September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ ವತಿಯಿಂದ ಎನ್.ಎಸ್.ಎಸ್ ದಿನಾಚರಣೆ: ಪ್ರಾಣಾಯಾಮ, ಧ್ಯಾನ ಮತ್ತು ಪೌಷ್ಟಿಕಾಂಶ ಸಲಹೆ

ಉಜಿರೆ: ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ (SDMCNYS) ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (NSS) ದಿನಾಚರಣೆಯ ಅಂಗವಾಗಿ ಸೌತಡ್ಕ ಸ್ಪೈನಲ್ ಕಾರ್ಡ್ ರಿಹ್ಯಾಬಿಲಿಟೇಷನ್ ಸೆಂಟರ್ ಹಾಗೂ ಎಂಡೋಸಲ್ಫಾನ್ ರಿಹ್ಯಾಬಿಲಿಟೇಷನ್ ಕೇರ್ ಸೆಂಟರ್, ಕೊಕ್ಕಡದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸೌತಡ್ಕ ಸ್ಪೈನಲ್ ಕಾರ್ಡ್ ರಿಹ್ಯಾಬಿಲಿಟೇಷನ್ ಸೆಂಟರ್‌ನ ಮಾಲೀಕರಾದ ವಿನಾಯಕ ರಾವ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ಕೇಂದ್ರಗಳಲ್ಲಿರುವ ರೋಗಿಗಳಿಗೆ SDMCNYS‌ನ ಉದಯಸುಬ್ರಹ್ಮಣ್ಯ ಹಾಗೂ ಡಾ. ಯೋಹಿ ಅವರ ನೇತೃತ್ವದಲ್ಲಿ ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸವನ್ನು ನಡೆಸಲಾಯಿತು. ರೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಮತ್ತು ಧ್ಯಾನದ ಮಹತ್ವವನ್ನು ವಿವರಿಸಿ, ಸರಳವಾದ ಅಭ್ಯಾಸಗಳನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು.

ಇದರೊಂದಿಗೆ ರೋಗಿಗಳ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪೌಷ್ಟಿಕಾಂಶ ಹಾಗೂ ಆಹಾರ ಸೇವನೆಯ ಕುರಿತು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಯಿತು. ಸಮತೋಲಿತ ಆಹಾರ, ಅಗತ್ಯ ಪೌಷ್ಟಿಕಾಂಶಗಳ ಮಹತ್ವ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.

ಎನ್.ಎಸ್,ಎಸ್ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮವು ರೋಗಿಗಳಲ್ಲಿ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ ಪುನರ್ವಸತಿ ಪ್ರಕ್ರಿಯೆಯಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಸೂಕ್ತ ಪೌಷ್ಟಿಕಾಂಶದ ಮಹತ್ವವನ್ನು ಪರಿಚಯಿಸುವಲ್ಲಿ ಸಹಾಯಕವಾಯಿತು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya

ಕಕ್ಕಿಂಜೆ: ಕತ್ತರಿಗುಡ್ಡೆ ನಿವಾಸಿ ಉಮರ್ ನಿಧನ

Suddi Udaya

ಬೆಳ್ತಂಗಡಿ ತಾಲೂಕಿನ ಇಬ್ಬರು ಸಾಧಕರು ಹಾಗೂ ಎರಡು ಸೇವಾ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಶಿಶಿಲ: ದಿ. ಧರ್ಣಪ್ಪ ಗೌಡ ರವರ ಸ್ಮರಣಾರ್ಥ ಕೊರಗಪ್ಪ ಗೌಡರಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ದಿ| ಕಾಶ್ಮೀರಿ ಮೆನೇಜಸ್‌ ರವರಿಗೆ ಶ್ರದ್ಧಾಂಜಲಿ ಸಭೆ

Suddi Udaya
error: Content is protected !!