ಬೆಳ್ತಂಗಡಿ: ಬಾರ್ಯ ಗ್ರಾಮದ ಪ೦ದ೯ ಗುತ್ತು ಕೃಷ್ಣಪ್ಪ ಪೂಜಾರಿ ಹಾಗೂ ಬಾರ್ಯ ಗ್ರಾಮ ಪಂಚಾಯತ್ ನ ಪಿಡಿಓ ಲೀಲಾ ದಂಪತಿಯ ಪುತ್ರ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರಕೃತಿ ಚಿಕಿತ್ಸಾ ತೃತೀಯ ವಿಭಾಗದ ವಿದ್ಯಾರ್ಥಿ ವಿಕಾಸ್ಇತ್ತೀಚೆಗೆ ಮೂಡು ಬಿದಿರೆ ಕಾಲೇಜಿನಲ್ಲಿ ನಡೆದ ಯೋಗ ದಲ್ಲಿ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ “ದಾಖಲೆಯನ್ನು ಮಾಡಿ ಊರಿಗೆ ಹಾಗೂ ಕಾಲೇಜಿಗೆ ಹೆಸರನ್ನು ತಂದಿದ್ದು ಆತನಿಗೆ ಇಂದು ಜಾಗತಿಕ ಬಿಲ್ಲವ ಮಹಾಮಂಡಲ ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಬಿಲ್ಲವ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ಶ್ರೀ ಜಯಾನಂದ ಎಂ,ಗುರು ಚಾರಿಟೇಬಲ್ ಕೋಶಾಧಿಕಾರಿ ಭಾಸ್ಕರ ಅಮೀನ್,ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು,ನಿರ್ದೇಶಕಿ ಉಷಾ ಶರತ್ ಬಾರ್ಯ,ಬಾರ್ಯ ತೆಕ್ಕರ್ ಬಿಲ್ಲವ ಸಂಘದ ಅಧ್ಯಕ್ಷರಾದ ದಿನೇಶ್ ಸುಣ್ಣಾಜೆ,ಪೋಷಕರಾದ ಕೃಷ್ಣಪ್ಪ ಪೂಜಾರಿ ಹಾಗೂ ಲೀಲಾವತಿ ಉಪಸ್ಥಿತರಿದ್ದರು.













