ಅರಸಿನಮಕ್ಕಿ : ಇಲ್ಲಿಯ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವನದುರ್ಗ ಸಂಜೀವಿನಿ ವಾರ್ಡ್ ನಲ್ಲಿ ಪೋಷನ್ ಪಖ್ವಾಡ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮವು ವಾರ್ಡ್ ಕಾರ್ಯದರ್ಶಿ ರೇಷ್ಮಾರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕಿ ವೀಣಾಶ್ರೀ ರವರು ಸಂಜೀವಿನಿ ಒಕ್ಕೂಟದಲ್ಲಿ ಪೋಷನ್ ಪಖ್ವಾಡ ಅಭಿಯಾನ ಮಾಡಲು ಇರುವುದು ಆದಷ್ಟು ಹೊರಗಿನ ಆಹಾರ ಸೇವಿಸದೆ ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸುವುದು ಹಾಗೂ ಲಿಂಗತ್ವ ಮತ್ತು FNHW LCRP ಯ ಬಗ್ಗೆ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅವರು ಪೋಷನ್ ಕಾರ್ಯಕ್ರಮ ವು ಉತ್ತಮ ರೀತಿಯ ಕಾರ್ಯಕ್ರಮವಾಗಿದ್ದು ಪೌಷ್ಟಿಕ ಆಹಾರ ತಯಾರಿಸಿಕೊಂಡು ಬಂದ ಸದಸ್ಯರಿಗೆ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾದ ಪಾರ್ವತಿ ರವರು ನುಗ್ಗೆ ಸೊಪ್ಪಿನಿಂದ ಸಿಗುವ ಪೋಷಕಾಂಶ, ಮತ್ತು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಸವಿವರವಾಗಿ ತಿಳಿಸಿದರು. ಎಲ್ಲಾ ಸಂಜೀವಿನಿ ಸಂಘದ ಸದಸ್ಯರು ಮನೆಯಲ್ಲಿಯೇ ತಯಾರಿಸಿದ 40 ಬಗೆಯ ಪೌಷ್ಟಿಕ ಆಹಾರವನ್ನು ತಯಾರಿಸಿ ತಂದಿದ್ದರು.
ಹತ್ಯಡ್ಕ ಗ್ರಾಮ ದ ಪ್ರಾಥಮಿಕ ಅರೋಗ್ಯ ಕೇಂದ್ರ ದ ಆಶಾಕಾರ್ಯ ಕರ್ತೆ ಪಾರ್ವತಿ ಹಾಗೂ ವಾರ್ಡ್ ನ ಕೋಶಾಧಿಕಾರಿ ಸರೋಜ, ಹೇಮಲತಾ, ಕೃಷಿ ಸಖಿ ಹರೀನಾಕ್ಷಿ, ಬಿ.ಸಿ ಸಖಿ ರೇವತಿ, ವಿದ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೀತಾ ಕಾರ್ಯಕ್ರಮ ನಿರೂಪಿಸಿ, ಅಮಿತ ಸ್ವಾಗತಿಸಿ, ಪಶುಸಖಿ ವೇದಾವತಿ ಧನ್ಯವಾದವಿತ್ತರು.













