24.2 C
ಪುತ್ತೂರು, ಬೆಳ್ತಂಗಡಿ
October 6, 2026
ಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಪಣಂಬೂರು ಬೀಚ್ ನಲ್ಲಿ ನಾಪತ್ತೆಯಾಗಿರುವ ಬೆಳ್ತಂಗಡಿ ರೆಂಕೆದಗುತ್ತು ನಿವಾಸಿ ಶ್ರೇಯಸ್‌: ಮುಂದುವರಿದ ಪತ್ತೆ ಕಾರ್ಯ

ಬೆಳ್ತಂಗಡಿ: ಬೆಳ್ತಂಗಡಿ ನಗರದ ರೆಂಕೆದಗುತ್ತು, ಕಸಬಾ ಗ್ರಾಮ ನಿವಾಸಿ ಶ್ರೇಯಸ್ ಎಸ್. ಕುಂಬಾರ (14 ವ) ಬಾಲಕ ಪಣಂಬೂರು ಬೀಚ್ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಬಾಲಕ‌ ಶ್ರೇಯಸ್ ಎಸ್. ತನ್ನ 4 ಜನ ಅಪ್ರಾಪ್ತ ಸ್ನೇಹಿತರ ಜೊತೆ ಅ.4 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ ತರಬೇತಿಗಾಗಿ ಮಂಗಳೂರಿಗೆ ಬಂದವರು, ತರಬೇತಿ ಮುಗಿದ ನಂತರ ಶ್ರೇಯಸ್ ಹಾಗೂ ಆತನ ಸ್ನೇಹಿತರು ಸ್ಟೇಟ್ ಬ್ಯಾಂಕ್ ನಿಂದ ಪಣಂಬೂರು ಬೀಚ್ ಗೆ ಬಂದು, ಸಂಜೆ ಸುಮಾರು 4:30 ರಿಂದ 5 ಗಂಟೆಗೆ ಕೂರಿಕಟ್ಟ ಸಮುದ್ರ ಕಿನಾರೆಗೆ ತೆರಳಿದ್ದು. ಸಂಜೆ ಸುಮಾರು 6 ಗಂಟೆಗೆ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಶ್ರೇಯಸ್ ನೀರಿನಲ್ಲಿ ಮುಳುಗಿ, ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ.

ಈತನು ಕಾಣೆಯಾದ ವಿಷಯವನ್ನು ಆತನ ಅಪ್ರಾಪ್ತ ಸ್ನೇಹಿತರು ಭಯಗೊಂಡು ಶ್ರೇಯಸ್ ನ ಮನೆಯವರಿಗೆ ತಿಳಿಸದೇ ಇದ್ದು, ಅ.5 ರಂದು ಬೆಳಿಗ್ಗೆ ಶ್ರೇಯಸ್ ಮನೆಯವರಿಗೆ ಮಾಹಿತಿ ತಿಳಿಸಿದ್ದು, ಅದರಂತೆ ಕಾಣೆಯಾದ ಬಾಲಕನ ತಂದೆ ಸೇಷಪ್ಪ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026 ಕಲಂ; ನಾಪತ್ತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾಣೆಯಾದ ಬಾಲಕನ ಪತ್ತೆಯ ಬಗ್ಗೆ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಮತ್ತು ಸಮುದ್ರ ವ್ಯಾಪ್ತಿ ಹೊಂದಿರುವ ಠಾಣೆಗಳಿಗೆ ಮಾಹಿತಿ ನೀಡಿ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ ಹಾಗೂ ಲೈಫ್ ಗಾರ್ಡ್, ಮುಳುಗು ತಜ್ಞರು ಮತ್ತು ಸ್ಥಳೀಯ ಮೀನುಗಾರರ ಮೂಲಕ ಪತ್ತೆ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ.ತಿಳಿಸಿದೆ.

Related posts

ಓಡಿಲ್ನಾಳ ನಿವಾಸಿ ಲಕ್ಷ್ಮಿ ನಿಧನ

Suddi Udaya

ಬಿ.ಸಿ.ರೋಡಿನಲ್ಲಿ ಯುವತಿಯ ಬರ್ಬರ ಹತ್ಯೆ ಖಂಡನೀಯ : ರಕ್ಷಿತ್ ಶಿವರಾಂ

Suddi Udaya

ಸೆ.6-7-8 : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

Suddi Udaya

ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಅವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಆರಾಮದಾಯಕ ಸರತಿ ಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ ಮತ್ತು ಜ್ಞಾನದೀಪ ಶಿಕ್ಷಣ ಕಾರ್ಯಕ್ರಮಗಳ ಉದ್ಘಾಟನೆ

Suddi Udaya

ಎ.9: ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ

Suddi Udaya
error: Content is protected !!