25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಿವ್ಯಜ್ಯೋತಿ ಆಂ.ಮಾ. ಶಾಲೆಯಲ್ಲಿ ಜೂನಿಯ‌ರ್ ಜೆಸಿ ಘಟಕದ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ

ಕೊಕ್ಕಡ: ಕಳೆಂಜ ಗ್ರಾಮದ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಜೆಸಿಐ ಕೊಕ್ಕಡ ಕಪಿಲ ಹಾಗೂ ಶಾಲೆಯ ಜಂಟಿ ಸಹಯೋಗದಲ್ಲಿ ಜೂನಿಯ‌ರ್ ಜೆಸಿ ಘಟಕದ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.ಜೂನಿಯರ್ ಜೆಸಿ ಘಟಕದ ಅಧ್ಯಕ್ಷೆ ಆದ್ಯ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಜೆಸಿಐ ವಲಯ 15ರ ಫಲ್ಗುಣಿ ಪ್ರಾಂತ್ಯ ‘ಡಿ’ ಉಪಾಧ್ಯಕ್ಷ ಕಾಶಿನಾಥ್ ಗೋಗಟೆ ಮಾತನಾಡಿ, ಜೂನಿಯರ್ ಸಿ ಘಟಕದ ಕಾರ್ಯವ್ಯಾಪ್ತಿ, ವಿದ್ಯಾರ್ಥಿಗಳಿಗೆ ನೀಡುವ ತರಬೇತಿ ಹಾಗೂ ಜೆಸಿಐ ಮೂಲಕ ದೊರೆಯುವ ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಲಿಸ್ನಾ ಮ್ಯಾಥ್ಯೂ ಮಾತನಾಡಿ, ಜೆಸಿಐ ನಡೆಸುತ್ತಿರುವ ಸಮಾಜಮುಖಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ’21ನೇ ಶತಮಾನದ ಜೀವನ ಕೌಶಲ್ಯಗಳು’ ವಿಷಯದ ಕುರಿತು ಜೆಸಿಐ ವಲಯ 15ರ ತರಬೇತಿ ನಿರ್ದೇಶಕ ಜೆಸಿಐ ಸೆನೆಟರ್ ದೀಪಕ್ ರಾಜ್ ತರಬೇತಿ ನೀಡಿದರು. ವಿದ್ಯಾರ್ಥಿಗಳು ಅಂಕ ಗಳಿಸುವುದನ್ನಷ್ಟೇ ಗುರಿಯಾಗಿಸಿಕೊಳ್ಳದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಪ್ರಶ್ನಿಸುವ ಮನೋಭಾವ, ಅವಕಾಶಗಳ ಸದ್ಬಳಕೆ ಹಾಗೂ ಆದ್ಯತೆಗಳನ್ನು ಗುರುತಿಸುವುದು ಸೇರಿದಂತೆ ವಿವಿಧ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ಜೆಸಿಐ ಕೊಕ್ಕಡ ಕಪಿಲದ ನಿಕಟಪೂರ್ವ ಅಧ್ಯಕ್ಷೆ ಜೆಸಿ ಎಚ್‌ಜಿಎಫ್ ಡಾ. ಶೋಭಾ ಪಿ., ಅಧ್ಯಕ್ಷ ಜೆಸಿ ರಿತೇಶ್ ಎಂ. ಸ್ಟ್ರೆಲ್ಲಾ, ಕಾರ್ಯದರ್ಶಿ ಜಿಎಫ್‌ಎಂ ಜೋಯಲ್ ಪಿರೇರಾ, ಯೋಜನಾ ನಿರ್ದೇಶಕ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಜೈನ್ ಮತ್ತು ಜೂನಿಯರ್ ಜೆಸಿ ಘಟಕದ ಕಾರ್ಯದರ್ಶಿ ದೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನ್ಸಿಲ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆಜಿಸಿ ದಕ್ಷ ಜೈನ್ ಜೇಸಿವಾಣಿ ವಾಚಿಸಿದರು. ಅನ್ವಿತ, ಧನುಷ್ ವಿ.ಎಚ್. ಹಾಗೂ ಸಂಜನಾ ಅತಿಥಿಗಳನ್ನು ಪರಿಚಯಿಸಿದರು. ಸಾಧಿ ಘಟಕಕ್ಕೆ ಹೊಸದಾಗಿ ಸೇರಿದ ಸದಸ್ಯರ ಪರಿಚಯ ಮಾಡಿಕೊಟ್ಟರು. ಅನುಷಾ ವಿ.ಟಿ., ಕೃಪಾ ಹಾಗೂ ಅಶ್ವಿತಿ ರೈ ತರಬೇತಿ ಕುರಿತು ಅನಿಸಿಕೆ ಹಂಚಿಕೊಂಡರು. ಆದ್ಯ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು.
ಜೆಸಿಐ ಕೊಕ್ಕಡ ಕಪಿಲದ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Related posts

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

Suddi Udaya

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ದಾಳಿ

Suddi Udaya

ಲಾಯಿಲ: ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

Suddi Udaya

ಅಕ್ಷಯ ಕೆರಿಯರ್ ಅಕಾಡೆಮಿಯ “ಡಿಪ್ಲೊಮ ಇನ್ ಏವಿಯೇಷನ್” ಶಾರ್ಟ್ ಟಾರ್ಮ್ ಕೋರ್ಸ್ ನ ಹೊಸ ಬ್ಯಾಚ್ ಪ್ರಾರಂಭ

Suddi Udaya

ಕೊಯ್ಯೂರಿನಲ್ಲಿ ಕ.ಸಾ.ಪ ತಾಲೂಕು ಸಮ್ಮೇಳನ; ಡಾ. ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 44ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭ

Suddi Udaya
error: Content is protected !!