26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ರವರಿಂದ ಬೆಳ್ತಂಗಡಿ ಶ್ರೀ ಧ.ಆಂ.ಮಾ. ಶಾಲೆಯ ಜಿಲ್ಲಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಸ್ಕೌಟ್ ಗೈಡ್ಸ್ ಗಳಿಗೆ ಅಭಿನಂದನೆ


ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಮಂಜುನಾಥ ದಳದ ಜಿಲ್ಲಾ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಕಬ್ಸ್ , ಬುಲ್ ಬುಲ್ಸ್ , ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ವಿಧಾನ ಪರಿಷತ್ತು ಸದಸ್ಯ ಕೆ ಹರೀಶ್ ಕುಮಾರ್ ರವರು ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಮಾತನಾಡಿ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಸ್ಕೌಟ್ಸ್ ಗೈಡ್ ನ ಶಿಕ್ಷಣದಿಂದ ಪಡೆಯಬಹುದು. ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಣದಿಂದ ಮಕ್ಕಳಲ್ಲಿ ಆತ್ಮವಿಶ್ವಾಸವ, ಹಾಗೂ ನಾಯಕತ್ವ ಗುಣವು ಬೆಳೆಯುತ್ತದೆ ಎಂದು ಮಕ್ಕಳಿಗೆ ತಿಳಿಯಪಡಿಸಿದರು.


ಖಾವಂದರ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವು ಹಾಗೂ ಜೀವನದ ಮೌಲ್ಯಗಳು ದೊರೆಯುವುದು ಈ ಶಿಕ್ಷಣ ಸಂಸ್ಥೆಯ ವಿಶೇಷ ಎಂದು ತಿಳಿಯಪಡಿಸಿದರು.


ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದು, ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿಶ್ವದ ಅತ್ಯಂತ ಹಿರಿಯ ಸೇವಾ ಸಂಸ್ಥೆಯಾದ ಭಾರತ್ ಸ್ಕೌಟ್ಸ್ ಗೈಡ್ಸ್ ಗಳಿಂದ ಹಲವಾರು ಸಮಾಜಮುಖಿ ಹಾಗೂ ಮಕ್ಕಳ ಸರ್ವತೋಮುಖ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸುವಂತಹ ಕಾರ್ಯಗಳು ಈ ಸ್ಕೌಟ್ ಗೈಡ್ಸ್ ಗಳಿಂದ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಗುರಿ ಎಷ್ಟು ಮುಖ್ಯವೋ, ಅದನ್ನು ತಲುಪುವ ದಾರಿಯೂ ಅಷ್ಟೇ ಮುಖ್ಯ, ಶಿಕ್ಷಣ ಅಂದರೆ ಕೇವಲ ಅಂಕಗಳಿಗೆ ಸೀಮಿತವಾಗದೆ ಸರ್ವತೋಮುಖ ವ್ಯಕ್ತಿತ್ವ ವಿಕಸನ ಆಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಮಂಜುನಾಥ ಸಹಕರಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಸ್ಕೌಟ್ ಮತ್ತು ಗೈಡ್ ಸಂಯೋಜಕ ಶಿಕ್ಷಕಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಎಸ್ ಡಿ ಯಂ ಪಾಲಿಟೆಕ್ನಿಕ್ ನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂಎನ್.ಎಸ್.ಎಸ್ ಸಹಯೋಗದಲ್ಲಿ ಸಂಚಾರಿ ನಿಯಮಗಳ ಮಾಹಿತಿ

Suddi Udaya

ಪತ್ನಿಯನ್ನು ಬಸ್ಸು ಹತ್ತಿಸಿ, ಸ್ಕೂಟಿಯಲ್ಲಿ ಬರುತ್ತೇನೆಂದು ಹೇಳಿದ ಪತಿ: ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವ ಪತ್ತೆ:

Suddi Udaya

ಉಜಿರೆ ರತ್ನಮಾನಸದಲ್ಲಿ ಆಟಿದ ಅಟಿಲ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಹಾಗೂ ಗುರುವಾಯನಕೆರೆ ತಾಲೂಕು ಮಟ್ಟದ ಭಜನಾ ಪರಿಷತ್ ಸಭೆ

Suddi Udaya

ವೀಲ್‌ ಚೇರ್ ಮೇಲೆ ಕುಳಿತುಕೊಂಡು ಎಳನೀರು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗೆ ಆಸರೆಯಾದ ಧರ್ಮಸ್ಥಳ ಸಿ.ಎ ಬ್ಯಾಂಕ್

Suddi Udaya

ಬದನಾಜೆ ಶಾಲಾ ಅಮೃತಮಹೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!