31.4 C
ಪುತ್ತೂರು, ಬೆಳ್ತಂಗಡಿ
October 4, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ಧರ್ಮಸ್ಥಳದಲ್ಲಿ 28ನೇವರ್ಷದ ಭಜನಾಕಮ್ಮಟದ ಸಮಾರೋಪ ಭಜನಾ ತಂಡಗಳ ಭಜನಾಪಟುಗಳಿಂದ ಶೋಭಾಯಾತ್ರೆ ಮತ್ತು ನೃತ್ಯ ಭಜನೋತ್ಸವ

ಧಮ೯ಸ್ಥಳ: ಧರ್ಮಸ್ಥಳದಲ್ಲಿ ಸೆ.28ರಿಂದ ನಡೆಯುತ್ತಿರುವ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವ ಧಮ೯ಸ್ಥಳ: ಧರ್ಮಸ್ಥಳದಲ್ಲಿ ಸೆ.28ರಿಂದ ನಡೆಯುತ್ತಿರುವ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವ ಅ.4ರಂದು ಅಮೃತವರ್ಷಿಣಿ ಸಭಾಭವನದಲ್ಲಿ ವೈಭವದಿಂದ ನಡೆಯಿತು

.

ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ .ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು.

ಮಾತೃ ಶ್ರೀ ಹೇಮಾವತಿ ವೀ.ಹೆಗ್ಗಡೆ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ಡಿ . ಸುರೇಂದ್ರ ಕುಮಾರ್, ಡಿ. ಹಷೇ೯ಂದ್ರ ಕುಮಾರ್, ಶ್ರೀಮತಿ ಸುಪ್ರೀಯ ಹಷೇ೯ಂದ್ರ‌ ಕುಮಾರ್, ಶ್ರೀಮತಿ ಐಶ್ವರ್ಯ ನಿಶ್ಚಲ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಭ್ರಮದ ಭಜನೋತ್ಸವ: ಸಮಾರಂಭಕ್ಕೆ ಪೂರ್ವಭಾವಿಯಾಗಿ ಬೆಳಿಗ್ಗೆ ಭಜನಾ ತಂಡಗಳ ಭಜನಾಪಟುಗಳಿಂದ ಶೋಭಾಯಾತ್ರೆ ಮತ್ತು ನೃತ್ಯಭಜನೆ ಭಜನೋತ್ಸವ ನಡೆಯಿತು. ರಾಜ್ಯ ಭಜನಾ ಪರಿಷತ್ ಪರವಾಗಿ ಪೂಜ್ಯ ಖಾವಂದರಿಗೆ‌ ಹಾಗೂ ಮಾತೃ ಶ್ರೀ ಅಮ್ಮನವರಿಗೆ ಭಜನಾ ಪರಿಷತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಗೌರವಿಸಿದರು.‌ಶಿಬಿರಾಥಿ೯ಗಳಿಂದ ನೃತ್ಯ ಭಜನೆ ಪ್ರಾತ್ಯಕ್ಷಿಕೆ ಹಾಗೂ ಮಹಿಳಾ ಶಿಬಿರಾಥಿ೯ಗಳಿಂದ ಭಜನಾ ಪ್ರಾತ್ಯಕ್ಷಿಕೆ ನಡೆಯಿತು.

ಶಿಬಿರಾಥಿ೯ಗಳಾದ ತಿಮ್ಮಪ್ಪ ಕಕೆ೯ರಾ ಬ್ರಹ್ಮವರ, ಲತಾ ಸುಳ್ಯ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಧ.ಮಂ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶ್ರೀ ಧ.ಮಂ ಭಜನಾ ಕಮ್ಮಟದ ಕಾಯ೯ದಶಿ೯ ವೀರು ಶೆಟ್ಟಿ ವರದಿ ವಾಚಿಸಿದರು. ಯೋಗ ನಿರ್ದೇಶಕ ಡಾ.ಐ ಶಶಿಕಾಂತ್ ಜೈನ್ ಭಜನಾ ಪ್ರಾತ್ಯಕ್ಷಿಕೆ ನಿವ೯ಹಿಸಿದರು. ಶ್ರೀನಿವಾಸ ರಾವ್ ಕಾಯ೯ಕ್ರಮ‌ ನಿರೂಪಿಸಿದರು. ರತ್ನವಮ೯ ಜೈನ್ ವಂದಿಸಿದರು.

Related posts

ಇಂದಬೆಟ್ಟುವಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

Suddi Udaya

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ: ಬಿರ್ವ ಸಂಜೀವ ಪೂಜಾರಿಯವರಿಂದ ನವರಾತ್ರಿ ಮಹೋತ್ಸವ ಉದ್ಘಾಟನೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಬಂದಾರು ಮತ್ತು ಮೊಗ್ರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ

Suddi Udaya

ಭೀಮ ಗೋಲ್ಡ್ CSR ಸಹಕಾರದಿಂದ ಬೈಂದೂರು ಸೇವಾಧಾಮದಲ್ಲಿ ನೀರಿನ ಘಟಕದ ಉದ್ಘಾಟನೆ

Suddi Udaya

ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ. ಧ. ಗ್ರಾ. ಯೋಜನೆಯಲ್ಲಿ ಆಯುಧ ಪೂಜೆ

Suddi Udaya
error: Content is protected !!