27.5 C
ಪುತ್ತೂರು, ಬೆಳ್ತಂಗಡಿ
October 4, 2026
ಅಭಿನಂದನೆ

ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ರುಕ್ಮಿಣಿ ಎಂ ಜಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಜಿರೆ ಇದರ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ:ಲಯನ್ಸ್ ಕ್ಲಬ್ ಬೆಳ್ತಂಗಡಿ ಹಾಗೂ ರುಕ್ಮಿಣಿ ಎಂ ಜಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಜಿರೆ ಇದರ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಅ 04ರಂದು ಲಯನ್ಸ್ ಸೇವಾ ಭವನದಲ್ಲಿ ಜರುಗಿತು ಲಯನ್ಸ್ ಕ್ಲಬ್ ನ ಸ್ಥಾಪಕ ಸದಸ್ಯರಾಗಿ ಅಧ್ಯಕ್ಷರಾಗಿ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ದಿವಂಗತ ಎಂ ಜಿ ಶೆಟ್ಟಿಯವರ ಸ್ಮರಣಾರ್ಥ ಅವರ ಕುಟುಂಬದವರು ಪ್ರಾರಂಭಿಸಿರುವ ರುಕ್ಮಿಣಿ ಎಂ ಜಿ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆಯನ್ನು ಬಂಟ್ವಾಳದ ಜೀವ ವಿಮಾ ಹಿರಿಯ ಅಧಿಕಾರಿಯಾದ ರಾಮಯ್ಯ ಶೆಟ್ಟಿಯವರು ಹಾಗೂ ಶ್ರೀಮತಿ ರುಕ್ಮಿಣಿ ಎಂ ಜಿ ಶೆಟ್ಟಿ ಯವರು ನೆರವೇರಿಸಿದರು

ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ರಘುರಾಮ ಶೆಟ್ಟಿಯವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಿರಿಯ ಜೀವ ವಿಮಾ ಅಧಿಕಾರಿ ಸಿ ಕೆ ರಮೇಶ ಬಂಗೇರ ಹಾಗೂ ನಿವೃತ್ತ ಶಿಕ್ಷಕರಾದ ಉಜಿರೆಯ ಶ್ರೀ ವೀರಣ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು 2025 -26 ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದ ವೇಣೂರು ಪ್ರೌಢಶಾಲೆಯ ಸಮೃದ್ಧಿ ಜೈನ್ ಗುರು ವಾಯನಕೆರೆ ಪ್ರೌಢಶಾಲೆಯ ಮಹಮ್ಮದ್ ಶಹಜಾದ್ ರವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು

. ಅದೇ ರೀತಿ ಗೃಹಾಧಾರಿತ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ವಿದ್ಯಾರ್ಥಿಯಾದ ಬಂಗಾಡಿಯ ಮಹಮ್ಮದ್ ಶಾಜಿಲ್ ಹಾಗೂ ತಾಲೂಕಿನ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು ಶ್ರೀಮತಿ ಚಿತ್ರ ಎಸ್ ಕಾವ ಸ್ಮರಣಾರ್ಥ ಕ್ಯಾನ್ಸರ್ ಚಿಕಿತ್ಸೆಯನ್ನು ಪಡೆಯುತ್ತಿರುವ ಕಲ್ಲೆ ಉಜಿರೆ ಕಲ್ಲೆಯ ಶ್ರೀ ಹರೀಶ್ ಶೆಟ್ಟಿ ಇವರಿಗೆ ಧನಸಹಾಯವನ್ನು ನೀಡಲಾಯಿತು

. ವೇದಿಕೆಯಲ್ಲಿ ದಿವಂಗತ ಎಂ ಜಿ ಶೆಟ್ಟಿ ಅವರ ಪುತ್ರಿಯರಾದ ಶ್ರೀಮತಿ ವೃಂದ ಹರಿಪ್ರಸಾದ್ ಶೆಟ್ಟಿ ಶ್ರೀಮತಿ ಪ್ರಿಯಾ ಜಿ ಅಡ್ಯಾoತಾಯ ಅಳಿಯ ಶ್ರೀ ಹರೀಶ್ ಕಾವ ಉಪಸಿತರಿದ್ದರು. ಪುತ್ರರಾದ ಲಯನ್ ಚಿತ್ರೇಶ್ ಶೆಟ್ಟಿ ಯವರು ಪ್ರಾಸ್ತಾವಿಕ ಮಾತುಗಳನ್ನಾ ಡಿದರು ಲಯನ್ಸ್ ಕ್ಲಬ್ಬಿನ ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ ಲಿಯೋ ಅಧ್ಯಕ್ಷರಾದ ಅಭಿಜ್ಞಾ ಬೊಲ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯದರ್ಶಿ ಅಮಿತಾನಂದ ಹೆಗ್ಡೆಯವರು ಧನ್ಯವಾದ ಸಲ್ಲಿಸಿದರು ಪೂರ್ವ ಪ್ರಾಂತ್ಯಾಧ್ಯಕ್ಷರಾದ ಲಯನ್ ವಸಂತ ಶೆಟ್ಟಿ ಶ್ರದ್ದಾರವರು ಕಾರ್ಯಕ್ರಮ ನಿರೂಪಿಸಿದರು.

Related posts

ಜಿಲ್ಲಾ ಮಟ್ಟದ ಕ್ರೀಡಾಕೂಟ: ಶರ್ವಿನ್ ಮೋನಿಸ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಸಂತೃಪ್ತಿ ಆರ್. ರವರಿಗೆ ಡಿವಿಜನಲ್ ಲೇವಲ್ ಎಕ್ಸಲೆಂಟ್ ಅವಾರ್ಡ್ ಪ್ರಶಸ್ತಿ

Suddi Udaya

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100%ಫಲಿತಾಂಶದೊಂದಿಗೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

Suddi Udaya

ಸವಣಾಲು ನಂದಗೋಕುಲ ಪಾರ್ಮ್ ಹೌಸ್ ನಲ್ಲಿ ಯಕ್ಷಗಾನ ತರಗತಿ ಪ್ರಾರಂಭ

Suddi Udaya

ಶಾಲೆತ್ತಡ್ಕ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷೆ ಭಾರತಿ ಧರ್ಣಪ್ಪ ಗೌಡ ರಿಗೆ “ಕ್ಷೀರ ರತ್ನ” ಪ್ರಶಸ್ತಿ

Suddi Udaya
error: Content is protected !!