24.2 C
ಪುತ್ತೂರು, ಬೆಳ್ತಂಗಡಿ
October 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

7 ಮಂದಿ ಮತದಾರರ ಹೆಸರಿನಲ್ಲಿ ಅನುಮತಿಯಿಲ್ಲದೆ ಫಾರಂ-7 ಅರ್ಜಿ ಸಲ್ಲಿಕೆ ಆರೋಪ; ಸಮಗ್ರ ತನಿಖೆಗೆ ಎಸ್.ಡಿ.ಪಿ.ಐ. ಆಗ್ರಹ

ಬೆಳ್ತಂಗಡಿ : SIR ಪ್ರಕ್ರಿಯೆಯ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಜಯನಗರ, ವಾರ್ಡ್ ಸಂಖ್ಯೆ–122ಕ್ಕೆ ಸಂಬಂಧಿಸಿದಂತೆ 7 ಮಂದಿ ಮತದಾರರ ಅನುಮತಿಯಿಲ್ಲದೆ ಅವರ ಹೆಸರಿನಲ್ಲಿ Form-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ತಹಸೀಲ್ದಾರರಿಗೆ ದೂರು ಸಲ್ಲಿಸಲಾಯಿತು.

ಖಾದ್ರಿ ಬಿ, ಫೆಲಿಕ್ಸ್ ಡಿಸೋಜ, ರೋಷನ್, ಡಲ್ವಿನ್ ಬಿಜು, ಅಬ್ದುಲ್ ಮಜೀದ್ ಬಂಗಾಡಿ, ಹಂಝ ಇರ್ಫಾನ್ ಬಿ ಹಾಗೂ ನಿಜಾಮುದ್ದಿನ್ ಅವರ ಹೆಸರಿನಲ್ಲಿ Form-7 ಅರ್ಜಿಗಳು ಸಲ್ಲಿಕೆಯಾಗಿದ್ದು, ತಾವು ಯಾವುದೇ ಅರ್ಜಿ ಅಥವಾ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ಸಂಬಂಧಪಟ್ಟ ಮತದಾರರು ತಿಳಿಸಿರುವುದಾಗಿ SDPI ದೂರಿನಲ್ಲಿ ಉಲ್ಲೇಖಿಸಿದೆ.

ಅರ್ಜಿಗಳ ಮೂಲ ದಾಖಲೆಗಳು, ಸಹಿ ಹಾಗೂ ವೈಯಕ್ತಿಕ ವಿವರಗಳ ಸತ್ಯಾಸತ್ಯತೆ ಪರಿಶೀಲಿಸಬೇಕು. ಅರ್ಜಿಗಳನ್ನು ಯಾರು ಸಲ್ಲಿಸಿದ್ದಾರೆ ಮತ್ತು ಯಾರ ಮೂಲಕ ಸಲ್ಲಿಸಲಾಗಿದೆ ಎಂಬುದನ್ನು ತನಿಖೆ ನಡೆಸಬೇಕು. ಇದೇ ವೇಳೆ, BLA ಆಗಿ ಕಾರ್ಯನಿರ್ವಹಿಸುತ್ತಿರುವ ಪದ್ಮ ಕುಮಾರ್ ಕುಲಾಲ್ ಸೇರಿದಂತೆ ಸಂಬಂಧಪಟ್ಟವರ ಪಾತ್ರವಿದೆಯೇ ಎಂಬುದನ್ನು ದಾಖಲೆಗಳು ಹಾಗೂ ಪುರಾವೆಗಳ ಆಧಾರದ ಮೇಲೆ ಪರಿಶೀಲಿಸಬೇಕು ಎಂದು SDPI ಆಗ್ರಹಿಸಿದೆ.

ತನಿಖೆ ಪೂರ್ಣಗೊಳ್ಳುವವರೆಗೆ ವಿವಾದಿತ Form-7 ಅರ್ಜಿಗಳ ಆಧಾರದ ಮೇಲೆ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸಂಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಇದೇ ರೀತಿಯಾಗಿ ಇತರ ಮತದಾರರ ಹೆಸರಿನಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ SDPI ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, SDTU ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಜಿ.ಕೆ., ಕ್ಷೇತ್ರ ಕಾರ್ಯದರ್ಶಿ ರಶೀದ್, ಸಮಿತಿ ಸದಸ್ಯ ಮುಸ್ತಫಾ ಜಿ.ಕೆ., ಲಾಯಿಲ ಬ್ಲಾಕ್ ಕಾರ್ಯದರ್ಶಿ ಸಾದಿಕ್ ಲಾಯಿಲ, ನ್ಯಾಯವಾದಿ ಅಸ್ಮಾ ಬೆಳ್ತಂಗಡಿ, ಖಾದ್ರಿ ಬಿ, ನಿಜಾಮುದ್ದೀನ್, ಸ್ಥಳೀಯರಾದ ಉಮರ್, ಅಬ್ಬಾಸ್, ಇನಾಝ್, ಹಮೀದ್ ಹಾಗೂ ಸಂತ್ರಸ್ತ ಮತದಾರರು ಉಪಸ್ಥಿತರಿದ್ದರು.

Related posts

ಕ್ಯಾಂಪ್ಕೊ ನಿಯಮಿತ ಮಂಗಳೂರು “ಸಾಂತ್ವನ” ಯೋಜನೆಯಡಿ ಕನ್ನಾಜೆಯ ಬೆನೆಡಿಕ್ಟ್ ವೇಗಸ್ ರಿಗೆ ವೈದ್ಯಕೀಯ ನೆರವು

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಆಕ್ಸ್ಫರ್ಡ್ ಅಡ್ವಾಂಟೇಜ್ ಪೆಡಗೋಜಿ” ಕಾರ್ಯಾಗಾರ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬಂದಾರು: ಮೈರೋಳ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆ

Suddi Udaya
error: Content is protected !!