ಬೆಳ್ತಂಗಡಿ: ಕ್ಲಿನಿಕ್‌ಗೆ ಕಿಡಿಗೇಡಿಗಳಿಂದ ಬೆಂಕಿ ದುರಂತದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ತೀವ್ರ ಆಘಾತವಾಗಿದೆ. ನಾವೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಹೆಸರನ್ನು ಇಡೀ ರಾಷ್ಟ್ರಮಟ್ಟದಲ್ಲಿ ಹೆಮ್ಮೆಯಿಂದ ಗುರುತಿಸುವಂತೆ ಮಾಡಿದ ಡಾ. ಪ್ರದೀಪ್ ಅವರ ಕಾರ್ಯಕ್ಷೇತ್ರಕ್ಕೆ ಈ ರೀತಿಯಾಗಿ ಹಾನಿ ಉಂಟಾಗಿರುವುದು ಅತ್ಯಂತ ಖಂಡನೀಯ.
ನಮ್ಮ ಮುಗ್ಧ ಮಕ್ಕಳಿಗೆ ಸಂಸ್ಕಾರದ ಹಾದಿ ತೋರಿಸಿ, ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಪಠನವನ್ನು ಕಲಿಸಿ, ಪ್ರತಿಯೊಂದು ಮನೆಯಲ್ಲೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಿದ ಅವರ ನಿಸ್ವಾರ್ಥ ಸೇವೆ ಅನನ್ಯವಾದದ್ದು.
ಈ ದುಷ್ಟ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಧಾರ್ಮಿಕ ಮುಖಂಡ ಡಿ. ಕಿರಣ್ ಚಂದ್ರ ಪುಷ್ಪಗಿರಿ ತಿಳಿಸಿದ್ದಾರೆ.
ಈ ಘಟನೆಯ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತೇನೆ. ಡಾ. ಪ್ರದೀಪ್ , ನೀವು ಹಚ್ಚಿದ ಸಂಸ್ಕಾರ ಮತ್ತು ಸೇವೆಯ ದೀಪವನ್ನು ಆರಿಸಲು ಯಾವ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಇಡೀ ಊರಿನ ಜನತೆ ಮತ್ತು ಬೆಳ್ತಂಗಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕನ ಬೆಂಬಲ ಸದಾ ನಿಮ್ಮೊಂದಿಗಿದೆ. ಈ ಸಂಕಷ್ಟದಿಂದ ನೀವು ಧೈರ್ಯವಾಗಿ ಹೊರಬಂದು, ಮತ್ತೆ ಅದೇ ಆತ್ಮವಿಶ್ವಾಸದಿಂದ ನಿಮ್ಮ ಸೇವಾ ಕಾರ್ಯವನ್ನು ಮುಂದುವರಿಸಬೇಕಾಗಿ ವಿನಂತಿಸುತ್ತೇನೆ.













