31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ: ನಿಡಿಗಲ್ ಅಕ್ಷಯನಗರ ಗೆಳೆಯರ ಬಳಗದ ಆಶ್ರಯದಲ್ಲಿ ಆಟೋಟ ಸ್ಪರ್ಧೆ

ಕಲ್ಮಂಜ : ಗೆಳೆಯರ ಬಳಗ ಅಕ್ಷಯನಗರ ನಿಡಿಗಲ್ ಕಲ್ಮಂಜ ಇದರ ಆಶ್ರಯದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ದಿ ಮಹಾವೀರ ಜೈನ್ ಹುಣಿಪ್ಪಾಜೆ ಗುತ್ತು ಇವರ ಸ್ಮರಣಾರ್ಥ ಸೆ.27ರಂದು ಆಟೋಟ ಸ್ಪರ್ಧೆಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಅಣ್ಣಿ ಪೂಜಾರಿ ಅಂಬಡೆದಡಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ರೀಡಾಧ್ಯಕ್ಷ ರವಿ ಟಿ ಕಂದೂರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಕಲ್ಮಂಜ ಆಯುಷ್ಮಾನ್ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಅಧಿಕಾರಿ ಬಿ ರಂಜಿತಾ, ಉಜಿರೆ ಆಟೋ ಚಾಲಕರ ಸಂಘ ಅಧ್ಯಕ್ಷ ಜಗನ್ನಾಥ ಪಾಣಿಯಾಲ್, ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಕಲ್ಮಂಜ ಗ್ರಾಮ ಪಂಚಾಯತ್ ಸಿಬ್ಬಂದಿ ರಮೇಶ್ ಗೌಡ , ಊರಿನ ಹಿರಿಯರಾದ ಜಿನ್ನಪ್ಪ ಪೂಜಾರಿ ಅಕ್ಷಯನಗರ, ಹಾಗೂ ಮೋನಪ್ಪ ಟಿ ಅಕ್ಷಯನಗರ ಉಪಸ್ಥಿತರಿದ್ದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಸುಬ್ರಾಯ ಅಕ್ಷಯನಗರ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಜಿರೆ ರತ್ನಮಾನಸ ನಿಲಯ ಪಾಲಕರು ಯತೀಶ್ ಕೆ ಬಳೆಂಜ, ಮಂಗಳೂರು ವಿಭಾಗ ಘುಮಂತು ಕಾರ್ಯ ಸಂಯೋಜಕ ಸುದರ್ಶನ್ ಭಟ್ ಕನ್ಯಾಡಿ , ಲಾನ್ಸಿ ಮೋನಿಸ್ ಮಾಲಕರು ವೆಲಂಕಣಿ ಕೇಟರರ್ಸ್ ಅಕ್ಷಯನಗರ, ರಾಘವೇಂದ್ರ ಊಂಕ್ರೋಟ್ಟು, ಸಿವಿಲ್ ಗುತ್ತಿಗೆದಾರರು, ನಿಡಿಗಲ್ ಬದ್ರಿಯಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ರಫೀಕ್ ನಿಡಿಗಲ್, ಗೆಳೆಯರ ಬಳಗದ ಸಂಚಾಲಕ ಶೀನ ಅಕ್ಷಯನಗರ ಹಾಗೂ ಕ್ರೀಡಾಧ್ಯಕ್ಷ ರವಿ ಟಿ ಕಂದೂರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ವಿವಿಧ ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 2025-2026ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 16 ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ ಕಲ್ಮಂಜ ಗ್ರಾಮದ ಯುವ ಪ್ರತಿಭೆಗಳನ್ನು ಗೌರವಿಸಲಾಯಿತು.

ಕಲ್ಮಂಜ ಗ್ರಾಮ ಪಂಚಾಯತ್ ನಿಂದ ಗೆಳೆಯರ ಬಳಗಕ್ಕೆ ಕ್ರೀಡಾ ಪರಿಕರಗಳನ್ನು ವಿತರಿಸಲಾಯಿತು.
ನೆಲ್ಸನ್ ಮೋನಿಸ್, ಅಶೋಕ್ ಪೂಜಾರಿ ಬಳ್ಳಿದಡ್ಡ, ಯಶೋಧ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಚಿದಾನಂದ ಲಿಂಗಾಯತ ಅಕ್ಷಯನಗರ ವಂದಿಸಿದರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಬೂತ್ ಅಧ್ಯಕ್ಷರ ಮತ್ತು ಬಿ.ಎಲ್ ಎ ರವರ ತರಬೇತಿ ಕಾರ್ಯಗಾರ

Suddi Udaya

ಮುಂಡಾಜೆ: ರಾಮ ನಾಯ್ಕ ನಿಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

ಮಾ.10: ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವ: ಹುಣ್ಸೆಕಟ್ಟೆಯಲ್ಲಿ ಪೂರ್ವಭಾವಿ ಸಭೆ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿಯಲ್ಲಿ ರಂಝಾನ್ ಆಚರಣೆ

Suddi Udaya

ಜೂ.13: ಕೊಕ್ಕಡದಲ್ಲಿ ಸತ್ಯಸುದ್ದಿ ನ್ಯೂಸ್ ಡಿಜಿಟಲ್ ಮೀಡಿಯಾ ಶುಭಾರಂಭ

Suddi Udaya
error: Content is protected !!