30.9 C
ಪುತ್ತೂರು, ಬೆಳ್ತಂಗಡಿ
October 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳೆ ವಿಮೆ ಬಗ್ಗೆ ರೈತರ ಪರವಾಗಿ ಗಮನಹರಿಸಬೇಕಿದೆ: ಮೋಹನ್ ಗೌಡ ಕಲ್ಮಂಜ

ಬೆಳ್ತಂಗಡಿ: ಈ ವರ್ಷ ರೈತರಿಗೆ ಬೆಳೆ ವಿಮೆ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತಿರುವುದು ಬೇಸರದ ಸಂಗತಿ. ರೈತರು ಕಷ್ಟದ ಸಮಯದಲ್ಲಿ ನೆರವಾಗಲಿ ಎಂಬ ಉದ್ದೇಶದಿಂದಲೇ ಪ್ರತಿವರ್ಷ ವಿಮೆ ಪ್ರೀಮಿಯಂ ಪಾವತಿಸುತ್ತಾರೆ. ಆದರೆ ಬೆಳೆ ನಷ್ಟವಾದ ಸಂದರ್ಭದಲ್ಲಿ ನಿರೀಕ್ಷಿತ ಪ್ರಮಾಣದ ಪರಿಹಾರ ದೊರೆಯದಿದ್ದರೆ ರೈತರಿಗೆ ನಿರಾಸೆಯಾಗುತ್ತದೆ ಎಂದು ಸಾವಯವ ಕೃಷಿ ಯೋಜನೆಯ ಆಡಳಿತ ನಿರ್ದೇಶಕ ಮೋಹನ್ ಗೌಡ ಕಲ್ಮಂಜ ತಿಳಿಸಿದ್ದಾರೆ.

ಮಳೆ ಆಧಾರದಲ್ಲಿ ವಿಮೆ ನೀಡುವುದರ ಜೊತೆಗೆ ರೈತರ ನೈಜ ಬೆಳೆ ನಷ್ಟವನ್ನೂ ಪರಿಗಣಿಸಿ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಅಗತ್ಯವಿದೆ. ರೈತರು ಗೊಬ್ಬರ, ಔಷಧಿ ಸೇರಿದಂತೆ ಕೃಷಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡುತ್ತಾರೆ. ಆದ್ದರಿಂದ ಅವರು ಕಟ್ಟಿದ ವಿಮಾ ಪ್ರೀಮಿಯಂಗೆ ಅನುಗುಣವಾಗಿ ಸಮರ್ಪಕ ವಿಮಾ ರಕ್ಷಣೆ ದೊರೆಯಬೇಕು.

ಈ ಬಗ್ಗೆ ರೈತ ಸಂಘಟನೆಗಳು, ಕೃಷಿ ಸಚಿವರು, ಶಾಸಕರು ಹಾಗೂ ಸಂಸದರು ಗಮನಹರಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ನ್ಯಾಯಯುತ ಬೆಳೆ ವಿಮೆ ದೊರೆಯುವಂತೆ ವ್ಯವಸ್ಥೆ ರೂಪಿಸುವುದು ಅಗತ್ಯ ಎಂದು ಅವರು ತಿಳಿಸಿದರು.

Related posts

ಕೊಕ್ಕಡ : ಸಾಧಕ ಡೇವಿಡ್ ಬೈಜು ರವರ ಮನೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ಚಂದರ್ ಶಾಜಿ ಮ್ಯಾಥ್ಯೂ ಭೇಟಿ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬೆಳ್ತಂಗಡಿ: ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಶಿಬಿರ

Suddi Udaya

ಕುಂಭಶ್ರೀ ಆಂ.ಮಾ. ಶಾಲೆಯ ಸಂಸ್ಥಾಪಕ ಗಿರೀಶ್ ಕೆ ಎಚ್ ರವರಿಂದ ಉಚಿತ ಪುಸ್ತಕ ವಿತರಣೆ

Suddi Udaya

ಬಳಂಜ:ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಶರತ್ ಅಂಚನ್ ಆಯ್ಕೆ

Suddi Udaya
error: Content is protected !!