31.4 C
ಪುತ್ತೂರು, ಬೆಳ್ತಂಗಡಿ
October 4, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಅ.8: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಕೊಕ್ಕಡ ನೂತನ ಶಾಖೆ ಉದ್ಘಾಟನೆ

ಬೆಳ್ತಂಗಡಿ: ಗ್ರಾಹಕರ ಬೇಡಿಕೆಯಾನುಸಾರ ಹಾಗೂ ಈಗಿನ ಆಡಳಿತ ಮಂಡಳಿ ನೀಡಿದ ಭರವಸೆ ಮೇರೆಗೆ ಕೊಕ್ಕಡದಲ್ಲಿ ಸಮ್ಯಕ್ ಕಾಂಪ್ಲೆಕ್ಸ್ ನಲ್ಲಿ ಅ.8ಕ್ಕೆ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಕೊಕ್ಕಡ ನೂತನ ಶಾಖೆ ಉದ್ಘಾಟನೆ ನಡೆಯಲಿದೆ.
ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ಧರ್ಮಗುರು ವಂ. ಫಾ| ಅನಿಲ್ ಪ್ರಕಾಶ್ ಡಿಸಿಲ್ವ ಆಶೀರ್ವಾಚನಗೈಯುವರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ನಾಗೇಶ್ ಕುಮಾರ್ ಗೌಡ ಉದ್ಘಾಟನೆಯನ್ನು ಮಾಡುವರು. ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸುವರು.
ಮುಖ್ಯ ಅಥಿತಿಗಳಾಗಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿ ಖತೀಬರು ಅಬ್ದುಲ್ ರಾಝಿಕ್ ಆಲ್ ಖಾಸಿಮಿ,
ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.,
ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್ ಮಾಲಕ ಪಣಿರಾಜ ಜೈನ್ ಭಾಗವಹಿಸುವರು.

ಸಂಘದ ಹಿನ್ನೆಲೆ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘವು 1997-1998ರಲ್ಲಿ ಸುಮಾರು 604 ಸದಸ್ಯರನ್ನು ಒಳಗೊಂಡು ರೂ. 6 ಲಕ್ಷದಷ್ಟು ಪಾಲು ಬಂಡವಾಳದೊಂದಿಗೆ 1998 ಜನವರಿ 26ರಂದು “ಪರಸ್ಪರ ಸಹಕಾರ” ಎಂಬ ಧೈಯ ವಾಕ್ಯವನ್ನು ಮುಂದಿಟ್ಟುಕೊಂಡು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರವರಿಂದ ಆಶೀರ್ವಚನದೊಂದಿಗೆ ಸಂಘ ಸ್ಥಾಪನೆಗೊಂಡಿತು.
ಅಂದಿನ ಬೆಳ್ತಂಗಡಿಯ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರರಿಂದ ಉದ್ಘಾಟನೆಗೊಂಡು ಸುಮಾರು ನಾಲ್ಕು ವರ್ಷಗಳ ಕಾಲ ಬೆಳ್ತಂಗಡಿಯ ಪಿಂಟೊ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು. ಸಂಘಕ್ಕೆ 2001ರಲ್ಲಿ ಸುಮಾರು 1000ಚ.ಅಡಿ ವಿಸ್ತೀರ್ಣದ ಸ್ವಂತ ಕಟ್ಟಡಕ್ಕೆ ಸ್ಥಳವನ್ನು ಖರೀದಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಬಿಷಪ್
ಲಾರೆನ್ಸ್ ಮುಕ್ಕುಝಿಯವರಿಂದ ಆಶೀರ್ವಚನಗೊಂಡಿತು. ಸಹಕಾರ ಇಲಾಖೆಯ ಸಹಕಾರದಿಂದ ಕಾನೂನು ಸಲಹೆಗಾರರ ಸಲಹೆಯಂತೆ 2007ರಲ್ಲಿ ನಾರಾವಿ ಶಾಖೆ, 2012ರಲ್ಲಿ ಅಳದಂಗಡಿ ಶಾಖೆ, 2021ರಲ್ಲಿ ವೇಣೂರು ಶಾಖೆ, 2026ಮೇಯಲ್ಲಿ ಸೋಮಂತಡ್ಕದಲ್ಲಿ 4ನೇ ಶಾಖೆಯನ್ನು ತೆರೆದು ವ್ಯವಹರಿಸಲು ಅನೇಕ ಮಹನೀಯಾರು ಸಹಕರಿಸಿರುತ್ತಾರೆ. ಈ ಸಮಯದಲ್ಲಿ ಸಹಕಾರ ಸಂಘವು ಹತ್ತು ಹಲವು ಜನಪರ ಕೆಲಸಗಳನ್ನು ಕೈಗೊಂಡಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ, ವೈದ್ಯಕೀಯ ನಿಧಿಯಿಂದ ವೈದ್ಯಕೀಯ ನೆರವು, ಧಾರ್ಮಿಕ ದತ್ತಿ ನಿಧಿಯಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ನಿಧಿಯಿಂದ ಧಾರ್ಮಿಕ ಕೆಲಸಗಳಿಗೆ ಅನುದಾನ, ಕಡಿಮೆ ಬಡ್ಡಿದರದಲ್ಲಿ
ಗ್ರಾಹಕರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.

ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರಸ್ತುತ ಸಹಕಾರ ಸಂಘವು 2763 ಸದಸ್ಯರನ್ನು ಒಳಗೊಂಡು ರೂ.93 ಲಕ್ಷ ಪಾಲು ಬಂಡವಾಳ ಮೊತ್ತವನ್ನು ಸಂಗ್ರಹಿಸಿ ರೂಪಾಯಿ 120ಕೋಟಿ ಮೊತ್ತದ ಠೇವಣಿ ಸಂಗ್ರಹಿಸಿ ಅನೇಕ ನಿಧಿಗಳನ್ನು ಸ್ಥಾಪಿಸಿ 140ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರ ಸಂಘವು ಸರಿಸುಮಾರು ರೂ. 375ಕೋಟಿ ವ್ಯವಹಾರ ನಡೆಸಿ ರೂ. 2.13ಕೋಟಿ ನಿವ್ವಳ ಲಾಭಗಳಿಸಿರುತ್ತದೆ. ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಕಳೆದ 5ವರ್ಷದಿಂದ ಶೇಕಡ 25 ಪಾಲು ಮುನಾಫೆಯನ್ನು ನೀಡುತ್ತಿದೆ. ಪ್ರಸ್ತುತ ಆಡಳಿತ ಮಂಡಳಿಯು ಸದಸ್ಯರಿಗೆ ನೀಡಿದ ಭರವಸೆಗೆ ಉತ್ತರಿಸುತ್ತ ಹಾಗೂ ಸರ್ವ ಸದಸ್ಯರ ವಿನಂತಿ ಮೇರೆಗೆ ಸಹಕಾರ ಸಂಘವು ಸ್ವಂತ ಜಾಗ ಖರೀದಿಸಿ ಕಟ್ಟಡ ನಿರ್ಮಿಸಿ 2025, ಜನವರಿ23ರಂದು ಭವ್ಯವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ‘ಆಶಾಕಿರಣ’ ಎಂಬ ವಾಣಿಜ್ಯ ಸಂಕೀರ್ಣವು ಉದ್ಘಾಟನೆಗೊಂಡಿದೆ. ಅಳದಂಗಡಿ ಶಾಖೆಗೆ ಸ್ವಂತ ಕಟ್ಟಡ ಖರೀದಿಸಲಾಗಿದ್ದು ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ನಂತರದ ಎರಡು ನೂತನ ಶಾಖೆಯ ಭರವಸೆ ನೀಡಲಾಗಿದ್ದು ಇದೀಗ ಸೋಮಂತಡ್ಕದಲ್ಲಿ ಮೇ. 20ರಂದು ನೂತನ ಶಾಖೆ ಉದ್ಘಾಟನೆಗೊಂಡು 4ತಿಂಗಳಲ್ಲಿ ಉತ್ತಮ ವ್ಯವಹಾರ ಮಾಡಿದೆ.

ಆಡಳಿತ ಮಂಡಳಿ: ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ದಾನಾ, ಹೆರಾಲ್ಡ್ ಪಿಂಟೊ, ತೋಮಸ್‌ ಆ‌ರ್. ನೊರೊನ್ಹ, ವಿನ್ಸೆಂಟ್ ಪ್ರಕಾಶ್ ಪಿಂಟೊ, ಅಲ್ಫೋನ್ಸ್ ರೊಡ್ರಿಗಸ್,
ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿಸೋಜ, ವೃತ್ತಿಪರ ನಿರ್ದೇಶಕರು ರಿಯೋ ಮೈಕಲ್ ರೊಡ್ರಿಗಸ್, ವಿನಯ್ ಜೋನ್ಸನ್ ಡಿಸೋಜ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಐವನ್ ಗೊನ್ಸಾಲ್ವಿಸ್ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಮಡಂತ್ಯಾರಿನ ಜಿ. ಬಾಲಕೃಷ್ಣ ಭಂಡಾರಿ ಆಯ್ಕೆ

Suddi Udaya

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ :ಮೇ.10 ಚುನಾವಣೆ – ಮೇ. 13: ಮತ ಎಣಿಕೆ

Suddi Udaya

ವೇಣೂರು: ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಮಂತ್ರಿ ಮಂಡಲ ರಚನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯೋತವದ ಪ್ರಯುಕ್ತ ಯೋಧರು-ಪೋಲಿಸರಿಗೆ ಗೌರವಾರ್ಪಣೆ ‘ರಕ್ಷಕ ನಮನ’

Suddi Udaya

ನಾವರ: ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾ‌ರ್ ಭೇಟಿ

Suddi Udaya
error: Content is protected !!