಡಲ್ಸ್ ನಲ್ಲಿ ಸ್ವಸ್ತಿ ಪ್ರಥಮ ಸ್ಥಾನ, ಜಾನ್ವಿ ತೃತೀಯ ಸ್ಥಾನ, ಹಾಗೂ ಎತ್ತರ ಜಿಗಿತದಲ್ಲಿ ಧೃತಿ ಪ್ರಥಮ ಸ್ಥಾನ ಪಡೆದಿರುತ್ತಾರೆ .
ವಿಜೇತ ವಿದ್ಯಾರ್ಥಿಗಳೆಲ್ಲರಿಗೂ ಹಾಗೂ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಕು. ಐಶ್ವರ್ಯ ಇವರಿಗೆ ಶಾಲಾ ಸೇವಾ ಸಮಿತಿಯ ಸರ್ವ ಸದಸ್ಯರು ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ಮಿತ್ರರು ಪೋಷಕರು ಶುಭಾಶಯ ತಿಳಿಸಿದರು.














